Mysore
28
scattered clouds

Social Media

ಶುಕ್ರವಾರ, 23 ಜನವರಿ 2026
Light
Dark

ನಾನು ಬದುಕಿದ್ದೆ ಹೆಚ್ಚು, 3-4 ಬಾರಿ ನಾನು ಹೋಗಿ ಬಿಡಬೇಕಿತ್ತು : ಕಾಂತಾರ ಜರ್ನಿ ಬಿಚ್ಚಿಟ್ಟ ರಿಷಾಬ್‌

ಬೆಂಗಳೂರು : ತೆರೆಗೆ ಸಿದ್ಧವಾಗಿರುವ ಕಾಂತಾರ 1 ಚಿತ್ರದ ಟ್ರೇಲರ್‌ ರಿಲೀಸ್‌ ಆಗಿ ಹಿಟ್‌ ಆಗಿದೆ. ನಟ ನಿರ್ದೇಶಕ ರಿಷಬ್‌ ಕೂಡಾ ಖುಷಿಯಾಗಿದ್ದಾರೆ. ಇದೇ ಖುಷಿಯಲ್ಲಿ ಸಿನಿಮಾ ಕುರಿತಾದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಎದುರಿಸಿದ ಅಡೆತಡೆಗಳನ್ನು ವಿವರಿಸಿದ್ದಾರೆ.

ಕಾಂತಾರ ಅದೊಂದು ಅದ್ಭುತ ಜರ್ನಿ. ಈ ಸಿನಿಮಾ ಸಾಕಷ್ಟು ಅಡೆ ತಡೆಗಳನ್ನು ಎದುರಿಸಿ ಈಗ ಬಿಡುಗಡೆಗೆ ಬಂದಿದೆ. ಈ ಸಿನಿಮಾ ಮುಗಿಯೋದೇ ಕಷ್ಟ ಅನ್ನೋ ತರಹ ಇತ್ತು. ಪ್ರಗತಿ ಈ ಚಿತ್ರಕ್ಕಾಗಿ ಸಾಕಷ್ಟು ಹರಕೆ ಕಟ್ಟಿಕೊಂಡಳು. ಕೆಲವು ದೃಶ್ಯಗಳ ಚಿತ್ರೀಕರಣಕ್ಕೆ ಅವಳನ್ನು ಬರೋದು ಬೇಡ ಎನ್ನುತ್ತಿದ್ದೆ. 15 ದಿನದಿಂದ ಬೆಂಗಳೂರಿನಲ್ಲಿ ಇದ್ದೇನೆ. ಜನ ಹೇಗಿದ್ದೀರ ಎಂದು ಕೇಳಿದರೆ ಅಳು ಬರುತ್ತದೆ. ಇದೊಂದು ಎಮೋಶನಲ್‌ ಜರ್ನಿ. ಸಿನಿಮಾ ಪ್ರೀತಿಯಿಂದ ಕೆಲಸ ಮಾಡಿದ್ದೇವೆ. ಕಳೆದ 3 ತಿಂಗಳಿನಿಂದ ದಿನಕ್ಕೆ 3 ಗಂಟೆ ನಿದ್ದೆ ಮಾಡಿದರೆ ಹೆಚ್ಚು. ಇದು ರಿಷಬ್‌ ಶೆಟ್ಟಿ ಸಿನಿಮಾ ಎಂದು ಕೆಲಸ ಮಾಡಿಲ್ಲ. ನಮ್ಮ ಸಿನಿಮಾ ಎಂದು ಮಾಡಿದ್ದಾರೆ. ಒಟ್ಟೊಟ್ಟಿಗೆ 36 ಗಂಟೆ ಕೆಲಸ ಮಾಡಿದ್ದೂ ಇದೆ ಎಂದು ಸ್ಮರಿಸಿಕೊಂಡರು.

ಇದನ್ನೂ ಓದಿ :-ಸಾಧ‌ಕರನ್ನು ಗುರುತಿಸಿ ಸನ್ಮಾನಿಸುವುದೇ ದೊಡ್ಡ ಸಾಧನೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಇದು ನಾನು ಬಾಲ್ಯದಲ್ಲಿ ಕೇಳಿದ ಜನಪದ, ಪಾಡ್ದನದ ಮೂಲ. ಅದನ್ನಿಟ್ಟುಕೊಂಡು ಹಾಗೂ ಮೂಲ ಕಥೆಯನ್ನಿಟ್ಟುಕೊಂಡು ಅದನ್ನು ಆಯಾ ಕ್ಷೇತ್ರದ ತಜ್ಞರಿಂದ ಡೆವಲಪ್‌ ಮಾಡಿಸಿದ್ದೇವೆ. ಸಾಕಷ್ಟು ಇಂಪ್ರೂವ್‌ ಮಾಡುತ್ತಾ ಸಿನಿಮಾ ಮಾಡಿದ್ದೇವೆ. ನಾನು ನಿರ್ಮಾಪಕರಿಗೆ 15ಕ್ಕೂ ಹೆಚ್ಚು ಬಾರಿ ನರೇಶನ್‌ ಕೊಟ್ಟಿದ್ದೇನೆ. ಕೊನೇ ಕ್ಷಣದವರೆಗೆ ಕೆಲಸ ಮಾಡುತ್ತಲೇ ಇದ್ದೇವೆ ಎಂದಿದ್ದಾರೆ.

ಕಾಂತಾರ ಅವಘಡಗಳ ಬಗ್ಗೆ ಹೇಳಿದ್ದೇನು?
ಇವತ್ತು ನಾನು ಬದುಕಿದ್ದೇನೆ ಎಂದರೆ ಅದಕ್ಕೆ ಕಾರಣ ದೈವ. ಲೆಕ್ಕ ಹಾಕಿದರೆ ನಾನು ಮೂರು- ನಾಲ್ಕು ಸಾರಿ ಹೋಗಿ ಬಿಡಬೇಕಿತ್ತು. ಆದರೆ, ಇವತ್ತು ನಿಮ್ಮಮುಂದೆ ನಿಂತು ಮಾತನಾಡುತ್ತಿದ್ದೇನೆ ಎಂದರೆ ಅದಕ್ಕೆ ಕಾರಣ ನಾವು ನಂಬಿರುವ ದೈವ. ಆ ದೈವವೇ ನಮ್ಮ ತಂಡಕ್ಕೆ ಆಶೀರ್ವಾದ ಮಾಡಿದೆ.

ಬುಹುತೇಕ ಶೂಟಿಂಗ್‌ ಕುಂದಾಪುರದಲ್ಲೇ
ಬಹುತೇಕ ಎಲ್ಲಾ ಕಲಾವಿದರು ಕುಂದಾಪುರಕ್ಕೆ ಬಂದಿದ್ದರು. ಅದೊಂದು ಮಿನಿ ಫಿಲಂ ಸಿಟಿ ತರಹ ಆಗೋಗಿತ್ತು. ಇನ್ನು ಎಷ್ಟು ಸಿನಿಮಾ ಬೇಕಾದರೂ ಶೂಟಿಂಗ್‌ ಮಾಡಬಹುದು ಎಂದಿದ್ದಾರೆ.

Tags:
error: Content is protected !!