Mysore
28
light rain

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಕಾಪಿರೈಟ್‌ ಉಲ್ಲಂಘನೆ ಆರೋಪ ಪ್ರಕರಣ: ನಟ ರಕ್ಷಿತ್‌ ಶೆಟ್ಟಿಗೆ 25 ಲಕ್ಷ ರೂ ದಂಡ ವಿಧಿಸಿ ಹೈಕೋರ್ಟ್‌ ಆದೇಶ

ಬೆಂಗಳೂರು: ಕಾಪಿ ರೈಟ್‌ ಉಲ್ಲಂಘನೆ ಆರೋಪ ಪ್ರಕರಣದಲ್ಲಿ ನಟ ರಕ್ಷಿತ್‌ ಶೆಟ್ಟಿ ಅವರಿಗೆ ದೆಹಲಿ ಹೈಕೋರ್ಟ್‌ 25 ಲಕ್ಷ ದಂಡ ವಿಧಿಸಿದೆ.

ಬ್ಯಾಚುಲರ್‌ ಪಾರ್ಟಿ ಚಿತ್ರದಲ್ಲಿ ಅನುಮತಿ ಇಲ್ಲದೇ ಎರಡು ಹಾಡುಗಳನ್ನು ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಿತ್‌ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್‌ಗೆ 25 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ.

ವಿಚಾರಣೆಯ ವೇಳೆ ರಕ್ಷಿತ್‌ ಶೆಟ್ಟಿ ಮತ್ತು ತಂಡ ಸಮರ್ಥನೆಯಾಗಿ ಅನೇಕ ವಾದಗಳನ್ನು ಮಂಡಿಸಿದೆ. ನ್ಯಾಯ ಎಲ್ಲಿದೆ ಹಾಡನ್ನು ಕೇವಲ 7 ಸೆಕೆಂಡ್‌, ಒಮ್ಮೆ ನಿನ್ನನ್ನು ಹಾಡನ್ನು 31 ಸೆಕೆಂಡ್‌ ಮಾತ್ರ ಬಳಕೆ ಮಾಡಲಾಗಿದ್ದು, ಇದು ಅತಿ ಕಡಿಮೆ ಅವಧಿ ಆಗಿರುವುದರಿಂದ ಹಕ್ಕುಸ್ವಾಮ್ಯ ಉಲ್ಲಂಘನೆ ಆಗುವುದಿಲ್ಲ ಎಂದು ವಾದಿಸಿತ್ತು.

ಈ ವಾದ ತಿರಸ್ಕರಿಸಿದ ದೆಹಲಿ ಹೈಕೋರ್ಟ್‌ ಹಣಕಾಸಿನ ವಿಚಾರದಲ್ಲಿ ಕಾಪಿರೈಟ್‌ ಉಲ್ಲಂಘಿಸಿದ್ದಕ್ಕಾಗಿ 20 ಲಕ್ಷ ರೂ, ಕೋರ್ಟ್‌ ಆದೇಶ ಪಾಲನೆ ವಿಳಂಬಕ್ಕೆ 5 ಲಕ್ಷ ರೂ ಸೇರಿ ಒಟ್ಟು 25 ಲಕ್ಷ ರೂ ದಂಡ ವಿಧಿಸಿದೆ.

Tags:
error: Content is protected !!