ಬೆಂಗಳೂರು: ಹೀರೋಗಳಂತೆಯೇ ಮಹಿಳೆಯರಿಗೂ ಸಂಭಾವನೆ ವಿಚಾರದಲ್ಲಿ ಸಮಾನ ಆದ್ಯತೆ ನೀಡಬೇಕು ಎಂದು ಸ್ಯಾಂಡಲ್‌ವುಡ್ ಕ್ವೀನ್ ರಮ್ಯ ಹೇಳಿದ್ದಾರೆ.
ನಗರದಲ್ಲಿ ನಡೆದ 16ನೇ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ಹೀರೋಗಳ ಸಮವಾಗಿ ಹೀರೋಯಿನ್‌ಗಳು ಕೂಡ ಕೆಲಸ ಮಾಡುತ್ತಾರೆ. ಆದರೆ, ಇಬ್ಬರ ನಡುವಿನ ಸಂಭಾವನೆ ವಿಚಾರದಲ್ಲಿ ಬಹಳಷ್ಟು ವ್ಯತ್ಯಾಸವಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಜೊತೆ ಆಕ್ಟ್ ಮಾಡಿದ ಹೊಸಬರು ಈಗ ಸೂಪರ್‌ಸ್ಟಾರ್ಸ್ ಆಗಿದ್ದಾರೆ. ಆಗ ನನಗಿಂತ ಕಡಿಮೆ ಸಂಭಾವನೆ ಪಡೆಯುತ್ತಿದ್ದ ನಟರು, ಒಂದು ಸಿನಿಮಾದ ನಂತರ ನನಗಿಂತ 50 ರಷ್ಟು ಹೆಚ್ಚಿನ ಸಂಭಾವನೆ ಪಡೆಯುತಿದ್ದಾರೆ ಎಂದರು.
ಹೀರೊ ಜೊತೆ ಒಟ್ಟಿಗೆ ಕೆಲಸ ಮಾಡಿ ಹಿಟ್ ಕೊಟ್ಟಿರುತ್ತೇವೆ. ಅವರಿಗೆ ಕೋಟಿ ಕೋಟಿ ಸಂಭಾವನೆ ಇದ್ದರೆ, ನಮಗೆ ಕೋಟಿ ತಲುಪುವುದಕ್ಕೂ ಕಷ್ಟಪಡುತ್ತಿದ್ದೇವೆ. ಇದು ಒಂದು ಕ್ಷೇತ್ರದಲ್ಲಿ ಅಲ್ಲ ಎಲ್ಲಾ ಕ್ಷೇತ್ರದಲ್ಲೂ ಇದೆ ರೀತಿಯ ಸಮಸ್ಯೆಯಿದೆ. ಮಹಿಳಾ ಕಲಾವಿದರಿಗೂ ಆದ್ಯತೆ ನೀಡಿ ಎಂದು ಅಸಮಾಧಾನ ಹೊರಹಾಕಿದರು.





