ನಟಿ ಹರ್ಷಿಕಾ ಪೂಣಚ್ಛ ತಾಯಿಯಾಗುತ್ತಿರುವ ವಿಷಯ ಗೊತ್ತೇ ಇದೆ. ಕೆಲವು ದಿನಗಳ ಹಿಂದೆಯೇ ಅವರು ಎರಡೆರಡು ಬಾರಿ ಫೋಟೋ ಶೂಟ್ ಮಾಡಿಸಿಕೊಂಡು ಸುದ್ದಿ ಮಾಡಿದ್ದರು. ಇತ್ತೀಚೆಗೆ ನಡೆದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅವರಿಗೆ ಸೀಮಂತ ಶಾಸ್ತ್ರ ಸಹ ಮಾಡಿದ್ದರು.
ಇನ್ನು ಕೆಲವೇ ದಿನಗಳಲ್ಲಿ ಮಗುವಿನ ಆಗಮನದ ಖುಷಿಯಲ್ಲಿರುವ ಹರ್ಷಿಕಾಗೆ ಗಣೇಶ್ ಹಾಗೂ ಶಿಲ್ಪಾ ಗಣೇಶ್, ಚಿತ್ರರಂಗದ ಕೆಲವು ಮಿತ್ರರನ್ನು ಆಹ್ವಾನಿಸಿ ಬೇಬಿ ಶವರ್ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾಲಾಶ್ರೀ ಹಾಗೂ ಮಗಳು ಆರಾಧನಾ, ಶೃತಿ ಹಾಗೂ ಮಗಳು ಗೌರಿ , ಪ್ರಿಯಾಂಕಾ ಉಪೇಂದ್ರ ,ಅನು ಪ್ರಭಾಕರ್, ಅಮೂಲ್ಯ, ಶರಣ್ಯ ಶೆಟ್ಟಿ, ಸಂಗೀತ ರವಿಶಂಕರ್ ಮುಂತಾದವರು ಭಾಗವಹಿಸಿದ್ದರು.
ಅಮ್ಮನಾಗುವ ನಿರೀಕ್ಷೆಯಲ್ಲಿರುವ ಹರ್ಷಿಕಾಗೆ ಮುತ್ತುಗಳ ಹಾಗೂ ಉಡುಗೊರೆಗಳ ಸುರಿ ಮಳೆಯೇ ಬಂದಿದೆ. ಬೇಬಿ ಶವರ್‍ನಲ್ಲಿ ಹಿರಿಯರು, ಕಿರಿಯರು ಎಲ್ಲರೂ ಒಟ್ಟಿಗೆ ಕುಣಿದು, ಹಾಡಿ ಖುಷಿ ಪಟ್ಟಿದ್ದು ವಿಶೇಷವಾಗಿತ್ತು. ಶೃತಿ ಅವರ ಮಗಳು ಗೌರಿ, ಹರ್ಷಿಕಾಗಾಗಿ ಹಾಡಿ ಸರ್ ಪ್ರೈಸ್ ನೀಡಿದ್ದಾರೆ.
ಈ ಸಂದರ್ಭಕ್ಕಾಗಿಯೇ ಬೇಬಿ ಥೀಮ್ ಕೇಕ್ ಸಿದ್ಧಪಡಿಸಲಾಗಿತ್ತು. ಈ ಎಲ್ಲಾ ಕಾರ್ಯಕ್ರಮಗಳನ್ನು ಶಿಲ್ಪಾ ಗಣೇಶ್ ಖುದ್ದಾಗಿ ನಿಂತು ಹರ್ಷಿಕಾಗಾಗಿ ಆಯೋಜಿಸಿದ್ದರು.
ಅಂದಹಾಗೆ, ಅಕ್ಟೋಬರ್ ತಿಂಗಳಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಹರ್ಷಿಕಾ ಮತ್ತು ಭುವನ್.