Mysore
26
few clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ದುರಂದರ್ ದರ್ಬಾರ್….. ಮರಳಿ ಟ್ರ್ಯಾಕ್ ಗೆ ಬಂತು ಬಾಲಿವುಡ್.?

ಮುಂಬೈ : ಸಾಲು ಸಾಲು ಸೋಲುಗಳಿಂದ ನೆಲಕಚ್ಚಿದ್ದ ಬಾಲಿವುಡ್ ಇಂಡಸ್ಟ್ರಿಯ ಭವಿಷ್ಯವನ್ನೇ ದುರಂದರ ಸಿನಿಮಾ ಬದಲಿಸಿದೆ. ರಣವೀರ್ ಸಿಂಗ್ ನಟನೆಯ ದುರಂದರ್ 21 ದಿನದಲ್ಲಿ ಬರೋಬ್ಬರಿ 1006 ಕೋಟಿ ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಮೂಲಕ ಬಾಲುವುಡ್ ಮಹಾ ಚೇತರಿಕೆ ಕಂಡಿದೆ.

ಕೆಜಿಫ್, ಪುಷ್ಪ, ತ್ರಿಬಲ್ ರ್ ಹೀಗೆ ಸೌತ್ ಇಂಡಿಯಾ ಮೂವಿಗಳು ಎಂಟ್ರಿ ಕೊಡ್ತಿದ್ದಂತೆ ಬಾಲಿವುಡ್ ಮಕಾಡೆ ಮಲಗಿತ್ತು. 3 ರಿಂದ ನಾಲ್ಕು ವರ್ಷಗಳ ಕಾಲ ಶಾರುಖ್, ಸಲ್ಮಾನ್ ಖಾನ್ ಸೇರಿ ಯಾವುದೇ ನಟರ ಸಿನಿಮಾ ಹಿಟ್ ಆಗಿರಲಿಲ್ಲ. ಸಾಲು ಸಾಲು ಸಿನಿಮಾಗಳು ಸೋತು ಬಾಲಿವುಡ್ ದೇಶದಲ್ಲೇ ಮನ ಮರ್ಯಾದೆ ಕಳೆದುಕೊಂಡಿತ್ತು. ಇಂಥಾ ಸಮಯದಲ್ಲಿ ಬಾಲಿವುಡ್ ಮಾನ ಕಾಪಾಡಿದ್ದು 2025 ರಲ್ಲಿ ತೆರೆಕಂಡ ಛತ್ರಪತಿ ಸಂಭಾಜಿ ಜೀವನ ಖಾತೆ ಕುರಿತ ಚವಾ ಸಿನಿಮಾ. ಈಗ ಮತ್ತೊಮ್ಮೆ ಬಾಲಿವುಡ್ ಭವಿಷ್ಯವನ್ನೇ ಬದಲಿಸಿದ ಸಿನಿಮಾ ದುರಂದರ್.

ಬಯೋಪಿಕ್ ಸಿನಿಮಾ ಮಾಡೋದ್ರಲ್ಲಿ ಬಾಲಿವುಡ್ ನೆಕ್ಸ್ಟ್ ಲೆವೆಲ್.. ಎಲ್ಲ ಚಿತ್ರರಂಗವನ್ನು ಮೀರಿಸುತ್ತೆ. ಈಗ ಬಾಲಿವುಡ್ ಕೈ ಹಿಡಿದಿದ್ದು ಸಹ ಬಯೋಪಿಕ್ ಸಿನಿಮಾಗಳೇ… ಚವಾ ಮತ್ತು ದುರಂದರ್ ಎರಡು ಕೂಡ ಬಯೋಪಿಕ್ ಸಿನಿಮಾಗಳು.. ದುರಂದರ್ ನಲ್ಲಿ ಭಾರತೀಯ ರಾ ಎಜೇಂಟ್ ಮೋಹಿತ್ ಶರ್ಮಾ ಕುರಿತಾದ ಸ್ಟೋರಿಯನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದು ಸೂಪರ್ ಹಿಟ್ ಆಗಿದೆ.

ಬರೋಬ್ಬರಿ 1000 ಕೋಟಿ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಬಗ್ಗೆ ಜಿ ಸ್ಟುಡಿಯೋ ಅಧಿಕೃತವಾದಂತಹ ಮಾಹಿತಿಯನ್ನು ನೀಡಿದೆ.

Gfx: ದಾಖಲೆಯ ದೂರಂದರ್..! ಬಾಲಿವುಡ್ ಲಕ್ ಚೇಂಜ್?

ವಿಶ್ವದಾದ್ಯಂತ ಸಾವಿರ ಕೋಟಿ ಕ್ಲಬ್ ಸೇರಿದ ಸಿನಿಮಾ

21 ದಿನದ ಪ್ರದರ್ಶನದಲ್ಲೇ 1006 ಕೋಟಿ 7 ಲಕ್ಷ ಕಲೆಕ್ಷನ್

ಮೊದಲ ವಾರ 218 ಕೋಟಿ, ಎರಡನೇ ವಾರ 216 ಕೋಟಿ

ಮೂರನೇ ವಾರ 160 ಕೋಟಿ ಗಳಿಸಿದೆ

ಕ್ರಿಸ್ಮಸ್ ದಿನವೇ 28 ಕೋಟಿ ಬಾಚಿದೆ

ಭಾರತದಲ್ಲಿ ಒಟ್ಟಾರೆ 789 ಕೋಟಿ ಕಲೆಕ್ಷನ್ ಮಾಡಿದೆ

ವಿದೇಶಗಳಲ್ಲಿ ಒಟ್ಟಾರೆ 217 ಕೋಟಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿದೆ.

ಇದನ್ನು ಓದಿಕಾರವಾರದ ಕದಂಬ ನೌಕನೆಲೆಗೆ ರಾಷ್ಟ್ರಪತಿ ಭೇಟಿ ನಾಳೆ

GFX: ಕನ್ನಡದ ಕಾಂತಾರ ಹಿಂದಿಯ ಜಾವ ಉಡೀಸ್

ನಿರೀಕ್ಷೆಗೂ ಮೀರಿ ರಿಷಬ್ ಶೆಟ್ಟಿ ನಟನೆಯ ಕಾಂತರಾ 1 ಚಿತ್ರ ಬರೋಬ್ಬರಿ 860 ಕೋಟಿ ಗಳಿಸಿತ್ತು. ಕಾಂತಾರದ ಮೇಕಿಂಗ್, ಆಕ್ಷನ್ ಸೀನಿಗೆ ಫ್ಯಾನ್ ಇಂಡಿಯಾ ಸಿನಿ ಗಣ್ಯರು ಕ್ಲೀನ್ ಬೋಲ್ಡ್ ಆಗಿದ್ದರು. ಆದರೆ ಚಾವ ಸಿನಿಮಾ ಕೂಡ ಒಳ್ಳೆ ದಾಖಲೆ ಮಾಡಿತ್ತು. ಅದು ಕೂಡ 807 ಕೋಟಿ ಗಳಿಸಿತ್ತು. ಆದರೆ ಅವೆರಡು ದಾಖಲೆಯನ್ನು ಸಹ ರಣವೀರ್ ನಟನೆಯ ದುರಂದರ ಸಿನಿಮಾ ಮುರಿದುಹಾಕಿದೆ.

ಹಿಂದೆ ಉರಿ ಎಂಬ ಸಿನಿಮಾ ತೆಗೆದಿದ್ದ ಆದಿತ್ಯ ದಾರ್ ಈ ದುರಂದರ್ ಸಿನಿಮಾಗೂ ಸಹ ಆಕ್ಷನ್ ಕಟ್ ಹೇಳಿದ್ದಾರೆ. ಮೇಜರ್ ರೋಹಿತ್ ಶರ್ಮಾ ಪಾತ್ರದಲ್ಲಿ, ಮುಖ್ಯ ಪಾತ್ರದ ಹೀರೋ ಆಗಿ ರಣವೀರ್ ಸಿಂಗ್ ಅದ್ಭುತವಾಗಿ ಅಭಿನಯ ಮಾಡಿದ್ದಾರೆ. ಪಾಕಿಸ್ತಾನದ ಭೂಗತ ಲೋಕದ ಡಾನಾಗಿ ಅಕ್ಷಯ್ ಕನ್ನ ಅಭಿನಯ ಮಾಡಿದ್ದಾರೆ. ಸಂಜಯ್ ದತ್ ಪಾಕಿಸ್ತಾನದ ಪೊಲೀಸ್ ಅಧಿಕಾರಿಯಾಗಿ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದ್ದಾರೆ.

GFX: ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಗಳಿಸಿದ ಮೊದಲ ಸಿನಿಮಾ..!

ದುರಂದರ್ ಸಿನಿಮಾ 21 ದಿನದ ಪ್ರದರ್ಶನದಲ್ಲೇ ಸಾವಿರ ಕೋಟಿ ಕ್ಲಬ್ ಗಳಿಸುವ ಮೂಲಕ ಗಲ್ಲಾ ಪೆಟ್ಟಿಗೆಯನ್ನ ಕೊಳ್ಳೆ ಹೊಡೆದಿದೆ.

ಈ ಸಿನಿಮಾದಲ್ಲಿ ಮುಖ್ಯವಾಗಿ ಅಡ್ವಾಂಟೇಜ್ ಏನು ಅಂದ್ರೆ ಹಾಡುಗಳು. ಇಲ್ಲಿನ ಹಾಡುಗಳು ಒಂದಕ್ಕೊಂದು ಮಿರುತ್ತಾ ಇದ್ದಾವೆ. ಯಾವುದೇ ಮೊಬೈಲಲ್ಲಿ ಯಾವುದೇ ರೀಲ್ಸ್ ನೋಡಿದ್ರೂ ದುರಂದರ ಸಾಂಗ್ ಗಳ ಟ್ರೆಂಡ್ ಆಗಿವೆ.. ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಮೊದಲ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿ ದುರಂದರ್ ಬಾಲಿವುಡ್ ಲಕ್ ಚೇಂಜ್ ಮಾಡಿದೆ..

Tags:
error: Content is protected !!