Mysore
24
mist

Social Media

ಗುರುವಾರ, 12 ಡಿಸೆಂಬರ್ 2024
Light
Dark

ಡೀಪ್‌ ಫೇಕ್‌ ಪ್ರಕರಣ: ಕಾಂಗ್ರೆಸ್‌ ವಿರುದ್ಧ ದೂರು ದಾಖಲಿಸಿದ ನಟ ಅಮೀರ್‌ ಖಾನ್‌!

ನವದೆಹಲಿ: ಕಾಂಗ್ರೆಸ್‌ ಪರವಾಗಿ ಮಾತನಾಡಿರುವಂತೆ ನಕಲಿ ರಾಜಕೀಯ ಜಾಹಿರಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಬಾಲಿವುಡ್‌ ಸ್ಟಾರ್‌ ಅಮೀರ್‌ ಖಾನ್‌ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರದರ್ಶನ ಕಾರ್ಯಕ್ರಮವಾದ ಸತ್ಯಮೇವ ಜಯತೆ ಸಂಚಿಕೆಯನ್ನು ಒಳಗೊಂಡಂತೆ ಬಿಜೆಪಿಯೂ ನಾಗರೀಖರ ಬ್ಯಾಂಕ್‌ ಖಾತೆಗೆ 15 ಲಕ್ಷ ಜಮೆ ಮಾಡುವ ಭರವಸೆಯನ್ನು ಟೀಕಿಸುತ್ತಿರುವ ರೀತಿಯಲ್ಲಿ ವಿವಾದಿತ ಜಾಹೀರಾತು ಹರಿದಾಡುತ್ತಿದ್ದು, ಇದಕ್ಕೆ ಅಮೀರ್‌ ಖಾನ್‌ ದೃಶ್ಯವನ್ನು ಸೇರಿಸಲಾಗಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಅಮೀರ್‌ ಖಾನ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

ಅಮೀರ್‌ ಖಾನ್‌ ಅವರು, ಈ ಹಿಂದಿನ ಹಲವು ಚುನಾವಣೆಗಳಲ್ಲಿ ಚುನಾವಣಾ ಆಯೋಗದ ಸಾರ್ವಜನಿಕ ಜಾಗೃತಿ ಅಭಿಯಾನಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಆದರೆ ಅವರ 35 ವರ್ಷಗಳ ವೃತ್ತಿ ಜೀವನದಲ್ಲಿ ಯಾವುದೇ ರಾಜಕೀಯ ಪಕ್ಷದ ಜೊತೆ ಧನಿ ಗೂಡಿಸಿಲ್ಲ ಎಂದು ಖಾನ್‌ ವಕ್ತಾರರು ಹೇಳಿದ್ದಾರೆ.

 

Tags: