Mysore
22
overcast clouds
Light
Dark

ಕೊಲೆ ಪ್ರಕರಣ: ಆರ್ ಆರ್ ನಗರ ಪೊಲೀಸರಿಂದ ಪವಿತ್ರ ಗೌಡ ಬಂಧನ

ಬೆಂಗಳೂರು: ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್‌ ಅವರನ್ನು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಬಂಧಿಸಿದ ಬೆನ್ನಲ್ಲೇ ಇದೀಗ ಅವರ ಆಪ್ತೆಯಾದ ಪವಿತ್ರಾಗೌಡ ಅವರನ್ನು ಆರ್‌ಆರ್‌ ನಗರ ಪೊಲೀಸರು ಬಂಧಿಸಿದ್ದಾರೆ.

ಆರ್‌ಆರ್‌ ನಗರ ಪೊಲೀಸ್‌ ಇನ್ಸ್‌ಪೆಕ್ಟರ್‌ ಮಾರ್ಕಂಡಯ್ಯ ಅವರ ನೇತೃತ್ವದಲ್ಲಿ ಪವಿತ್ರಾಗೌಡರನ್ನು ಬಂಧಿಸಿ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಇವರ ಜತೆ ಅವರ ಅಕ್ಕ ಕೂಡಾ ಪೊಲೀಸ್‌ ಠಾಣಾ ಮೆಟ್ಟಿಲೇರಿದ್ದಾರೆ.

ದರ್ಶನ್‌ ಆಪ್ತೆಯಾದ ಪವಿತ್ರಾಗೌಡ ವಿರುದ್ಧ ರೇಣುಕಾಸ್ವಾಮಿ ಅಶ್ಲೀಲ ಮೆಸೆಜ್‌ ಮಾಡಿದ್ದಾನೆ. ಹೀಗಾಗಿ ಸಿಟ್ಟಿಗೆದ್ದ ದರ್ಶನ್‌ ಒಳಗೊಂಡ ಹತ್ತು ಜನರು ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇತ್ತ ಕೊಲೆಯಾದ ರೇಣುಕಾಸ್ವಾಮಿ ಬಗ್ಗೆ ಅಚ್ಚರಿ ವಿಷಯ ಬೆಳಕಿಗೆ ಬಂದಿದ್ದು, ರೇಣುಕಾಸ್ವಾಮಿ ಓರ್ವ ದರ್ಶನ್‌ ಅಪ್ಪಟ ಅಭಿಮಾನಿಯಾಗಿದ್ದು, ದರ್ಶನ್‌-ವಿಜಯಲಕ್ಷ್ಮಿ ದಂಪತಿ ನಡುವೆ ಪವಿತ್ರಾ ಬಂದಿದ್ದಾಳೆ ಎಂದು ಭಾವಿಸಿ ಆತ ಮೆಸೆಜ್‌ ಮಾಡಿದ್ದ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ದರ್ಶನ್‌ ಹುಡುಗರು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.