Mysore
24
broken clouds

Social Media

ಬುಧವಾರ, 09 ಜುಲೈ 2025
Light
Dark

ಹುಟ್ಟುಹಬ್ಬ ಆಚರಿಸಿಕೊಂಡ ಕೃಷ್ಣಗೆ ಎರಡು ಗಿಫ್ಟ್; ಏನದು?

‘ಮದರಂಗಿ’ ಕೃಷ್ಣ ಅಲಿಯಾಸ್‍ ‘ಡಾರ್ಲಿಂಗ್’ ಕೃಷ್ಣ, ಗುರುವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಅವರ ಮುಂಬರುವ ಚಿತ್ರಗಳ ತಂಡಗಳಿಂದ ಎರಡು ಗಿಫ್ಟ್ ಸಿಕ್ಕಿದೆ.

ಪ್ರಮುಖವಾಗಿ, ‘ಬ್ರ್ಯಾಟ್‍’ ಚಿತ್ರತಂಡದವರು ಕೃಷ್ಣಗೆ ಒಂದು ಟೀಸರ್‍ ಉಡುಗೊರೆಯಾಗಿ ನೀಡಿದ್ದಾರೆ. ‘ಫಸ್ಟ್ ರ‍್ಯಾಂಕ್ ರಾಜು’ ನಿರ್ಮಿಸಿದ್ದ ಮಂಜುನಾಥ್ ಕಂದಕೂರ್ ನಿರ್ಮಿಸುತ್ತಿರುವ ಮತ್ತು ಶಶಾಂಕ್ ನಿರ್ದೇಶನದ ‘ಬ್ರ್ಯಾಟ್‍’ ಚಿತ್ರವು ಸೆಪ್ಟೆಂಬರ್‍ ತಿಂಗಳಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮೊದಲು ಟೀಸರ್‍ ಬಿಡುಗಡೆ ಮಾಡಲಾಗಿದೆ. ಈ ಟೀಸರ್‍ನಲ್ಲಿ ಕೃಷ್ಣ ಅವರ ಪಾತ್ರದ ಪರಿಚಯವನ್ನು ಮಾಡಿಕೊಡಲಾಗಿದೆ. ಈ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡವು ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಹೇಳಿದೆ. ಚಿತ್ರದಲ್ಲಿ ಕೃಷ್ಣ ಜೊತೆಗೆ ಅಚ್ಯುತ್‍ ಕುಮಾರ್, ಮನಿಶಾ ಕಂದಕೂರ್, ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು ಮುಂತಾದವರು ನಟಿಸುತ್ತಿದ್ದು, ಅರ್ಜುನ್‍ ಜನ್ಯ ಸಂಗೀತ ಮತ್ತು ಅಭಿಲಾಶ್ ಕಲ್ಲತ್ತಿ ಛಾಯಾಗ್ರಹಣವಿದೆ‌.

ಇದಲ್ಲದೆ ‘ಫಾದರ್‍’ ಚಿತ್ರದ ಪೋಸ್ಟರ್‍ ಸಹ ಬಿಡುಗಡೆ ಆಗಿದೆ. ಆರ್‍. ಚಂದ್ರು ಒಡೆತನದ ಆರ್.ಸಿ. ಸ್ಟುಡಿಯೋಸ್ ನಿರ್ಮಾಣದ ‘ಫಾದರ್’ ಚಿತ್ರ ಇದೀಗ ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಹೊಸ ಪೋಸ್ಟರ್‍ ಕೃಷ್ಣ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. ಪ್ರಕಾಶ್‍ ರೈ ಮತ್ತು ಕೃಷ್ಣ ತಂದೆ-ಮಗನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಅಮೃತಾ ಅಯ್ಯಂಗಾರ್‍ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮೈಸೂರು, ಧರ್ಮಸ್ಥಳ, ಮಂಗಳೂರು, ಬೆಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾಗೆ ವಾರಣಾಸಿಯಲ್ಲೂ ಚಿತ್ರೀಕರಣವಾಗಿದೆ. ರಾಜ್‍ ಮೋಹನ್‍ ನಿರ್ದೇಶನ ಮಾಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣವಿದೆ. ಗೌರ ಹರಿ ಸಂಗೀತ ಚಿತ್ರಕ್ಕಿದೆ.

ಸದ್ಯ, ಕೃಷ್ಣ ಈ ಎರಡು ಚಿತ್ರಗಳಲ್ಲಿ ನಟಿಸಿದ್ದು, ಎರಡೂ ಚಿತ್ರಗಳು ಇದೇ ವರ್ಷ ಒಂದರಹಿಂದೊಂದು ಬಿಡುಗಡೆಯಾಗುತ್ತಿವೆ. ಈ ಪೈಕಿ, ‘ಫಾದರ್‍’ ಚಿತ್ರದ ಕೆಲಸಗಳು ಬಹುತೇಕ ಮುಗಿಯುತ್ತಾ ಬಂದಿದ್ದು, ಅದು ಮೊದಲು ಬಿಡುಗಡೆ ಆಗುವ ಸಾಧ್ಯತೆ ಇದೆ. ಅದರ ನಂತರ ಸೆಪ್ಟೆಂಬರ್‍ ತಿಂಗಳಲ್ಲಿ ‘ಬ್ರ್ಯಾಟ್‍’ ಚಿತ್ರ ಸಹ ಬಿಡುಗಡೆಯಾಗಲಿದೆ

Tags:
error: Content is protected !!