ಬೆಂಗಳೂರು : ಕನ್ನಡದ ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ಗೆ ಭಾನುವಾರ ಸಂಜೆ ಚಾಲನೆ ದೊರಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಟೈಲಿಶ್ ಲುಕ್‌ನಲ್ಲಿ ಸ್ಟೇಜ್ಗೆ ಎಂಟ್ರಿ ಕೊಟ್ಟಿದ್ದಾರೆ.
ಈ ಬಾರಿ ಬಿಗ್‌ಬಾಸ್‌ನ ದೊಡ್ಮನೆಯಂತು ಹೆಸರಿಗೆ ತಕ್ಕಂತೆ ಅರಮನೆಯಂತೆ ಕಂಗೊಳಿಸುತ್ತಿದೆ. ಕರ್ನಾಟಕದ ಶ್ರೀಮಂತ ಇತಿಹಾಸವನ್ನ ಪ್ರತಿಬಿಂಬಿಸುವಂತೆ ಮನೆಯ ವಿನ್ಯಾಸವನ್ನ ತೋರಿಸಲಾಗಿದೆ. ಮೈಸೂರು ದಸರಾದ ಸಂಕೇತವಾದ ಆನೆಯ ಚಿತ್ರಣಗಳು ಮನೆಯ ಎಂಟ್ರನ್ಸ್‌ನಲ್ಲೇ ಇಡಲಾಗಿದೆ.
ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್‌ಗೆ ಕಿಚ್ಚ ಸುದೀಪ್ ಸಖತ್ ಆಗಿಯೇ ರೆಡಿ ಆಗಿದ್ದಾರೆ. ಮಾರ್ಕ್ ಚಿತ್ರದ ಕರ್ಲಿ ಹೇರ್ ಸ್ಟೈಲ್ ಅಲ್ಲಿಯೇ ಮಿಂಚಿದ್ದಾರೆ. ಈ ಮೊದಲಿನ ಪ್ರೋಮೋದಲ್ಲಿ ಯಾವ ರೀತಿ ಮಿಂಚುತ್ತಿದ್ದರೋ ಅದೇ ರೀತಿನೇ ಇಲ್ಲೂ ಕಾಣಿಸುತ್ತಿದ್ದಾರೆ. ಝಗಮಗಿಸೋ ಕಪ್ಪು ಬಣ್ಣದ ಕಾಸ್ಟೂಮ್ ಧರಿಸಿದ್ದಾರೆ. ಬ್ಲ್ಯಾಕ್ ಥೀಮ್ ಅಲ್ಲಿಯೇ ಇಡೀ ಡ್ರೆಸ್ ರೆಡಿ ಆಗಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಸುದೀಪ್ ಒಬ್ಬೊಬ್ಬ ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಿದ್ದಾರೆ.
ಇದನ್ನೂ ಓದಿ:-ಕಾಲ್ತುಳಿತ ದುರಂತ | ನಟ ವಿಜಯ್ ಬಂಧನಕ್ಕೆ ವ್ಯಾಪಕ ಒತ್ತಡ
ಒಂದು ಅರಮನೆಯನ್ನ ಉಳಿಸಿಕೊಳ್ಳೋದಕ್ಕೆ ಎಷ್ಟೋ ಯುದ್ದಗಳು ನಡೆದಿದೆ. ಈ ಅರಮನೆಯಲ್ಲಿ ತಮ್ಮನ್ನ ತಾವು ಉಳಿಸಿಕೊಳ್ಳೋದಕ್ಕೆ ಬಹಳ ಯುದ್ದಗಳು ನಡೆಯಲಿದೆ. ನಮ್ಮ ನಾಡಿಗೆ ದಸರಾ ಹಬ್ಬ ಶುರುವಾಗಿ, ಒಂದು ವಾರ ಆಯ್ತು. ನಮ್ಮ ಬಿಗ್ ಬಾಸ್ ಮನೆಯಲ್ಲಿ ಅಸಲಿ ಹಬ್ಬ ಇವಾಗ ಶುರು ಎಂದು ಕಿಚ್ಚ ಸುದೀಪ್ ಪ್ರೋಮೋದಲ್ಲಿ ಹೇಳಿರುವುದು ಈ ಸೀಸನ್ ರೋಚಕತೆ ಮತ್ತಷ್ಟು ಹೆಚ್ಚಿಸಿದೆ.
ಅಲ್ಲದೆ, ಈ ಬಾರಿ ಬಿಗ್ ಬಾಸ್ ಲೋಗೋದಲ್ಲಿಯೂ ಕನ್ನಡದ ಸಂಖ್ಯೆಗಳನ್ನು ಬಳಸಲಾಗಿದೆ. ಬಿಗ್‌ಬಾಸ್ ಮನೆಯಲ್ಲಿ ಕನ್ನಡ, ಕರ್ನಾಟಕವೇ ಪ್ರಧಾನವಾಗಿದೆ. ಈ ಹಿಂದೆ ಇದೇ ವಿಚಾರವಾಗಿ ಸುದೀಪ್ ಬೇಸರ ಹೊರಹಾಕಿದ್ದರು. ಇದೀಗ ಈ ಬಿಗ್ ಬಾಸ್ ಕನ್ನಡಮಯ ಹಾಗೂ ಐತಿಹಾಸಿಕ ಕರ್ನಾಟಕದ ಬೀಡು ಥೀಮ್‌ನಲ್ಲಿ ವಿನ್ಯಾಸ ಮಾಡಲಾಗಿದೆ. ಇದನ್ನ ಕಂಡು ಅಭಿಮಾನಿಗಳಂತು ಫುಲ್ ಖುಷ್ ಆಗಿದ್ದಾರೆ.





