Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

‘ಅಳಿದು ಉಳಿದವರು’ ನಂತರ ಅಶು ಬೆದ್ರ ಇನ್ನೊಂದು ಸಿನಿಮಾ…

‘ಅಳಿದು ಉಳಿದವರು’ ಚಿತ್ರದ ಮೂಲಕ ಹೀರೋ ಆದವರು ನಿರ್ಮಾಪಕ ಅಶು ಬೆದ್ರ ವಫಾ. ಐದು ವರ್ಷಗಳ ಹಿಂದೆ ಬಿಡುಗಡೆಯಾದ ಈ ಚಿತ್ರದ ನಂತರ ಅವರು ಧನಂಜಯ್‍ ಅಭಿಯದ ‘ಹೆಡ್‍ ಬುಷ್‍’ ಚಿತ್ರ ನಿರ್ಮಿಸದಬೇಕಿತ್ತು. ಕಾರಣಾಂತರಗಳಿಂದ ಅವರು ಹಿಂದೆ ಸರಿದು, ನಿರ್ಮಾಣದ ಜವಾಬ್ದಾರಿಯನ್ನು ಧನಂಜಯ್‍ ಅವರೇ ವಹಿಸಿಕೊಂಡರು. ಆ ನಂತರ ಅಶು ಬೆದ್ರ ಸುದ್ದಿಯೇ ಇರಲಿಲ್ಲ. ಈಗ ಬಹಳ ದಿನಗಳ ನಂತರ ಅವರೊಂದು ಚಿತ್ರದೊಂದಿಗೆ ವಾಪಸ್ಸಾಗುತ್ತಿದ್ದಾರೆ.

ಈ ಹಿಂದೆ, ‘ರಾಧಾ ಕಲ್ಯಾಣ’ ಸೇರಿದಂತೆ ಹಲವು ಧಾರಾವಾಹಿಗಳನ್ನು ನಿರ್ದೇಶಿಸಿರುವ ಆಶು, ಈಗ ಇನ್ನೊಂದು ಚಿತ್ರವನ್ನು ನಿರ್ಮಿಸುತ್ತಿರುವುದಷ್ಟೇ ಅಲ್ಲ, ಆ ಚಿತ್ರಕ್ಕೆ ಅವರೇ ಹೀರೋ ಸಹ ಆಗಿದ್ದಾರೆ. ಇತ್ತೀಚೆಗೆ ಅಶು ಬೆದ್ರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಚಿತ್ರದ ಮೇಕಿಂಗ್‍ ವಿಡಿಯೋ ಬಿಡುಗಡೆ ಮಾಡಲಾಗಿದೆ.

ಅಂದಹಾಗೆ, ಅಶು ಬೆದ್ರ ಹೊಸ ಕನಸಿಗೆ ಪ್ರವೀಣ್ ಕಾಡಶೆಟ್ಟಿ ಬೆಂಬಲ ಕೊಟ್ಟಿದ್ದು, ಈ ಚಿತ್ರದ ಮೂಲಕ ಪ್ರವೀಣ್ ನಿರ್ದೇಶಕರಾಗಿ ಆಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಸದ್ಯ ಮೇಕಿಂಗ್ ಬಿಡುಗಡೆ ಮಾಡಿರುವ ಚಿತ್ರತಂಡ, ಶೀಘ್ರದಲ್ಲೇ ಶೀರ್ಷಿಕೆ ಜೊತೆಗೆ ಉಳಿದ ತಾರಾಬಳಗ, ತಾಂತ್ರಿಕ ಬಳಗದ ಬಗ್ಗೆ ಮಾಹಿತಿ ನೀಡಲಿದೆ.

ಇದೊಂದು ಹಳ್ಳಿ ಸೊಗಡಿನ ಆ್ಯಕ್ಷನ್‍ ಚಿತ್ರವಾಗಿದ್ದು, ಹೊಡೆದಾಟದ ಸನ್ನಿವೇಶಗಳ ವೀಡಿಯೋ ಬಿಡುಗಡೆ ಮಾಡಲಾಗಿದೆ. ಚಿತ್ರದ ಕೆಲಸಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಚಿತ್ರತಂಡ ಒಂದೊಂದೇ ಮಾಹಿತಿಯನ್ನು ಬಿಟ್ಟುಕೊಡಲಿದೆ.

ಅಂದಹಾಗೆ, ಅಶು ಚಿತ್ರರಂಗಕ್ಕೆ ಬಂದಿದ್ದು ‘ಸಿಂಪಲ್‍’ ಸುನಿ ನಿರ್ದೇಶನದ ‘ಸಿಂಪಲ್ಲಾಗ್‍ ಇನ್ನೊಂದು ಲವ್‍ಸ್ಟೋರಿ’ ಚಿತ್ರವನ್ನು ನಿರ್ಮಿಸುವ ಮೂಲಕ. ಹೀಗೆ ಬಂದ ಅವರು, ಇದೀಗ ಮೂರನೇ ಚಿತ್ರದ ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ.

Tags: