Mysore
20
broken clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಅತೀ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ಮೊದಲಿಗರಾದ ಅಲ್ಲು ಅರ್ಜುನ್

ಅಲ್ಲು ಅರ್ಜುನ್‍ ಅಭಿನಯದ ‘ಪುಷ್ಪ 2’ ಚಿತ್ರ ತಂಡದಿಂದ ಮಹತ್ವದ ಸುದ್ದಿಯೊಂದು ಬಂದಿದೆ. ಮತ್ತೇನಾದರೂ ಚಿತ್ರದ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಇದೆಯಾ ಎಂಬ ಪ್ರಶ್ನೆ ಬರಬಹುದು. ಅದು ಸಹಜ. ಏಕೆಂದರೆ, ಈಗಾಗಲೇ ಎರಡು ಬಾರಿ ಚಿತ್ರದ ಬಿಡುಗಡೆ ದಿನಾಂಕ ಮುಂದೆ ಹೋಗಿದೆ. ಈ ಬಾರಿಯೂ ಅದು ಮುಂದುವರೆದಿದೆಯಾ ಎಂದು ಚಿತ್ರದ ಅಭಿಮಾನಿಗಳಲ್ಲಿ ಸಹಜವಾಗಿ ಆತಂಕವಾಗಬಹುದು. ಬಿಡುಗಡೆ ದಿನಾಂಕದಲ್ಲಿ ಬದಲಾವಣೆಯಾಗಿದೆ. ಆದರೆ, ಚಿತ್ರ ಮುಂದಕ್ಕೆ ಹೋಗಿಲ್ಲ. ಬದಲಿಗೆ, ಡಿ.6ರ ಬದಲು ಒಂದು ದಿನ ಮುಂಚಿತವಾಗಿಯೇ, ಅಂದರೆ ಡಿ.5ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

ಇನ್ನು, ‘ಪುಷ್ಪ 2’ ಚಿತ್ರದ ವಿತರಣೆ, ಡಿಜಿಟಿಲ್‍, ಸ್ಯಾಟಿಲೈಟ್‍ ಹಕ್ಕುಗಳಿಂದ 1000 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗಿದೆ. ಈ ಪೈಕಿ ವಿತರಣೆ ಹಕ್ಕುಗಳಿಂದ ಚಿತ್ರಕ್ಕೆ 640 ಕೋಟಿ ರೂ. ಬಂದರೆ, ಬೇರೆ ಹಕ್ಕುಗಳಿಂದ 425 ಕೋಟಿ ರೂ.ಗಳಿಕೆ ಎಂದು ಹೇಳಲಾಗುತ್ತಿದೆ. ಅವೆರಡೂ ಸೇರಿ ಚಿತ್ರವು ಬಿಡುಗಡೆಗೂ ಮೊದಲೇ 1000 ಕೋಟಿ ರೂ. ಕ್ಲಬ್‍ಗೆ ಸೇರ್ಪಡೆಯಾಗಿದೆ.

ಈ ಚಿತ್ರಕ್ಕೆ ಅಲ್ಲು ಅರ್ಜುನ್‍ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಚರ್ಚೆ ಇದೀಗ ಶುರುವಾಗಿದೆ. ಮೂಲಗಳ ಪ್ರಕಾರ, ಈ ಚಿತ್ರಕ್ಕಾಗಿ ಅರ್ಜುನ್‍ ಪಡೆದಿರುವ ಸಂಭಾವನೆ ದೇಶದಲ್ಲೇ ಮೊದಲಂತೆ. ಭಾರತೀಯ ಚಿತ್ರರಂಗದ ಯಾವ ಸ್ಟಾರ್ ‍ನಟ ಸಹ ಇಷ್ಟೊಂದು ಸಂಭಾವನೆಯನ್ನು ಪಡೆದಿರಲಿಲ್ಲ ಎಂದು ಹೇಳಲಾಗಿದೆ. ಅಷ್ಟೊಂದು ಸಂಭಾವನೆ ಪಡೆಯುವ ಮೂಲಕ ಅರ್ಜುನ್‍, ದೇಶದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದಾರೆ ಎನ್ನುವುದು ವಿಶೇಷ.

ಮೂಲಗಳ ಪ್ರಕಾರ, ಅಲ್ಲು ಅರ್ಜುನ್‍ ಈ ಚಿತ್ರಕ್ಕಾಗಿ 275 ಕೋಟಿ ರೂ. ಸಂಭಾವನೆ ಪಡೆದಿದ್ದರಂತೆ. ಇದಕ್ಕೂ ಮುನ್ನ ಶಾರೂಖ್‍ ಖಾನ್‍, ‘ಪಠಾಣ್‍’ ಚಿತ್ರಕ್ಕೆ 200 ಕೋಟಿ ರೂ. ಸಂಭಾವನೆ ಪಡೆದರು ಎಂದು ಹೇಳಲಾಗಿದೆ. ಇನ್ನು, ತಮಿಳು ನಟ ವಿಜಯ್‍ ತಮ್ಮ ಮುಂದಿನ ಚಿತ್ರಕ್ಕೆ 275 ಕೋಟಿ ರೂ.ಗಳನ್ನು ಸಂಭಾವನೆಯಾಗಿ ಪಡೆದರಂತೆ. ಅಲ್ಲು ಅರ್ಜುನ್‍ ಅವರಿಬ್ಬರನ್ನೂ ಹಿಂದಿಕ್ಕಿ ‘ಪುಷ್ಪ 2 – ದಿ ರೂಲ್‍’ ಚಿತ್ರಕ್ಕೆ 300 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

‘ಪುಷ್ಪ – ದಿ ರೂಲ್‍’ ಚಿತ್ರವು ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಪುಷ್ಪ – ದಿ ರೈಸ್‍’ ಚಿತ್ರದ ಮುಂದುವರೆದ ಭಾಗವಾಗಿದೆ. ಅಲ್ಲು ಅರ್ಜುನ್‍ ಈಈ ಚಿತ್ರದಲ್ಲಿ ಪುಷ್ಪರಾಜ್‍ ಆಗಿ ನಟಿಸಿದ್ದು, ಅವರಿಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಮಿಕ್ಕಂತೆ ಧನಂಜಯ್‍, ಫಹಾದ್‍ ಫಾಸಿಲ್‍, ಸುನೀಲ್, ಅನುಸೂಯ ಭಾರದ್ವಾಜ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Tags:
error: Content is protected !!