Mysore
26
broken clouds

Social Media

ಭಾನುವಾರ, 27 ಏಪ್ರಿಲ 2025
Light
Dark

ರೇವ್‌ ಪಾರ್ಟಿ ಪ್ರಕರಣ: ನಟಿ ಹೇಮಾ ಗೆ ಜೂನ್‌. 14ವರೆಗೆ ನ್ಯಾಯಾಂಗ ಬಂಧನ

ಬೆಂಗಳೂರು: ನಗರದ ಜೆ.ಆರ್‌ ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ರೇವ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗಿನ ನಟಿ ಹೇಮಾ ಅವರನ್ನು ಇಂದು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಅವರಿಗೆ ನಗರದ ಕೆ.ಸಿ ಜನರಲ್‌ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್‌ ಮಾಡಿಸಿದ ಬಳಿಕ ಆನೆಕಲ್‌ 4ನೇ ಹೆಚ್ಚುವರಿ ಸಿವಿಲ್‌ ಜೆಎಂಎಫ್‌ಜಿ ನ್ಯಾಯಾಲಯದ ನ್ಯಾಯಾಧೀಶರಾದ ಎ.ಎಸ್‌ ಸಲ್ಮಾ ಅವರ ಬಳಿ ವಿಚಾರಣೆಗೆ ಕರೆದೊಯ್ದಿದ್ದು, ವಿಚಾರಣೆ ನಡೆಸಿದ ಜಡ್ಜ್‌ ನಟಿ ಹೇಮಾಗೆ ಜೂನ್‌. 14ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.

ರೇವ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ 2 ಬಾರಿ ಸಮನ್ಸ್‌ ನೀಡಿಯೂ ಯಾವುದೇ ಪ್ರತ್ಯುತ್ತರ ನೀಡದ ನಟಿಗೆ ಮೂರನೇ ಬಾರಿಗೆ ವಿಚಾರಣೆಗೆ ಬಂದಿದ್ದ ವೇಳೆ ಬಂಧನವಾಗಿದೆ. ಇಂದು ವಿಚಾರಣೆಗೆ ಬಂದ ನಟಿ ಹೇಮಾ ಬುರ್ಖಾ ಧರಿಸಿ ಬಂದಿದ್ದರು. ವಿಚಾರಣೆ ವೇಳೆ ಅವರು ಸರಿಯಾದ ಮಾಹಿತಿ ನೀಡದ ಹಿನ್ನೆಲೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದರು.

ರೇವ್‌ ಪಾರ್ಟಿ ಸಂದರ್ಭದಲ್ಲಿ ನಾನು ಪಾರ್ಟಿ ಸ್ಥಳದಲ್ಲಿರಲಿಲ್ಲ. ನಾನು ಊರಿನಲ್ಲಿದ್ದೆ ಎಂದು ವಿಡಿಯೋ ತುಣುಕೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದು ನ್ಯಾಯಾಲಯದ ದಿಕ್ಕು ತಪ್ಪಿಸಲು ಮಾಡಿದ ಪ್ರಯತ್ನ ಎಂದು ಆರೋಪಿಸಿ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಅವರಿಗೆ ಜೂನ್‌. 14ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆನೆಕಲ್‌ ನ್ಯಾಯಾಲಯ ಸೂಚಿಸಿದೆ.

Tags: