Ashburn
88
scattered clouds
Light
Dark

ರೇವ್‌ ಪಾರ್ಟಿ ಪ್ರಕರಣ: ಸಿಸಿಬಿ ಪೊಲೀಸರಿಂದ ನಟಿ ಹೇಮಾ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಜಿ.ಆರ್‌ ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ರೇವ್‌ ಪಾರ್ಟಿಯಲ್ಲಿ ಭಾಗವಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗಿನ ನಟಿ ಹೇಮಾ ಅವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರೇವ್‌ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ 2 ಬಾರಿ ಸಮನ್ಸ್‌ ನೀಡಿಯೂ ಯಾವುದೇ ಪ್ರತ್ಯುತ್ತರ ನೀಡದ ನಟಿಗೆ ವಿಚಾರಣೆಗೆ ಬಂದಿದ್ದ ವೇಳೆ ಬಂಧನವಾಗಿದೆ. ಇಂದು ವಿಚಾರಣೆಗೆ ಬಂದ ನಟಿ ಹೇಮಾ ಬುರ್ಖಾ ಧರಿಸಿ ಬಂದಿದ್ದರು. ವಿಚಾರಣೆ ವೇಳೆ ಅವರು ಸರಿಯಾದ ಮಾಹಿತಿ ನೀಡದ ಹಿನ್ನೆಲೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದರು.

ರೇವ್‌ ಪಾರ್ಟಿ ಸಂದರ್ಭದಲ್ಲಿ ನಾನು ಪಾರ್ಟಿ ಸ್ಥಳದಲ್ಲಿರಲಿಲ್ಲ. ನಾನು ಊರಿನಲ್ಲಿದ್ದೆ ಎಂದು ವಿಡಿಯೋ ತುಣುಕೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದು ನ್ಯಾಯಾಲಯದ ದಿಕ್ಕು ತಪ್ಪಿಸಲು ಮಾಡಿದ ಪ್ರಯತ್ನ ಎಂದು ಆರೋಪಿಸಿ ಅವರನ್ನು ಬಂಧಿಸಲಾಗಿದೆ.

ಇಂದು ನಟಿ ಹೇಮಾ ಬಂಧನದ ಬಳಿಕ ಅವರನ್ನು ನಗರದ ಕೆ.ಸಿ ಜನರಲ್‌ ಆಸ್ಪತ್ರೆಗೆ ಮೆಡಿಕಲ್‌ ಪರೀಕ್ಷೆಗಾಗಿ ಕರೆದೊಯ್ದ ಸಿಸಿಬಿ ಪೊಲೀಸರು. ನಾಳೆ (ಜೂನ್‌.4) ಆನೆಕಲ್‌ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಿದ್ದಾರೆ.