ಬೆಂಗಳೂರು: ಅಗಲಿದ ಪತ್ನಿಗೆ ನಟ ವಿಜಯ್ ನಟ ವಿಜಯ್ ರಾಘವೇಂದ್ರ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿ ಭಾವುಕ ಪೋಸ್ಟ್ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ 17 ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಅಗಲಿದ ಪತ್ನಿಯನ್ನು ನೆನೆದು ನಟ ವಿಜಯ್ ರಾಘವೇಂದ್ರ ಅವರು, ವಿವಾಹ ವಾರ್ಷಿಕೋತ್ಸವದ ಶುಭ ಕೋರಿ, ಭಾವುಕ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ವಿಜಯ್ ರಾಘವೇಂದ್ರ ಅವರು, ಇಂದಿಗೆ 17 ವರ್ಷಗಳು. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಚಿನ್ನ ಎಂದು ವಿಶ್ ಮಾಡಿ, ಸ್ಪಂದನಾ ಜೊತೆಗಿನ ಹಳೆ ಫೋಟೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಪ್ರತಿ ವರ್ಷ ಸ್ಪಂದನಾ ಜೊತೆ ವಿಜಯ್ ರಾಘವೇಂದ್ರ ಅವರು ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡುತ್ತಿದ್ದರು. ಆದರೆ ಬ್ಯಾಂಕಾಕ್‌ನಲ್ಲಿ ಸ್ಪಂದನಾ ಹೃದಯಾಘಾತದಿಂದ ನಿಧನರಾದರು. ಈಗ ಸ್ಪಂದನಾ ಇಲ್ಲ ಎನ್ನುವ ನೋವು ವಿಜಯ್ ರಾಘವೇಂದ್ರ ಅವರಿಗೆ ಕಾಡುತ್ತಿದೆ. ಹೀಗಿದ್ದರೂ ಪತ್ನಿಗೆ ವಿಶ್ ಮಾಡೋದನ್ನು ಅವರು ಮರೆತಿಲ್ಲ.