ಬೆಂಗಳೂರು: ತಾಯಿ ಚಾಮುಂಡೇಶ್ವರಿ ಕುರಿತು ಹೇಳುವಷ್ಟು ದೊಡ್ಡವನಲ್ಲ ಎಂದು ರಕ್ಷಕ್ ಬುಲೆಟ್ ಕ್ಷಮೆಯಾಚಿಸಿದ್ದಾರೆ.
ಶೋವೊಂದರಲ್ಲಿ ಡೈಲಾಗ್ ಮೂಲಕ ನಾಡದೇವಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ ಎಂದು ದೇವಿ ಆರಾಧಕರು ತಿರುಗಿ ಬಿದ್ದಿದ್ದರು.
ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನಟ ರಕ್ಷಕ್ ಬುಲೆಟ್ ಕ್ಷಮೆಯಾಚಿಸಿದ್ದು, ಯಾರಿಗಾದರೂ ಬೇಸರವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ಅಚಾತುರ್ಯ ನಡೆಯುವುದಿಲ್ಲ ಎಂದು ಮನವಿ ಮಾಡಿದ್ದಾರೆ.
ನಮ್ಮ ಫ್ಯಾಮಿಲಿ ಕೂಡ ತಾಯಿ ಚಾಮುಂಡೇಶ್ವರಿಯ ಪರಮ ಭಕ್ತರು. ನಮ್ಮ ತಂದೆ ಇದ್ದಾಗಿನಿಂದಲೂ ನಾವು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತಾ ಬಂದಿದ್ದೇವೆ.
ನಾನು ಉದ್ದೇಶಪೂರ್ವಕವಾಗಿ ತಾಯಿ ಚಾಮುಂಡೇಶ್ವರಿ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ. ನಾನು ಯಾವುದೇ ಕಾರ್ಯ ಪ್ರಾರಂಭಿಸಬೇಕಾದರೆ ಮೊದಲು ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತೇನೆ.
ನಾನು ಯಾರ ಭಾವನೆಗಳಿಗೂ, ಮನಸ್ಸಿಗೂ ನೋವುಂಟು ಮಾಡುವ ಕೆಲಸ ಮಾಡಿಲ್ಲ. ಯಾರಿಗಾದರೂ ಬೇಸರವಾಗಿದ್ದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಕ್ಷಮೆ ಕೋರಿದ್ದಾರೆ.