Mysore
28
scattered clouds

Social Media

ಶನಿವಾರ, 30 ಮೇ 2026
Light
Dark

ನಟ ದರ್ಶನ್‌ 49ನೇ ಹುಟ್ಟುಹಬ್ಬಕ್ಕೆ ಪತ್ನಿ ವಿಜಯಲಕ್ಷ್ಮೀ ಶುಭಾಶಯ

ನಟ ದರ್ಶನ್‌ ಅವರಿಗೆ ಇಂದು 49ನೇ ಹುಟ್ಟುಹಬ್ಬದ ಸಂಭ್ರಮ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್‌ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

ಕಳೆದ ವರ್ಷ ಜಾಮೀನಿನ ಮೇಳೇ ಜೈಲಿನಿಂದ ಹೊರಬಂದಿದ್ದ ದರ್ಶನ್‌ ಪತ್ನಿ, ಮಗ ಮತ್ತು ಕೆಲವು ಸ್ನೇಹಿತರ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ವರ್ಷ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್‌ ಹುಟ್ಟುಹಬ್ಬಕ್ಕೆ ಪತ್ನಿ ವಿಜಯಲಕ್ಷ್ಮೀ ವಿಶ್‌ ಮಾಡಿ ಪೋಸ್ಟ್‌ ಹಾಕಿದ್ದಾರೆ.

ದರ್ಶನ್‌ ಕೇಕ್‌ ಕಟ್‌ ಮಾಡುವ ಹಳೆಯ ಫೋಟೋ ಹಂಚಿಕೊಂಡು ವಿಶ್‌ ಮಾಡಿದ್ದಾರೆ. ದರ್ಶನ್‌ಗೆ ಪ್ರತಿದಿನ ಹುಟ್ಟುಹಬ್ಬ. ಪ್ರತಿ ದಿನ ಆಚರಿಸಲ್ಪಡುವ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 

Tags:
error: Content is protected !!