ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಮತ್ತು ಸೊಸೆ ಅವಿವಾ ಬಿದ್ದಪ್ಪ ಪೋಷಕರಾಗುತ್ತಿರುವ ಸಂತೋಷದಲ್ಲಿದ್ದಾರೆ.
ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಅಂಬರೀಷ್ ಮನೆಗೆ ಪುಟ್ಟ ಕಂದಮ್ಮನ ಆಗಮನವಾಗಲಿದ್ದು, ಅವಿವಾಗೆ ಸರಳವಾಗಿ ಸೀಮಂತ ಮಾಡಲಾಗಿದೆ.
ನಿನ್ನೆ ತುಂಬು ಗರ್ಭಿಣಿ ಅವಿವಾಗೆ ಸೀಮಂತ ಶಾಸ್ತ್ರ ಮಾಡಲಾಗಿದ್ದು, ಅವಿವಾ ಬಿದ್ದಪ್ಪ ಹಸಿರು ಬಣ್ಣದ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರಿನ ಸುಮಲತಾ ಅಂಬರೀಷ್ ಮನೆಯಲ್ಲೇ ಈ ಸೀಮಂತ ಸಂಭ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕ ಕನ್ನಡ ಚಿತ್ರರಂಗದ ನಾಯಕ-ನಾಯಕಿಯರು ಭಾಗಿಯಾಗಿದ್ದರು.
ಸರಳವಾಗಿ ನಡೆದ ಸೀಮಂತ ಸಂಭ್ರಮಕ್ಕೆ ಕುಟುಂಬಸ್ಥರು ಹಾಗೂ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.