Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಬ್ರೇಕ್‌ ಹಾಕಲು ಸರ್ಕಾರ ಬಿಗಿ ಕ್ರಮ

ಶಾಲಾ ಹಂತದಲ್ಲಿ ಆತ್ಮರಕ್ಷಣಾ ತರಬೇತಿ ನೀಡಲು ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಪಟ್ಟಂತೆ ಸರ್ಕಾರ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಶಾಲಾ ಹಂತದಲ್ಲಿ ಆತ್ಮರಕ್ಷಣಾ ತರಬೇತಿ ನೀಡುತ್ತಿದೆ ಎಂದು ಮಕ್ಕಳ ಮತ್ತು ಮಹಿಳಾ ಅಭಿವೃದ್ದಿ ಸಚಿವ ಆಚಾರ್ ಹಾಲಪ್ಪ ತಿಳಿಸಿದ್ದಾರೆ.
ವಿಧಾನಪರಿಷತ್‌ನಲ್ಲಿ ಸದಸ್ಯರಾದ ಸಲೀಂ ಅಹಮ್ಮದ್ ಪರವಾಗಿ ವಿಪಕ್ಷ ನಾಉಕ ಬಿ.ಕೆ.ಹರಿಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಮಹಿಳೆಉರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ವಿವರ ನೀಡಿದರು. ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಲು ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಶಾಲೆಗಳಲ್ಲಿ ಕರಾಟೆ, ಜೂಡೋ, ತಾಕ್ವಾಂಡೊ ಆತ್ಮರಕ್ಷಣಾ ತರಬೇತಿಉನ್ನು ನೀಡಲಾಗುತ್ತಿದೆ. ಈವರೆಗೂ 1,754 ಮೆಟ್ರಿಕ್ ಪೂರ್ವ, 25 ಸಾವಿರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರು ತರಬೇತಿ ಪಡೆದಿದ್ದಾರೆ ಎಂದರು.
ಆದರೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು, ಈ ರೀತಿಯ ತರಬೇತಿಗಳಿಂದ ದೌರ್ಜನ್ಯ ನಿಲ್ಲುವುದಿಲ್ಲ. ಪೊಲೀಸ್ ಠಾಣೆಗಳನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕು ಎಂದರು.
ಸದಸ್ಯೆ ಭಾರತಿ ಶೆಟ್ಟಿ ಅವರು ಸ್ವಾತಂತ್ರ್ಯದ  ನಂತರದಿಂದಲೂ ಈ ರೀತಿಯ ಪ್ರಕರಣದಿಂದ ತಲೆತಗ್ಗಿಸುವ ವಾತಾವರಣವಿದೆ. ಸರ್ಕಾರ ಶಾಲಾ ಶಿಕ್ಷಣದಲ್ಲಿ ನೈತಿಕ ಪಠ್ಯವನ್ನು ಅಳವಡಿಸಬೇಕೆಂದು ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೆ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ದೌರ್ಜನ್ಯ ಪ್ರಕರಣಗಳು ತೀವ್ರಗೊಂಡಿವೆ ಎಂದು ಆಕ್ಷೇಪಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!