ಸದಾ ಒಂದಲ್ಲ ಒಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್) ಇದೇ ಸೆಪ್ಟೆಂಬರ್ ೪ರಂದು ನೇಮಕಾತಿ ಪರೀಕ್ಷೆ ನಡೆಸಲು ಮುಂದಾಗಿದೆ. ಇದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹೋರಾಟ ನಡೆಸುತ್ತಿದೆ. ಏನಿದರ ಒಳ ಮರ್ಮ ಎಂಬುದನ್ನು ಎರಡು ಭಿನ್ನ ದನಿಗಳು ಇಲ್ಲಿ ವ್ಯಕ್ತಪಡಿಸಿವೆ.
ನೇಮಕಾತಿಗೆ ಅರ್ಜಿ ಶುಲ್ಕ ಸ್ವೀಕರಿಸುವುದೂ ಹಗರಣವೇ?
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್) ಚೆನ್ನಾಗಿ ನಡೆಯುವುದು ಕರ್ನಾಟಕ ರಾಜ್ಯ ರೈತ ಸಂಘದವರಿಗೆ ಇಷ್ಟವಿಲ್ಲ ಅನಿಸುತ್ತದೆ. ಈ ಹಿಂದೆ ಮನ್‌ಮುಲ್‌ಗೆ ಬರುತ್ತಿದ್ದ ಹಾಲಿನ ಟ್ಯಾಂಕ್‌ಗೆ ರಾತ್ರೋರಾತ್ರಿ ನೀರನ್ನು ಮಿಶ್ರಣ ಮಾಡುತ್ತಿದ್ದುದ್ದನ್ನು ನಾವು ಪತ್ತೆ ಹಚ್ಚಿದೆವು. ಅದರಿಂದ ಆಗುತ್ತಿದ್ದ ಭಾರೀ ನಷ್ಟವನ್ನು ತಪ್ಪಿಸಲಿಲ್ಲವೇ? ಈ ಹಿಂದಿನ ಆಡಳಿತ ಮಂಡಳಿಯವರು ಸ್ಥಾಪಿಸಿದ ಮೆಗಾ ಡೇರಿ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಹೊಸದಾಗಿ ಬೆಲ್ಲದಿಂದ ಬರ್ಫಿ ಮತ್ತು ಲಾಡು ತಯಾರಿಸುವ ವಿಧಾನ ಅನ್ವೇಷಿಸಿದ್ದೇವೆ. ಹಸುಗಳಿಗೆ ವಿಮೆ ಮಾಡಿಸಿಕೊಟ್ಟು ರೈತರ ಹಿತ ಕಾಪಾಡುತ್ತಿದ್ದೇವೆ. ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ರೈತ ಸಂಘದವರ ಕಣ್ಣಿಗೆ ಕಾಣುತ್ತಿಲ್ಲವೇ? ಮನ್‌ಮುಲ್‌ನಲ್ಲಿ ೫-೬ ವರ್ಷಗಳ ಹಿಂದೆಯೇ ಪ್ರತಿದಿನ ೬ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಆಗ ಕರ್ನಾಟಕ ಹಾಲು ಮಹಾಮಂಡಳಿಯವರು ಅನುಮೋದನೆ ನೀಡಿ ಹೆಚ್ಚುವರಿ ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದರು. ಹೊಸ ಹುದ್ದೆಗಳನ್ನು ನಾವು ಸೃಷ್ಟಿಸಿಲ್ಲ. ಅವರು ನೀಡಿದ್ದ ೫೨೦ ಹುದ್ದೆಗಳಿಗೆ ನಾವು ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದೇವೆ. ಮನ್‌ಮುಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದವರ ಪೈಕಿ ಸದ್ಯ ೨೪೦ ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಮಿಕ್ಕವರೆಲ್ಲ ನಿವೃತ್ತರಾಗಿದ್ದಾರೆ.
ಮಾನವ ಸಂಪನ್ಮೂಲ ಇಲ್ಲದೆ ಕೆಲಸ ನಡೆಯುವುದು ಹೇಗೆ ಎಂಬುದನ್ನು ರೈತ ಸಂಘದವರೇ ತಿಳಿಸಿಕೊಡಬೇಕು. ಸದ್ಯ ಪ್ರತಿದಿನ ೧೦,೩೭,೬೦೦ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಡೇರಿಗೆ ಹಾಲು ಸರಬರಾಜು ಮಾಡುತ್ತಿರುವ ಸಹಕಾರ ಸಂಘಗಳ ಲೆಕ್ಕವನ್ನು ನೋಡಬೇಕಲ್ಲವೇ? ಒಬ್ಬ ಇಒ ೮೦ ಸಂಘಗಳ ಲೆಕ್ಕವನ್ನು ನೋಡುತ್ತಿದ್ದಾರೆ. ನಿಯಮದ ಪ್ರಕಾರ ೨೦ ಸಂಘಗಳನ್ನಷ್ಟೇ ನೋಡಬೇಕು. ಕಾರ್ಯಭಾರ ಹಂಚಿಕೆಯಾದರೆ ಕೆಲಸಗಳು ಇನ್ನಷ್ಟು ಸಲೀಸಾಗಿ ನಡೆಯುತ್ತವೆ. ಡೇರಿಗೆ ೬ ಮಂದಿ ಭದ್ರತಾ ಸಿಬ್ಬಂದಿ ಬೇಕು. ಈಗ ಕೇವಲ ಇಬ್ಬರು ಇದ್ದಾರೆ. ಇಂತಹ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಬೇಕಲ್ಲವೇ? ಮನ್‌ಮುಲ್‌ನಲ್ಲಿ ಇನ್ನೂ ನೇಮಕಾತಿಯೇ ಆಗಿಲ್ಲ. ಕೇವಲ ಅರ್ಜಿ ಶುಲ್ಕ ತೆಗೆದುಕೊಳ್ಳುವುದನ್ನೇ ಹಗರಣ ಎಂದರೆ ಹೇಗೆ? ಇವರಿಗೆ ಏನಾಗಿದೆ, ಉದ್ದೇಶ ಪೂರ್ವಕವಾಗಿ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಒಕ್ಕೂಟ ಬೆಳೆಯಲು ರೈತ ಸಂಘದವರು ಸಹಾಯ ಮಾಡಬೇಕು. ಮುಂದಿನ ಸೆಪ್ಟೆಂಬರ್ ತಿಂಗಳಲ್ಲಿ ಮೆಗಾ ಡೇರಿ ಆರಂಭವಾಗಲಿದೆ.
ನಮ್ಮಲ್ಲಿ ಹೆಚ್ಚು ಉತ್ಪಾದನೆಯಾಗುತ್ತಿದ್ದ ಹಾಲನ್ನು ಬೇರೆ ಕಡೆಗೆ ಕಳುಹಿಸಿ, ಹಣ ಕೊಟ್ಟು ಪೌಡರ್ ಮಾಡಿಕೊಂಡು ತರುತ್ತಿದ್ದೆವು. ಮುಂದಿನ ದಿನಗಳಲ್ಲಿ ಪೌಡರ್ ಉತ್ಪಾದನೆ ನಮ್ಮಲ್ಲೆ ಆಗುತ್ತದೆ. ರೈತರ ಬೆಳವಣಿಗೆಗೆ ಹೋರಾಟ ಮಾಡಿ. ದುರುದ್ದೇಶದಿಂದ ಮಾಡಬೇಡಿ.
ಮನ್‌ಮುಲ್ ನೇಮಕಾತಿ;ಎಚ್ಚರಿಕೆ ಅಗತ್ಯ
ರಾಜ್ಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ.
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್) ಇದೇ ಸೆಪ್ಟೆಂಬರ್ ೪ರಂದು ನೇಮಕಾತಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಪ್ರಾಮಾಣಿಕತೆಯಿಂದ ಪರೀಕ್ಷೆ ಎದುರಿಸುವುದು ಒಳಿತು. ಒಂದು ವೇಳೆ ಹಣಕಾಸು ವ್ಯವಹಾರ ನಡೆಸಿದಲ್ಲಿ ಮುಂದೊಂದು ದಿನ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಕರ್ನಾಟಕ ರಾಜ್ಯ ರೈತ ಸಂಘವಂತೂ ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಮನ್‌ಮುಲ್‌ನಲ್ಲಿ ೨೮೫ ಖಾಯಾ ನೌಕರರು ಹಾಗೂ ೧೩೦೦ ಹೊರ ಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೂ ೫೨೦ ಹುದ್ದೆಗಳಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸಹಕಾರ ಇಲಾಖೆಯ ಉಪನಿಬಂಧಕರಿಂದ ಮಂಜೂರಾತಿ ಪಡೆದುಕೊಂಡಿದ್ದಾರೆ. ಮೆಗಾ ಡೇರಿ ನಿರ್ವಾಣವಾಗಿರುವಾಗ ಇಷ್ಟೊಂದು ಹುದ್ದೆುಂ ಅಗತ್ಯವಿಲ್ಲದಿದ್ದರೂ ಯಾಕೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ೧೮೭ ಹುದ್ದೆಗಳಿಗೆ ಮತ್ತೆ ನೇಮಕಾತಿ ಪ್ರಕ್ರಿಯೆಯಿಂದ ಮನ್‌ಮುಲ್‌ಗೆ ಇನ್ನಷ್ಟು ಆರ್ಥಿಕ ಹೊರೆ ಬೀಳಲಿದೆ. ಈ ನೇಮಕಾತಿಗೆ ತಡೆಯಾಜ್ಞೆ ನೀಡುವಂತೆ ರಾಜ್ಯ ಉಚ್ಚ ನ್ಯಾಾಂಲುಂದಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಜತೆಗೆ ಮೆಗಾ ಡೇರಿ ಸ್ಥಾಪನೆುಂಲ್ಲಿ ನಡೆದಿರುವ ಅವ್ಯವಹಾರ ಕುರಿತು ಲೋಕಾುುಂಕ್ತರಿಗೂ ದೂರು ನೀಡಲು ಸಿದ್ಧತೆ ನಡೆಸಿದ್ದೇವೆ. ಇದರ ಜತೆಗೆ ೨೮೦ ಕೋಟಿ ರೂ. ಖರ್ಚು ಮಾಡಿ ಮೆಗಾ ಡೇರಿ ಸ್ಥಾಪಿಸಿದ್ದಾರೆ. ಅದರಲ್ಲೂ ೭೨ ಕೋಟಿ ರೂ. ಹಗರಣ ಆಗಿರುವ ಬಗ್ಗೆ ಸಾಬೀತಾಗಿದ್ದರೂ ಹಳೇ ಆಡಳಿತ ಮಂಡಳಿಯಿಂದ ಈಗಿನ ಆಡಳಿತ ಮಂಡಳಿಯವರು ವಸೂಲು ಮಾಡಿಲ್ಲ. ಜತೆಗೆ ೪ ಸಾವಿರ ಕೆ.ವಿ. ಸಾಮರ್ಥ್ಯದ ವಿದ್ಯುತ್ ಅವಶ್ಯಕತೆ ಇದ್ದು, ಆಡಳಿತ ಮಂಡಳಿುಂವರು ಸೆಸ್ಕ್‌ನಿಂದ ಸಂಪರ್ಕವನ್ನು ಪಡೆದುಕೊಳ್ಳದೆ ೨೫೦೦ ಕೆ.ವಿ. ಸಾಮರ್ಥ್ಯದ ಡೀಸೆಲ್ ಜನರೇಟರನ್ನು ಖರೀದಿ ವಾಡಿದ್ದಾರೆ. ಇದರಿಂದ ಒಕ್ಕೂಟಕ್ಕೆ ಪ್ರತಿ ತಿಂಗಳು ೧ ಕೋಟಿ ರೂ.ಗಳಿಗೂ ಅಧಿಕ ನಷ್ಟ ಮಾಡುತ್ತಿದ್ದಾರೆ. ಮನ್‌ಮುಲ್ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿಯಿದ್ದು ಅಷ್ಟರೊಳಗೆ ಕಿಸೆ ತುಂಬಿಸಿಕೊಳ್ಳಲು ಈ ಎಲ್ಲ ಚಟುವಟಿಕೆಗಳನ್ನೂ ನಡೆಸುತ್ತಿದ್ದಾರೆ. ೧೯೮೩ರಲ್ಲಿ ಸ್ಥಾಪನೆಯಾದ ಮನ್‌ಮುಲ್ ಸದ್ಯ ೧ ಲಕ್ಷ ರೈತ ಕುಟುಂಬಗಳಿಗೆ ಆಶ್ರಯವಾಗಿದೆ. ಕಬ್ಬು ಬೆಳೆಯುವ ರೈತರು ಹಣ ನಿರೀಕ್ಷಿಸುವುದು ವರ್ಷಕ್ಕಾದರೂ, ಮನ್‌ಮುಲ್‌ನಿಂದ ಆಯಾ ತಿಂಗಳ ಖರ್ಚಿಗೆ ಹಣ ಸಿಗುವಂತಾಗಿದೆ. ನಾವು ಕೇಳೋದು ಒಂದೇ ಮಾತು ಪ್ರತಿ ಲೀಟರ್ ಹಾಲಿಗೆ ೪೦ ರೂ. ಕೊಡಿ. ಮನ್‌ಮುಲ್‌ನವರು ಏನು ಬೇಕಾದರೂ ಮಾಡಿಕೊಳ್ಳಿ ಎಂದಷ್ಟೇ ಹೇಳಲು ಬಯಸುತ್ತೇನೆ. ಮನ್‌ಮುಲ್‌ನಲ್ಲಿ ನಡೆದಿರುವ ಹಗರಣ ಹಾಗೂ ನೇಮಕಾತಿ ಪ್ರಕ್ರಿಯನ್ನು ಪ್ರಶ್ನಿಸಿ ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ಅವರಿಗೆ ಮನವರಿಕೆ ವಾಡಿಕೊಡಲು ಶೀಘ್ರದಲ್ಲೇ ಭೇಟಿ ವಾಡಿ ಮನವಿ ಸಲ್ಲಿಸಿ ಭ್ರಷ್ಟಾಚಾರ ತನಿಖೆಗೆ ಆಗ್ರಹಪಡಿಸುತ್ತೇವೆ.