Mysore
23
overcast clouds

Social Media

ಶನಿವಾರ, 19 ಏಪ್ರಿಲ 2025
Light
Dark

ವೈಡ್ ಆಂಗಲ್ : ಮಾರ್ಚ್‌ನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಕೊನೆಗೂ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ 14ನೇ ಆವೃತ್ತಿಯ ದಿನಾಂಕ ನಿಗದಿಯಾಗಿದೆಮಾರ್ಚ್ 23ರಿಂದ 30ರ ವರೆಗೆ ಈ ಉತ್ಸವ ನಡೆಯಲಿದ್ದುಸಂಘಟನಾ ಸಮಿತಿಯ ಅಧ್ಯಕ್ಷರಾಗಿವಾರ್ತಾ ಸಚಿವರೂ ಆಗಿರುವ ಮುಖ್ಯಮಂತ್ರಿಗಳ ಬದಲುಕಂದಾಯ ಸಚಿವರಾದ ಆರ್.ಅಶೋಕ್ ಅವರಿಗೆ ಜವಾಬ್ದಾರಿ ನೀಡಲಾಗಿದೆಮೊನ್ನೆಬಹುತೇಕ ಅವರ ಕ್ಷೇತ್ರದ ಮೂಲಕ ಹಾದುಹೋಗುವ ಬೆಂಗಳೂರಿನ ವರ್ತುಲ ರಸ್ತೆಯನಾಯಂಡ ಹಳ್ಳಿಯಿಂದ ಬನ್ನೇರುಘಟ್ಟ ರಸ್ತೆಯವರೆಗೆ ಸುಮಾರು ಹನ್ನೆರಡು ಕಿ.ಮೀಉದ್ದದ ರಸ್ತೆಗೆ ‘ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ರಸ್ತೆ’ ಎಂದು ಅಧಿಕೃತವಾಗಿ ಹೆಸರಿಡುವ ಕಾರ್ಯಕ್ರಮ ಅವರ ಕ್ಷೇತ್ರದಲ್ಲಿ ಇತ್ತುಅಂದು ಕನ್ನಡ ಚಿತ್ರರಂಗದ ಸಂಗೀತ ಸಂಯೋಜಕರುಗಾಯಕಗಾಯಕಿಯರು ಪಾಲ್ಗೊಂಡು ಸಂಗೀತ ರಸಸಂಜೆ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು.

14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಲಾಂಛನವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತುಕಳೆದ ವರ್ಷ ಮಾರ್ಚ್ 3ರಂದು ಚಿತ್ರೋತ್ಸವದ 13ನೇ ಆವೃತ್ತಿ ಉದ್ಘಾಟನೆಯಾಗಿತ್ತುಮಾರ್ಚ್ 3ಕಾಕತಾಳೀಯವಾಗಿ ಕನ್ನಡದ ಮೊದಲ ವಾಕ್ಚಿತ್ರ ಬಿಡುಗಡೆಯ ದಿನವೂ ಆಗಿದ್ದರಿಂದಮುಂದೆ ಪ್ರತಿವರ್ಷ ಚಿತ್ರೋತ್ಸವವನ್ನು ಅದೇ ದಿನ ಆರಂಭಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದರುಮಾತ್ರವಲ್ಲಅದನ್ನು ʼವಿಶ್ವ ಕನ್ನಡ ಸಿನಿಮಾ ದಿನ’ ಎಂದು ಈ ಮೂಲಕ ಆಚರಿಸುವುದಾಗಿ ಹೇಳಿದರು.

ಆದರೆ ಅದು ಸಾಧ್ಯವಾಗಲಿಲ್ಲವೆನ್ನಿಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದೆವಿಶ್ವಾದ್ಯಂತ ನಡೆಯುವ ಅತ್ಯಂತ ಪ್ರತಿಷ್ಠಿತ ಚಿತ್ರೋತ್ಸವಗಳ ಸಾಲಿಗೆ ಆ ಮೂಲಕ ಇದು ಸೇರಿದೆಸಾಮಾನ್ಯವಾಗಿ ಮಾನ್ಯತೆ ಪಡೆದ ಚಿತ್ರೋತ್ಸವಗಳು ಪ್ರತಿ ವರ್ಷ ನಿಗದಿತ ದಿನಾಂಕಗಳಲ್ಲೇ ನಡೆಯಬೇಕುಕೊರೊನಾ ದಿನಗಳಲ್ಲಿ ಸ್ವಲ್ಪ ಏರುಪೇರಾದದ್ದುವರ್ಚುವಲ್ ಆಗಿ ನಡೆದದ್ದು ಹೊರತುಪಡಿಸಿದರೆಈ ಉತ್ಸವಗಳ ದಿನಾಂಕಗಳು ಬದಲಾಗಲಿಲ್ಲಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ ಪ್ರತಿವರ್ಷ ನವೆಂಬರ್ ೨೦ರಿಂದ ೨೮ರವರೆಗೆ ಗೋವಾದ ಪಣಜಿಯಲ್ಲಿ ನಡೆಯುತ್ತದೆ.

ಲಾಂಛನ ಬಿಡುಗಡೆಯ ಮಾರನೇ ದಿನವೇ ಸಂಘಟನಾ ಸಮಿತಿಯ ಸಭೆಯ ನಂತರ ಮಾಧ್ಯಮಗೋಷ್ಠಿ ಸಂಘಟನಾ ಸಮಿತಿಯ ಅಧ್ಯಕ್ಷರ ಮಾಧ್ಯಮ ಗೋಷ್ಠಿ ಇತ್ತುಚಿತ್ರೋತ್ಸವದ ಉದ್ಘಾಟನಾ ಸಮಾರಂಭ ವಿಧಾನಸೌಧದ ಮೆಟ್ಟಲುಗಳ ಮೇಲೆ ನಡೆಯಲಿದ್ದುದೇಶವಿದೇಶಗಳ ಚಿತ್ರರಂಗದ ಗಣ್ಯರನ್ನು ಅತಿಥಿಗಳಾಗಿ ಆಹ್ವಾನಿಸಲು ನಿರ್ಧರಿಸಲಾಗಿದೆ ಎಂದರು.

ಹಿಂದೆ ಚಿತ್ರೋತ್ಸವ ನಡೆಯುತ್ತಿದ್ದ ಓರಿಯಾನ್ ಮಾಲ್‌ನಲ್ಲಿರುವ 11 ಪರದೆಗಳಲ್ಲಿ ಚಿತ್ರೋತ್ಸವದ ಚಿತ್ರಗಳ ಪ್ರದರ್ಶನ ನಡೆಯಲಿದೆಏಷ್ಯನ್ ಚಿತ್ರಗಳುಭಾರತೀಯ ಚಿತ್ರಗಳು ಮತ್ತು ಕನ್ನಡ ಚಿತ್ರಗಳ ಸ್ಪರ್ಧೆ ಇದ್ದುಈ ಬಾರಿ ಗೆದ್ದ ಚಿತ್ರಗಳಿಗೆ ನೀಡುವ ನಗದು ಮೊತ್ತವನ್ನು ಹೆಚ್ಚಿಸುವ ನಿರ್ಧಾರ ಮಾಡಲಾಗಿದೆಸ್ಪರ್ಧಾ ವಿಭಾಗದ ಚಿತ್ರಗಳಿಗಾಗಿ ಪ್ರಕಟಣೆಅಂತಿಮ ದಿನದ ನಂತರ ಅವುಗಳಲ್ಲಿ ಸ್ಪರ್ಧೆಗೆ ಚಿತ್ರಗಳ ಆಯ್ಕೆ ಇವು ಸಾಕಷ್ಟು ಕಾಲಾವಕಾಶ ಬೇಡುವ ವಿಷಯಬಹಳ ಕಡಿಮೆ ದಿನಗಳಲ್ಲಿ ಅವುಗಳ ಆಯ್ಕೆ ಮಾಡುವ ಸವಾಲಿದೆ.

ಕಳೆದ ವರ್ಷ ಸ್ಪರ್ಧೆಗಾಗಿ ಆಯ್ಕೆ ಮಾಡಿದ ಚಿತ್ರಗಳುಆಯ್ಕೆ ಮಾಡಿದವರ ಶಿಫಾರಸುಆಯ್ಕೆಗಾರರ ಆಯ್ಕೆ ಕುರಿತಂತೆ ಸಾಕಷ್ಟು ಮಾತು ಕೇಳಿ ಬಂದಿತ್ತುಪತ್ರಿಕಾ ಗೋಷ್ಠಿಯಲ್ಲಿ ಸಚಿವರು, ‘ವಿವಾದಕ್ಕೆ ಆಸ್ಪದವಿಲ್ಲದಂತೆಅರ್ಹರುಸಮರ್ಥರನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ಉತ್ತಮ ರೀತಿಯಲ್ಲಿ ರಚಿಸುವಂತೆ ಸಲಹೆ ನೀಡಲಾಗಿದೆ’ ಎನ್ನುವ ಮೂಲಕ ಇದು ತಮ್ಮ ಗಮನಕ್ಕೂ ಬಂದಿದೆ ಎನ್ನುವುದನ್ನು ಹೇಳಿದರು.

ಸ್ಪರ್ಧಾ ವಿಭಾಗದ ಹೊರತಾಗಿಸಮಕಾಲೀನ ವಿಶ್ವ ಸಿನಿಮಾದೇಶ ಕೇಂದ್ರಿತ ಚಿತ್ರಗಳುಪುನರವಲೋಕನ ವಿಭಾಗದಲ್ಲಿ ವಿಶ್ವ ಸಿನಿಮಾಭಾರತೀಯ ಸಿನಿಮಾಕನ್ನಡ ಸಿನಿಮಾಗಳ ಉತ್ಕೃಷ್ಟ ಚಿತ್ರಗಳೇ ಮೊದಲಾದವು ಇರಲಿವೆಚಿತ್ರೋತ್ಸವದ ಥೀಮ್ ಇನ್ನೂ ಅಂತಿಮವಾಗಿಲ್ಲಇತ್ತೀಚೆಗೆ ನಮ್ಮನ್ನಗಲಿದ ಚೇತನಗಳ ನೆನಪುತಜ್ಞರಿಂದ ಉಪನ್ಯಾಸಕಾರ್ಯಾಗಾರಗಳುವಿಚಾರ ಸಂಕಿರಣವೇ ಮೊದಲಾದ ಕಾರ್ಯಕ್ರಮಗಳು ಎಂದಿನಂತೆ ಇರಲಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿಚಿತ್ರೋತ್ಸವಗಳ ಮೂಲಕ ಕನ್ನಡ ಚಿತ್ರರಂಗ ತನ್ನದೇ ಆದ ಛಾಪನ್ನು ಮೂಡಿಸಿಕೊಂಡಿದೆಈಗಲೂ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಕನ್ನಡ ಚಿತ್ರಗಳು ವಿಜೃಂಭಿಸುತ್ತಿವೆಪೆದ್ರೋಪಿಂಕಿ ಎಲ್ಲಿಶಿವಮ್ಮಕೋಳಿ ಎಸ್ರುಹದಿನೇಳೆಂಟು… ಹೀಗೆ ಹಲವು ಚಿತ್ರಗಳು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ವಿಮರ್ಶಕರ ಮೆಚ್ಚುಗೆ ಗಳಿಸಿವೆಪ್ರಶಸ್ತಿಗಳಿಗೆ ಭಾಜನವಾಗಿವೆ.

ಜನಪ್ರಿಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗ ಇದೀಗ ವಿಶ್ವದಾದ್ಯಂತ ತನ್ನದೇ ಆದ ಛಾಪನ್ನು ಮೂಡಿಸತೊಡಗಿದೆಭಾರತೀಯ ಚಿತ್ರಗಳೆಂದರೆಬಾಲಿವುಡ್ ಎಂದು ಕರೆಸಿಕೊಳ್ಳುವ ಹಿಂದಿ ಚಿತ್ರರಂಗದ ಭ್ರಮೆಯನ್ನು ಕಳೆದ ವರ್ಷ ದಕ್ಷಿಣ ಭಾರತದ ಹಲವು ಚಿತ್ರಗಳು ಕಳಚಿವೆಕನ್ನಡದ ‘ಕೆಜಿಎಫ್ ಚಾಪ್ಟರ್ 2’, ‘ಕಾಂತಾರ’ ಚಿತ್ರಗಳು ಹಲವು ಹೊಸ ದಾಖಲೆಗಳನ್ನು ಬರೆದವು.

ಕಡಿಮೆ ವೆಚ್ಚದಲ್ಲಿ ತಯಾರಾಗಿಬಹುಪಟ್ಟು ಲಾಭ ಮಾಡಿದ ‘ಕಾಂತಾರ’ ಚಿತ್ರ ವರ್ಷಗಳ ನಂತರ ಶತದಿನ ಸಂಭ್ರಮ ಕಂಡಿತುನಿರ್ಮಾಣ ಸಂಸ್ಥೆ ಹೊಂಬಾಳೆಶತದಿನೋತ್ಸವವನ್ನು ಕಳೆದ ವಾರ ಆಚರಿಸಿಕೊಂಡಿತುತಮ್ಮ ಚಿತ್ರ ಶತದಿನ, 75 ದಿನ, 50 ದಿನಗಳ ಪ್ರದರ್ಶನ ಕಂಡ ಚಿತ್ರಮಂದಿರಗಳ ಮಾಲೀಕರಿಗೆತಂತ್ರಜ್ಞರಿಗೆಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು ನಿರ್ಮಾಪಕ ವಿಜಯ್ ಕಿರಗಂದೂರು.

ಕನ್ನಡದ ಮುಖ್ಯವಾಹಿನಿ ಚಿತ್ರಗಳು ವಿಶ್ವದಾದ್ಯಂತ ಹೆಸರಾಗುತ್ತಿರುವ ಈ ದಿನಗಳಲ್ಲಿ ನಡೆಯುತ್ತಿರುವ ಚಿತ್ರೋತ್ಸವದಲ್ಲಿ ಆಧುನಿಕ ತಂತ್ರಜ್ಞಾನಗ್ರಾಫಿಕ್ಸ್ ಮತ್ತಿತರ ವಿಭಾಗಗಳ ಕುರಿತ ಚರ್ಚೆಮಾಹಿತಿ ವಿನಿಮಯಗಳಿಗಾಗಿ ಆಯಾಕ್ಷೇತ್ರಗಳಲ್ಲಿ ವಿಶ್ವಖ್ಯಾತರಾದ ತಜ್ಞರನ್ನು ಆಹ್ವಾನಿಸುವ ಯೋಜನೆ ಇದ್ದುಇದರ ಉಪಯೋಗವನ್ನು ಕನ್ನಡ ಚಿತ್ರೋದ್ಯಮ ಪಡೆದುಕೊಳ್ಳಬೇಕು ಎನ್ನುವ ಆಶಯ ಸಚಿವರದ್ದುಸಾಮಾನ್ಯವಾಗಿ ಅಂತಾರಾಷ್ಟ್ರೀಯ ಚಿತ್ರೋತ್ಸವಗಳ ಉದ್ದೇಶವೂ ಅದೇ ಆಗಿರುತ್ತದೆಇದನ್ನು ಸಿನಿಮಾ ತಂತ್ರಜ್ಞರ ಕಮ್ಮಟ ಎಂದೂ ಹೇಳಲಾಗುತ್ತದೆವಿಶ್ವದ ಶ್ರೇಷ್ಠ ಚಿತ್ರಗಳ ಪ್ರದರ್ಶನಸ್ಪರ್ಧೆಸಮಕಾಲೀನ ಚಿತ್ರಗಳುಕ್ಲಾಸಿಕ್‌ಗಳ ಪ್ರದರ್ಶನ ಒಂದೆಡೆಯಾದರೆಸಿನಿಮಾ ಮಾಧ್ಯಮದ ಜ್ಞಾನದ ಕೊಡುಕೊಳ್ಳು ಇಲ್ಲಿ ನಡೆಯುತ್ತದೆ.

ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವಕೇರಳಕೊಲ್ಕೊತ್ತಾಮುಂಬೈ ಮತ್ತು ಬೆಂಗಳೂರು ಚಿತ್ರೋತ್ಸವಗಳು ಮಾನ್ಯತೆ ಪಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವಗಳುಇವುಗಳಲ್ಲದೆಪೂನಾ ಮತ್ತು ಚೆನ್ನೈಚಿತ್ರೋತ್ಸವಗಳು ನಿಗದಿತ ವೇಳಾಪಟ್ಟಿಯಂತೆ ನಡೆಯುತ್ತಿವೆಇವುಗಳಿಗೆ ಅಲ್ಲಿನ ಸರ್ಕಾರಗಳೂ ನೆರವಾಗುತ್ತಿವೆಇವಲ್ಲದೆಇನ್ನೂ ಕೆಲವು ಚಿತ್ರೋತ್ಸವಗಳು ಭಾರತದಲ್ಲಿ ವೈಯಕ್ತಿಕ ನೆಲೆಯಲ್ಲಿ ನಡೆಯುತ್ತಿವೆವಿದೇಶಗಳಲ್ಲೂಅವುಗಳಲ್ಲಿ ಕೆಲವು ಆನ್‌ಲೈನ್ ಚಿತ್ರೋತ್ಸವಗಳಾದರೆಇನ್ನು ಕೆಲವು ಒಂದು ದಿನದವುಮತ್ತೆ ಕೆಲವಕ್ಕೆ ಶುಲ್ಕ ತೆತ್ತು ಪ್ರವೇಶ ಪಡೆದರೆ ಸಾಕುಅವು ಚಿತ್ರೋತ್ಸವದಲ್ಲಿ ಪಾಲ್ಗೊಂಡ ಪ್ರಮಾಣಪತ್ರವನ್ನು ಪಡೆದುಕೊಳ್ಳುವ ಅರ್ಹತೆ ಪಡೆದುಕೊಳ್ಳುತ್ತವೆವಿಶ್ವಾದ್ಯಂತ ನಡೆಯುವ ಹತ್ತುಸಾವಿರಕ್ಕೂ ಹೆಚ್ಚು ಚಿತ್ರೋತ್ಸವಗಳಲ್ಲಿಮಾನ್ಯತೆ ಪಡೆದ ಚಿತ್ರೋತ್ಸವಗಳನ್ನು ಹೊರತುಪಡಿಸಿದರೆಸುಮಾರು ನೂರರವರೆಗೆ ಪ್ರತಿಷ್ಠಿತ ಚಿತ್ರೋತ್ಸವಗಳಿವೆ.

 

ಭಾರತದ ಮತ್ತು ಕೇರಳದ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ವರ್ಷಪೂರ್ತಿ ಕೆಲಸ ಮಾಡುವ ನಿರ್ದೇಶನಾಲಯಗಳಿವೆಕೇಂದ್ರ ಸರ್ಕಾರ ಈಗ ಚಿತ್ರೋತ್ಸವ ನಿರ್ದೇಶನಾಲಯವನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಕೈಕೆಳಗೆ ತಂದಿದೆಕೇರಳದಲ್ಲಿ ಅದು ಚಲನಚಿತ್ರ ಅಕಾಡೆಮಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದುಪೂರ್ಣ ಪ್ರಮಾಣದ ಕಾರ್ಯಾಲಯ ಇದೆಅಂತಾರಾಷ್ಟ್ರೀಯ ನಿರ್ಮಾಪಕರ ಸಂಘಟನೆಗಳ ಮಹಾ ಒಕ್ಕೂಟದ ಮಾನ್ಯತೆ ಪಡೆಯುವ ವೇಳೆ ಅದು ಹೇಳುವ ನಿಬಂಧನೆಗಳಲ್ಲಿವರ್ಷಪೂರ್ತಿ ಕೆಲಸ ಮಾಡುವ ಚಿತ್ರೋತ್ಸವ ನಿರ್ದೇಶನಾಲಯ ಸ್ಥಾಪನೆಯೂ ಸೇರಿದೆಆ ನಿಟ್ಟಿನಲ್ಲಿ ಸರ್ಕಾರ ಯಾವಾಗ ಹೆಜ್ಜೆ ಇಡುತ್ತದೆ ನೋಡಬೇಕು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ