Mysore
32
scattered clouds

Social Media

ಭಾನುವಾರ, 27 ಏಪ್ರಿಲ 2025
Light
Dark

ವೈಡ್ ಆಂಗಲ್: ಕಾಯಕಲ್ಪದ ಕನಸಲ್ಲಿ 90ರ ಹೊಸ್ತಿಲಲ್ಲಿರುವ ಕನ್ನಡ ಚಿತ್ರರಂಗ

 ರುವ ಮಾರ್ಚ್ 3ರ ಶುಕ್ರವಾರಕನ್ನಡ ಚಿತ್ರರಂಗ 90ನೇ ವರ್ಷಕ್ಕೆ ಕಾಲಿಡಲಿದೆಕಳೆದ ವರ್ಷ ಕನ್ನಡ ಚಿತ್ರರಂಗದತ್ತ ಎಲ್ಲರೂ ಹೊರಳಿ ನೋಡುವಂತೆ ಮಾಡುವ ಚಿತ್ರಗಳು ತಯಾರಾದವು ಎನ್ನುವ ಹೆಗ್ಗಳಿಕೆಯೊಂದಿಗೆ 90ನೇ ವರ್ಷಕ್ಕೆ ಕಾಲಿಡುತ್ತಿರುವ ಕನ್ನಡ ಚಿತ್ರರಂಗಉಳಿದ ಭಾರತೀಯ ಭಾಷಾ ಚಿತ್ರರಂಗಗಳಂತೆ ಇದೆಯೇ ಎನ್ನುವ ಪ್ರಶ್ನೆ ಕೆಲವರಿಗಾದರೂ ಕಾಡತೊಡಗಿದೆಅದು ಉದ್ಯಮದ ದೃಷ್ಟಿಯಿಂದಾಗಬಹುದುಸದಭಿರುಚಿಯ ಚಿತ್ರಗಳ ದೃಷ್ಟಿಯಿಂದಾಗಬಹುದುಪರಸ್ಪರ ವೈಯಕ್ತಿಕ ಸಂಬಂಧಗಳದ್ದಾಗಬಹುದು.

ಮೊನ್ನೆ ಹಿರಿಯ ನಿರ್ದೇಶಕರಾದ ದೊರೆಭಗವಾನ್ ಜೋಡಿಯ ಭಗವಾನ್ ಬೆಂಗಳೂರಿನಲ್ಲಿ ನಿಧನರಾದರುಅಂತಿಮ ದರ್ಶನಕ್ಕೆ ಅವರ ಮನೆಯಲ್ಲಿ ಮಾತ್ರವಲ್ಲದೆರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿಯೂ ವಾಣಿಜ್ಯ ಮಂಡಳಿ ವ್ಯವಸ್ಥೆ ಮಾಡಿತ್ತುರಾಜಕುಮಾರ್ ಕುಟುಂಬದ ಸದಸ್ಯರು ಮತ್ತಿತರ ಕೆಲವರು ಅವರ ಮನೆಯಲ್ಲಿ ಅಂತಿಮ ದರ್ಶನ ಪಡೆದರುರವೀಂದ್ರ ಕಲಾಕ್ಷೇತ್ರಕ್ಕೆ ಬಂದ ನಟರಲ್ಲಿ ಅವರ ‘ಬಯಲುದಾರಿ’ ಮೊದಲ್ಗೊಂಡು ಹಲವು ಚಿತ್ರಗಳಲ್ಲಿ ನಟಿಸಿದ ಹಿರಿಯ ನಟ ಅನಂತನಾಗ್ಆದರ್ಶ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಅವರು ಪ್ರಾಂಶುಪಾಲರಾಗಿದ್ದ ವೇಳೆ ವಿದ್ಯಾರ್ಥಿಯಾಗಿಈಗ ದೊಡ್ಡ ಹೆಸರಾಗಿರುವ ನಟ ಗಣೇಶ್ ಪ್ರಮುಖರುನಿರ್ದೇಶಕರಲ್ಲಿ ನಾಗಾಭರಣಟಿ.ಎನ್.ಸೀತಾರಾಮ್ನಂಜುಂ ಡೇಗೌಡಕೋಡ್ಲು ರಾಮಕೃಷ್ಣ ಮತ್ತಿತರರಿದ್ದರುವಾಣಿಜ್ಯ ಮಂಡಳಿಯ ಪದಾಧಿಕಾರಿಗಳಿದ್ದರುಉಳಿದವರು ತಮ್ಮ ಸಾಮಾಜಿಕ ಜಾಲತಾಣಗಳಿಂದ ಶ್ರದ್ಧಾಂಜಲಿ ಅರ್ಪಿಸಿದ್ದರು.

ಭಗವಾನ್ ಅವರ ಜನ್ಮದಿನ ಮತ್ತು ಅವರು ನಿರ್ದೇಶಿಸಿದ ಚಿತ್ರಗಳ ಸಂಖ್ಯೆಯ ಕುರಿತಂತೆ ಅಲ್ಲಿ ಗೊಂದಲ ಇತ್ತುಅವರು ಹುಟ್ಟಿದ ದಿನ ಮತ್ತು ತೀರಿಕೊಂಡ ದಿನ ಒಂದೇ ಎಂದು ಅವರ ಮಗ ಅಲ್ಲಿ ಹೇಳಿದರೆಜುಲೈ 5ರಂದು ಅವರ ಜನ್ಮದಿನ ಎಂದು ಮತ್ತೊಂದು ದಾಖಲೆಇನ್ನು ಅವರು ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಐವತ್ತಕ್ಕೂ ಹೆಚ್ಚು ಎಂದು ಅವರೇ ಹೇಳಿಕೊಂಡಿದ್ದರುಅದು ಅವರು ಪಾಲ್ಗೊಂಡ ಚಿತ್ರಗಳ ಸಂಖ್ಯೆಸಹಾಯಕ ನಿರ್ದೇಶಕರಾಗಿಸಹ ನಿರ್ದೇಶಕರಾಗಿನಂತರ ನಿರ್ದೇಶಕರಾಗಿ ಅವರು ತೊಡಗಿಸಿಕೊಂಡ ಚಿತ್ರಗಳವುಅದೇಕೋ ಏನೋ ಅವರ ಕೊನೆಯ ದಿನಗಳಲ್ಲಿ ತಮ್ಮ ನಿರ್ದೇಶನದ ಚಿತ್ರಗಳ ಮೈಲಿಗಲ್ಲು ಎಂದು ಅಷ್ಟೂ ಚಿತ್ರಗಳ ಹೆಸರನ್ನು ಸೇರಿಸಿಬಿಟ್ಟಿದ್ದರುಅವರು ಎ.ಸಿ.ನರಸಿಂಹ ಮೂರ್ತಿಯವರ ಜೊತೆ ಸೇರಿ ನಿರ್ದೇಶಿಸಿದ ‘ಸಂಧ್ಯಾರಾಗ’ ಚಿತ್ರ ಮೊದಲ್ಗೊಂಡುತಮ್ಮ 87ನೇ ವಯಸ್ಸಿನಲ್ಲಿ ನಿರ್ದೇಶಿಸಿದ ‘ಆಡುವ ಬೊಂಬೆ’ ಚಿತ್ರದವರೆಗೆ 33 ಚಿತ್ರಗಳಿವೆಎರಡು ಚಿತ್ರಗಳು ಎ.ಸಿ.ನರಸಿಂಹಮೂರ್ತಿ ಅವರ ಜೊತೆಗೆ, 27 ಚಿತ್ರಗಳು ದೊರೆ ಅವರ ಜೊತೆಎರಡು ಚಿತ್ರಗಳನ್ನು ಒಂಟಿಯಾಗಿಎರಡು ಪರಭಾಷೆಯ ಚಿತ್ರಗಳು ಸೇರಿ ಒಟ್ಟು 33 ಚಿತ್ರಗಳಿವೆಸದಭಿರುಚಿಯ ಚಿತ್ರಗಳನ್ನು ನೀಡಿರುವ ನಿರ್ಮಾಪಕ/ನಿರ್ದೇಶಕರ ಮುಂದಿನ ಸಾಲಿನಲ್ಲಿ ಅವರೂ ಸೇರುತ್ತಾರೆ.

ಹ್ಞಾಂಕಳೆದ ವರ್ಷ ತಯಾರಾದ ಚಿತ್ರಗಳಲ್ಲಿ ‘ಕಾಂತಾರ’, ‘ಕೆಜಿಎಫ್ ಚಾಪ್ಟರ್ 2’, ʼ777 ಚಾರ್ಲಿ’, ‘ಗಂಧದ ಗುಡಿ’ ಮುಂತಾದ ಚಿತ್ರಗಳು ಅವುಗಳದೇ ದಾಖಲೆಯ ಕಾರಣದಿಂದ ಕನ್ನಡ ಚಿತ್ರರಂಗದತ್ತ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದವುಸುಮಾರು ನಾನೂರರವರೆಗೆ ಚಿತ್ರಗಳು ಕಳೆದ ವರ್ಷ ಪ್ರಮಾಣಪತ್ರ ಪಡೆದಿವೆಇವುಗಳಲ್ಲಿ ಡಬ್ ಆದವೂ ಸೇರಿವೆ ಎನ್ನಿಬಿಡುಗಡೆಯಾದ ಕನ್ನಡ ಚಿತ್ರಗಳ ಸಂಖ್ಯೆ 231ಆರು ತುಳು ಚಿತ್ರಗಳೂ ತೆರೆಕಂಡಿವೆಇವುಗಳಲ್ಲಿ ಸೋತ ಚಿತ್ರಗಳದೇ ಕಾರುಬಾರು.

2023ರಲ್ಲಿ ಚಿತ್ರಗಳ ಬಿಡುಗಡೆಯ ಭರಾಟೆಇಂದು ಬಿಡುಗಡೆ ಆಗುವ ಹನ್ನೊಂದು ಚಿತ್ರಗಳೂ ಸೇರಿದಂತೆಎರಡು ತಿಂಗಳಲ್ಲಿ 48 ಚಿತ್ರಗಳು ತೆರೆಗೆ ಬಂದಂತಾಯಿತುಇವುಗಳಲ್ಲಿ ಒಂದೆರಡು ಚಿತ್ರಗಳನ್ನು ಹೊರತುಪಡಿಸಿದರೆಉಳಿದವುಗಳಲ್ಲಿ ಹೆಚ್ಚಿನವು ಒಂದೆರಡು ಪ್ರದರ್ಶನಗಳೂ ಆಗಿಲ್ಲಕೆಲವು ಚಿತ್ರಗಳ ಪ್ರಚಾರ ಮತ್ತು ಜಾಹೀರಾತುಗಳ ದುಡ್ಡೂ ಗಳಿಕೆಯಾಗಿಲ್ಲ ಎನ್ನಲಾಗಿದೆ.

ಮಲ್ಟಿಪ್ಲೆಕ್ಸ್‌ಗಳಲ್ಲಿ ಎಲ್ಲ ಕಡೆ ಕನ್ನಡ ಚಿತ್ರಗಳಿಗೆ ಅವಕಾಶ ಸಿಗುತ್ತಿಲ್ಲಸಿಗುವ ಪರದೆಗಳಲ್ಲಿನ ಪ್ರದರ್ಶನ ವೇಳೆ ಕನ್ನಡ ಪ್ರೇಕ್ಷಕರಿಗೆ ಅನುಕೂಲಕರವಾಗಿರುವುದಿಲ್ಲ ಎನ್ನುವ ದೂರೂ ಇದೆಇಂತಹ ವಿಷಯಗಳತ್ತ ಗಮನ ಕೊಡುವವರು ಯಾರುಇದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಸೆಲ್ಯುಲಾಯಿಡ್ ದಿನಗಳಲ್ಲಿ ಯಾವುದೇ ಚಿತ್ರದ ಬಿಡುಗಡೆಗೆ ಮಿತಿ ಇರುತ್ತಿತ್ತುಎಷ್ಟು ಚಿತ್ರಮಂದಿರಗಳಲ್ಲಿ ತೆರೆಕಾಣಬೇಕೋ ಅಷ್ಟು ಪ್ರಿಂಟ್‌ಗಳು ಬೇಕಾಗಿದ್ದವುಈಗ ಒಂದೆಡೆಯಿಂದ ಎಲ್ಲ ಚಿತ್ರಮಂದಿರಗಳಿಗೂ ಸಂಪರ್ಕಿಸಿ ಒದಗಿಸುವ ವ್ಯವಸ್ಥೆ ಇದೆ.

ತಾರಾ ವರ್ಚಸ್ಸಿನ ನಟರ ಚಿತ್ರಗಳಿಗೆಇಲ್ಲವೇ ಹೆಸರಾಂತ ನಿರ್ಮಾಣ ಸಂಸ್ಥೆನಿರ್ಮಾಪಕರ ಚಿತ್ರಗಳಿಗೆ ಚಿತ್ರಮಂದಿರಗಳ ಲಭ್ಯತೆ ಕಷ್ಟಸಾಧ್ಯವೇನೂ ಅಲ್ಲಆದರೆ ಸಣ್ಣಪುಟ್ಟ ಚಿತ್ರಗಳ ಮಂದಿಗೆ ಚಿತ್ರಮಂದಿರಗಳನ್ನು ಹೊಂದಿಸುವುದು ಕಷ್ಟಸಾಧ್ಯಚಿತ್ರನಿರ್ಮಾಣವೇನೋ ಸುಲಭಆದರೆ ಬಿಡುಗಡೆ ಕಷ್ಟನಿರ್ಮಾಣಕ್ಕೆ ಹಾಕಿದ ಬಂಡವಾಳಕ್ಕಿಂತ ಹೆಚ್ಚು ಪ್ರಚಾರಕ್ಕೆ ಹೂಡಬೇಕಾದ ಪರಿಸ್ಥಿತಿ ಇದೆಈ ಡಿಜಿಟಲ್ ದಿನಗಳಲ್ಲಿ ಪ್ರಚಾರದ ಮೂಲಕವೇತಮ್ಮ ಚಿತ್ರಗಳಿಗೆ ಪ್ರೇಕ್ಷಕರನ್ನು ಸೆಳೆಯಬೇಕಾದ ಅನಿವಾರ್ಯತೆ ಇದೆಕೇವಲ ಸಾಂಪ್ರದಾಯಿಕ ಪ್ರಚಾರ ಈಗ ಸಾಕಾಗುವುದಿಲ್ಲ.

ಹಿಂದಿನ ದಿನಗಳಂತೆ ಕೇವಲ ಚಿತ್ರಮಂದಿರಗಳಲ್ಲಿ ಮಾತ್ರವಲ್ಲಒಟಿಟಿ ತಾಣಗಳಲ್ಲಿಉಪಗ್ರಹ ವಾಹಿನಿಗಳ ಮೂಲಕಜಾಲತಾಣಗಳಲ್ಲಿ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಇದೆಹಾಗಾಗಿ ಚಿತ್ರಮಂದಿರಗಳನ್ನು ಮಾತ್ರ ನೆಚ್ಚಿಕೊಂಡು ಪ್ರೇಕ್ಷಕರು ಇಲ್ಲ ಎನ್ನುವುದು ಕೂಡಾ ಹೌದುಚಿತ್ರಮಂದಿರಗಳವಿಶೇಷವಾಗಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರವೇಶ ದರ ಪ್ರೇಕ್ಷಕರನ್ನು ಅಲ್ಲಿಂದ ದೂರ ಮಾಡತೊಡಗಿದೆ ಎನ್ನುವ ಆಕ್ಷೇಪದಲ್ಲಿ ಹುರುಳಿಲ್ಲದೆ ಇಲ್ಲನಿರ್ಮಾಪಕರುವಿತರಕರು ಮನಸೋ ಇಚ್ಛೆ ಪ್ರವೇಶ ದರ ನಿಗದಿಪಡಿಸುವುದರಿಂದ ಸಾಮಾನ್ಯ ಪ್ರೇಕ್ಷಕನಿಗೆ ವಾರಕ್ಕೆ ಒಂದು ಚಿತ್ರ ನೋಡುವುದೂ ಸಾಧ್ಯವಾಗದೆ ಹೋಗಬಹುದು.

ನೆರೆಯ ತಮಿಳುನಾಡುಆಂಧ್ರಪ್ರದೇಶತೆಲಂಗಾಣಗಳಲ್ಲಿ ಇರುವಂತೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರವೇಶ ಶುಲ್ಕಕ್ಕೆ ನಿಯಂತ್ರಣ ಹೇರಬೇಕುಮರಾಠಿ ಚಿತ್ರಗಳಿಗೆ ಮಹಾರಾಷ್ಟ್ರದಲ್ಲಿ ಇರುವಂತೆ ಪ್ರತಿದಿನ ಕಡ್ಡಾಯವಾಗಿ ಎರಡು ಕನ್ನಡ ಚಿತ್ರಗಳ ಪ್ರದರ್ಶನದ ಆದೇಶ ನೀಡಬೇಕು ಇವೇ ಮುಂತಾಗಿ ಸರ್ಕಾರದ ಮುಂದೆ ಬೇಡಿಕೆಯನ್ನು ಇಡಲಾಗಿದೆಕಳೆದ ವಾರ ಮಂಡಿಸಲಾದ ೨೦೨೩೨೪ರ ಮುಂಗಡ ಪತ್ರದಲ್ಲಿ ಚಿತ್ರರಂಗಕ್ಕೆ ಅಂತಹ ಕೊಡುಗೆ ಏನೂ ಇರಲಿಲ್ಲ.

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಸಲು ಮುಂದಿನ ತಿಂಗಳು 23ರಿಂದ 30ರವರೆಗೆ ಎಂದು ದಿನಾಂಕ ನಿಗದಿಪಡಿಸಲಾಗಿದೆತೀರಾ ಕಡಿಮೆ ಅವಧಿಯಲ್ಲಿ ಇದರ ಸಿದ್ಧತೆ ಆಗಬೇಕಾಗಿದೆಸ್ಪರ್ಧಾ ವಿಭಾಗದ ಚಿತ್ರಗಳ ಆಯ್ಕೆಯ ಹೊರತಾಗಿಇತರ ವಿಭಾಗಗಳ ಚಿತ್ರಗಳ ಆಯ್ಕೆ ಅಷ್ಟೇನೂ ಕಷ್ಟಕರವಲ್ಲ ಎನ್ನಲಾಗಿದೆ.

ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರೋದ್ಯಮಕ್ಕೆ ರಾಜ್ಯ ಸರ್ಕಾರ ನೀಡುವುದಾಗಿ ಹೇಳಿರುವ ನೆರವುಸೌಲಭ್ಯಉತ್ತೇಜನಗಳನ್ನು ನೀಡದೆ ವರ್ಷಗಳಾಗಿವೆ. 2018ರ ಪ್ರಶಸ್ತಿ ಪ್ರದಾನ2019, 2020ರ ಪ್ರಶಸ್ತಿ ಆಯ್ಕೆ ಆಗಬೇಕಾಗಿದೆ. 2021ರ ಸಾಲಿಗೆ ಪ್ರಶಸ್ತಿ ಮತ್ತು ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ2019, 2020ರ ಸಾಲಿಗೆ ಸಹಾಯಧನಕ್ಕೆ ಚಿತ್ರಗಳ ಆಯ್ಕೆ ಆಗಬೇಕಾಗಿದೆ. 2022ರ ಸಾಲು ಮುಂದಿದೆ!

ಕನ್ನಡ ಚಿತ್ರರಂಗ 90ರ ವೇಳೆಗೆಸರ್ಕಾರ ಇವೆಲ್ಲವನ್ನೂ ಗಮನಿಸಲು ಸಾಧ್ಯವಾಗುವ ಸ್ಥಿತಿಯಲ್ಲಿ ಇದ್ದಂತಿಲ್ಲಅದರ ಗಮನವೆಲ್ಲ ಚುನಾವಣೆಯ ಕಡೆಗೆಚಿತ್ರೋದ್ಯಮದಲ್ಲಿರುವ ಸಂಘಟನೆಗಳು ಈ ಕುರಿತಂತೆ ಗಮನ ಹರಿಸಬಹುದೇ ಎಂದರೆಅಲ್ಲೂ ಮೂಡುತ್ತಿದೆ ಒಡಕಲು ಬಿಂಬನಿರ್ದೇಶಕರ ಸಂಘ ಮತ್ತಿನ್ನೇನೋ ತಕರಾರು ಎದುರಿಸುತ್ತಿರುವಂತಿದೆನಿರ್ಮಾಪಕರ ಸಂಘದ ಹೆಚ್ಚಿನ ಗಮನ ತನ್ನ ಸ್ವಂತ ಕಟ್ಟಡದ ಕಡೆಗಿದೆವಾಣಿಜ್ಯ ಮಂಡಳಿಯಲ್ಲಿ ಸನ್ಮಾನಸಂಭ್ರಮಗಳದೇ ಕಾರುಬಾರುಅದರಾಚೆ ಗಮನ ಕೊಡಲಿದೆಯೇ ಕಾದು ನೋಡಬೇಕುಎಲ್ಲ ಕಡೆ ಒಡೆದು ಆಳುವಬಾಳುವ ದಿನಗಳು..!

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ