Light
Dark

ಜನರ ಕಿವಿ ಮೇಲೆ ಹೂವಿಟ್ಟು ಗಹಗಹಿಸಿ ನಗುವವರು!

 

  ಮೋದಿಯವರು 2016ರ ಅಂತ್ಯದಲ್ಲಿ ದೇಶದ ಮೇಲೆ ಹಠಾತ್ತನೆ ಆರ್ಥಿಕ ಭೂಕಂಪವೊಂದನ್ನು ಹೇರಿ ಮಜಾ ನೋಡಿದರುಈ ಕ್ರಮ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹಿಂದೆ ಜಗ್ಗಿತೇ ವಿನಾ ಮುಂದಕ್ಕೆ ಒಯ್ಯಲಿಲ್ಲಬೆಟ್ಟ ಅಗೆಯಲಾಯಿತುಆದರೆ ಇಲಿಯೂ ಸಿಗಲಿಲ್ಲ ಎಂಬ ಕಹಿಸತ್ಯ ಜನಮನಕ್ಕೆ ನಿಧಾನವಾಗಿಯಾದರೂ ಇಳಿಯಿತು.

ನೋಟು ರದ್ದು ಕುರಿತು ಸುಪ್ರೀಂ ಕೋರ್ಟಿನ ಪಂಚ ಸದಸ್ಯ ಪೀಠದ ತೀರ್ಪು ಕಳೆದ ಜನವರಿಯಲ್ಲಿ ಹೊರಬಿದ್ದಿತ್ತುಬಹುಮತದ ತೀರ್ಪು ನೋಟು ರದ್ದು ಕ್ರಮವನ್ನು ಎತ್ತಿ ಹಿಡಿದಿತ್ತು.

ಮುಂಬರುವ ವರ್ಷಗಳಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಲಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ನೋಟು ರದ್ದು ಕ್ರಮವನ್ನು ಅಕ್ರಮ ಎಂದು ಭಿನ್ನಮತದ ತೀರ್ಪು ನೀಡಿದ್ದರುಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರು.

ಒಂದು ಸಾವಿರ ರೂಪಾಯಿ ನೋಟನ್ನು ರದ್ದು ಮಾಡಿ 2000 ರೂನೋಟನ್ನು ಮಾಡಿದ್ದೇ ದೊಡ್ಡ ತಪ್ಪುಕಪ್ಪುಹಣ ಸಂಗ್ರಹಿಸುವವರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಯಿತು. 2000 ರೂಪಾಯಿ ನೋಟನ್ನು ಮುದ್ರಿಸಿದ್ದೂ ತಪ್ಪುಇಂದು ಅದನ್ನು ರದ್ದು ಮಾಡಿದ್ದೂ ತಪ್ಪುದೇಶದ ಕರೆನ್ಸಿಯೊಂದಿಗೆ ಹುಡುಗಾಟ ಆಡಲಾಗುತ್ತಿದೆ.

ನೋಟು ರದ್ದು ಯಶಸ್ವಿಯಾದರೆ ಮೋದಿಯವರು ಹೀರೋ ಇಲ್ಲವಾದರೆ ಝೀರೋ’ ಎಂಬುದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತಿತರ ನಾಯಕರು ನುಡಿದಿದ್ದ ಭವಿಷ್ಯವಾಣಿ.

ನೋಟು ರದ್ದಿನ ಸಂಕಟ ಐವತ್ತು ದಿನಗಳ ನಂತರ ಶಮನಗೊಳ್ಳದೆ ಹೋದರೆ ಜೀವಂತ ಸುಡುವ ಶಿಕ್ಷೆಗೆ ತಮ್ಮನ್ನು ಗುರಿ ಮಾಡಿ ಎಂದಿದ್ದರು ಪ್ರಧಾನಮಂತ್ರಿನೋಟು ರದ್ದು ಕ್ರಮ ಸೃಷ್ಟಿಸಿದ ಅಲ್ಲೋಲ ಕಲ್ಲೋಲಗಳುಬುಡಮೇಲು ಮಾಡಿದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳುಧ್ವಸ್ತಗೊಳಿಸಿದ ಕೋಟ್ಯಂತರ ಜನರ ಬದುಕುಗಳುಸಾವು ನೋವುಗಳನ್ನು ಇತಿಹಾಸ ದಾಖಲು ಮಾಡಿದೆಆದರೆ ವೀರಾವೇಶದ ಘೋಷಣೆಯನ್ನು ಮಾಡಿದ್ದ ಮೋದಿ ಅವರ ಕೂದಲೂ ಕೊಂಕಲಿಲ್ಲ.

ಅಂದಿನ ಹುಚ್ಚಾಟವನ್ನು ಮುಚ್ಚಲು ಇದೀಗ ಮತ್ತೊಂದು ಹುಚ್ಚಾಟವನ್ನು ಹೂಡಲಾಗಿದೆತಾವೇ ತಂದಿದ್ದ 2000 ರೂನೋಟನ್ನು ಮೋದಿ ರದ್ದು ಮಾಡಿದ್ದಾರೆಆದರೆ ಅಂದು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಮೋದಿಯವರು ಇಂದು ತಮಗೇನೂ ಸಂಬಂಧವಿಲ್ಲ ಎಂಬಂತೆ ದೂರದ ವಿದೇಶ ಪ್ರವಾಸದಲ್ಲಿದ್ದಾರೆ.

ನೋಟು ರದ್ದು ಕ್ರಮದಿಂದ ಕಪ್ಪುಹಣ ತೊಲಗುತ್ತದೆ ಎಂದಿದ್ದರುತೊಲಗಲಿಲ್ಲನಗದು ವ್ಯವಹಾರ ತಗ್ಗಿ ಡಿಜಿಟಲ್ ಹಣಕಾಸು ವ್ಯವಹಾರ ಹೆಚ್ಚುತ್ತದೆ ಎನ್ನಲಾಗಿತ್ತುಅದೂ ಆಗಲಿಲ್ಲ. 17.74 ಲಕ್ಷ ಕೋಟಿ ರೂನಗದು 2016ರ ನವೆಂಬರ್‌ನಲ್ಲಿ ನೋಟು ರದ್ದಿನ ಹೊತ್ತಿನಲ್ಲಿ ಚಲಾವಣೆಯಲ್ಲಿತ್ತುಇದೀಗ ಈ ಮೊತ್ತ 37 ಲಕ್ಷ ಕೋಟಿ ರೂ.ಗಳಾಗಿದೆಅರ್ಥಾತ್ ಎರಡು ಪಟ್ಟಿಗಿಂತ ಹೆಚ್ಚು!

ಭಯೋತ್ಪಾದನೆಯ ಹತ್ಯೆಗಳು ನಿಂತಿಲ್ಲಎಂದಿನಂತೆಯೇ ಜರುಗಿವೆ.

ಮೋದಿಯವರ ಹುಚ್ಚಾಟವನ್ನು ಆಗಲೂ ಮಾಸ್ಟರ್ ಸ್ಟ್ರೋಕ್ ಎಂದು ಗೋದಿ ಮೀಡಿಯಾ ಕೊಂಡಾಡಿತುಈಗಲೂ ಮಾಸ್ಟರ್ ಸ್ಟ್ರೋಕ್ ಎಂದು ಬಾಲಬಡಿಯುತ್ತಿದೆಎರಡು ಸಾವಿರ ರೂಪಾಯಿಯ ನೋಟಿನಲ್ಲಿ ಮೈಕ್ರೋ ಚಿಪ್ ಅಳವಡಿಸಲಾಗಿದ್ದುಭೂಮಿಯಲ್ಲಿ ಹೂತಿಟ್ಟರೂ ಪತ್ತೆಯಾಗುತ್ತದೆ ಎಂದು ಬುರುಡೆ ಬಿಟ್ಟಿತ್ತುಆಗಲೂ ಕಾಳಧನನಕಲಿ ನೋಟುಭಯೋತ್ಪಾದನೆಯ ಸೊಂಟ ಮುರಿಯಲು ಸಾವಿರ ರೂಪಾಯಿ ನೋಟು ರದ್ದು ಮಾಡಿ ಎರಡು ಸಾವಿರ ರೂಪಾಯಿ ನೋಟನ್ನು ಚಲಾವಣೆಗೆ ತರಲಾಗಿತ್ತುಈಗಲೂ ಇವೇ ಮೂರು ವಿಷಯಗಳ ಸೊಂಟ ಮುರಿಯಲು 2000 ರೂಪಾಯಿಯ ನೋಟನ್ನು ರದ್ದು ಮಾಡಲಾಗುತ್ತಿದೆ ಎಂದು ಮತ್ತೊಮ್ಮೆ ಬುರುಡೆ ಬಿಡಲಾಗುತ್ತಿದೆಹಾಗಿದ್ದರೆ ಈ ಆರು ವರ್ಷಗಳಲ್ಲಿ ಈ ಮೂರು ಸಮಸ್ಯೆಗಳ ಸೊಂಟ ಏಕೆ ಮುರಿಯಲಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡುವವರು ಯಾರು?

2016ರಲ್ಲಿ ನೋಟು ರದ್ದು ಮಾಡಿಹೊಸ ನೋಟು ಮುದ್ರಿಸಲು ಮಾಡಲಾದ ವೆಚ್ಚ 13 ಸಾವಿರ ಕೋಟಿ ರೂಪಾಯಿಗಳುಈ ವೆಚ್ಚ ವ್ಯರ್ಥವಾಯಿತಲ್ಲರದ್ದು ಮಾಡಬೇಕಿದ್ದರೆ ಮುದ್ರಣ ಏಕೆ ಮಾಡಬೇಕಿತ್ತು?

ಎರಡು ಸಾವಿರ ರೂಪಾಯಿ ನೋಟುಗಳ ವಿನಿಮಯಕ್ಕೆ ದೇಶದ ಜನತೆ ಪುನಾ ಬ್ಯಾಂಕುಗಳ ಮುಂದೆ ಸಾಲು ಹಚ್ಚಿ ನಿಲ್ಲಬೇಕಿದೆಅಂದು ಈ ಸಾಲುಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಸತ್ತರುವಿದೇಶಗಳಲ್ಲಿ ಭಾಷಣ ಮಾಡಿ ಮೋದಿ ಮಜಾ ತೆಗೆದುಕೊಂಡರುಈಗಲೂ ಮಜಾ ತೆಗೆದುಕೊಳ್ಳಲಿದ್ದಾರೆಭಕ್ತರು ಹೊಗಳುತ್ತಾರೆಜನಸಾಮಾನ್ಯರು ಹಣೆ ಚಚ್ಚಿಕೊಳ್ಳಬೇಕು.

ದೇಶವನ್ನು ಕಾಡುವ ನಿಜ ಸಮಸ್ಯೆಗಳಿಂದ ಕೇಂದ್ರ ಸರ್ಕಾರದ ತಪ್ಪು ನೀತಿ ನಿರ್ಧಾರಗಳುವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಗಳು ಸತತ ಪ್ರಯೋಗ ಆಗುತ್ತಲೇ ಇರುತ್ತವೆ.

2000 ರೂಪಾಯಿಯ ನೋಟು ರದ್ದು ಕ್ರಮ ಕೂಡ ಜನತೆಯ ಚರ್ಚೆಯ ದಿಕ್ಕನ್ನು ಬದಲಿಸುವ ಅದೇ ಹಳೆಯ ತಂತ್ರವೇ?

ಕರ್ನಾಟಕದಲ್ಲಿ ಬಿಜೆಪಿಯ ಭಾರೀ ಪರಾಭವಕಾಶ್ಮೀರದಲ್ಲಿ ಜಿ 20 ಶೃಂಗ ಸಮ್ಮೇಳನಕ್ಕೆ ಚೀನಾದ ಬಹಿಷ್ಕಾರಸುಪ್ರೀಂ ಕೋರ್ಟ್ ಜೊತೆ ಬೀದಿ ಜಗಳಕ್ಕೆ ನಿಂತಿದ್ದ ಕಾನೂನು ಮಂತ್ರಿ ಕಿರಣ್ ರಿಜಿಜು ಅವರ ಖಾತೆ ಬದಲಾವಣೆಸುಪ್ರೀಂ ಕೋರ್ಟಿನ ತೀರ್ಪನ್ನು ಉಲ್ಲಂಘಿಸಿ ದಿಲ್ಲಿಯ ಅಧಿಕಾರಶಾಹಿಯ ಮೇಲೆ ಕೇಂದ್ರದ ನಿಯಂತ್ರಣವನ್ನು ಉಳಿಸಿಕೊಳ್ಳಲು ಸುಗ್ರೀವಾಜ್ಞೆ ಜಾರಿ ಮುಂತಾದ ವೈಫಲ್ಯಗಳು– ಇರುಸುಮುರುಸುಗಳು– ಹಿನ್ನಡೆಗಳನ್ನು ಜನ ಮಾನಸದ ಚರ್ಚೆಯಿಂದ ಹೊರಗಿಡುವ ತಂತ್ರವೇ?

2016-17ರಲ್ಲಿ ಹೊಸದಾಗಿ ಮುದ್ರಿಸಿದ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 2000 ರೂಪಾಯಿ ನೋಟುಗಳು ಚಲಾವಣೆಯಿಂದ ಕಣ್ಮರೆಯಾಗಿವೆಐನೂರರ ನೋಟುಗಳೂ ಕಣ್ಮರೆಯಾಗಿವೆಅವುಗಳ ಮೌಲ್ಯ ಏಳೆಂಟು ಲಕ್ಷ ಕೋಟಿ ರೂಪಾಯಿಗಳುಹಾಗಾದರೆ ಮುಂಬರುವ ದಿನಗಳಲ್ಲಿ ಐನೂರು ರೂಪಾಯಿಯ ನೋಟನ್ನೂ ರದ್ದು ಮಾಡಲಾಗುವುದೇ?

2019ರ ನಂತರ ಎರಡು ಸಾವಿರದ ನೋಟುಗಳ ಮುದ್ರಣವನ್ನು ನಿಲ್ಲಿಸಿತ್ತು ಆರ್.ಬಿ.. 2016ರಲ್ಲಿ ಭಾರೀ ಪ್ರಮಾಣದಲ್ಲಿ 2000 ರೂಪಾಯಿ ನೋಟುಗಳನ್ನು ಮುದ್ರಿಸಲಾಗಿತ್ತುನೋಟು ರದ್ದಿನ ನಂತರ ಮುದ್ರಿಸಲಾದ ಒಟ್ಟು ಕರೆನ್ಸಿಯ ಶೇ.50ರಷ್ಟು ಪ್ರಮಾಣ 2000 ರೂಪಾಯಿ ನೋಟುಗಳದೇ ಆಗಿತ್ತುಕಪ್ಪುಹಣ ಸಂಗ್ರಹಕ್ಕೆ ಈ ನೋಟುಗಳು ಉತ್ತೇಜನ ನೀಡುತ್ತವೆಂದು ಅರಿತು ಕಾಲಕ್ರಮೇಣ ಇವುಗಳ ಮುದ್ರಣವನ್ನು ತಗ್ಗಿಸಲಾಯಿತು. 2016-17ರಲ್ಲಿ 2000 ರೂಪಾಯಿಯ 350 ಕೋಟಿ ನೋಟುಗಳನ್ನು ಮುದ್ರಿಸಲಾಗಿತ್ತು. 2017-18ರಲ್ಲಿ 15.10 ಕೋಟಿ ನೋಟುಗಳನ್ನು, 2018-19ರಲ್ಲಿ 4.70 ಕೋಟಿ ನೋಟುಗಳನ್ನು ಮುದ್ರಿಸಲಾಯಿತುಹೀಗೆ 2000 ರೂಪಾಯಿಯ ಒಟ್ಟು 370ಕೋಟಿ ನೋಟುಗಳನ್ನು ಮುದ್ರಿಸಲಾಗಿದೆ.107 ಕೋಟಿ ನೋಟುಗಳನ್ನು ಸವಕಳಿ ಮುಂತಾದ ಕಾರಣಗಳಿಗಾಗಿ ಆರ್ಬಿ.ನಾಶಪಡಿಸಿದೆಉಳಿದದ್ದು 268 ಕೋಟಿ ನೋಟುಗಳುಇಷ್ಟು ನೋಟುಗಳು ಇದೀಗ ಭಾರತದಾದ್ಯಂತ ಚಲಾವಣೆಯಲ್ಲಿರಬೇಕಿತ್ತುಈ ನೋಟುಗಳ ಒಟ್ಟು ಮೌಲ್ಯ 5.36 ಲಕ್ಷ ಕೋಟಿ ರೂಪಾಯಿಆದರೆ ಆರ್ಬಿ.ಪ್ರಕಾರ 54 ಕೋಟಿ ನೋಟುಗಳು ಚಲಾವಣೆಯಿಂದ ಮರೆಯಾಗಿವೆಹೀಗೆ ಕಣ್ಮರೆಯಾಗಿರುವ 2000 ರೂಪಾಯಿಯ 54 ಕೋಟಿ ನೋಟುಗಳ ಮೌಲ್ಯ 1.08 ಲಕ್ಷ ಕೋಟಿ ರೂಪಾಯಿಗಳುಈ ಮೊತ್ತ ಕಪ್ಪುಹಣದ ರೂಪ ಧರಿಸಿ ಅಡಗಿಕೊಂಡಿದೆಯೇಈ ನೋಟುಗಳನ್ನು ಹೊರತರುವ ಉದ್ದೇಶದಿಂದ 2000 ರೂಪಾಯಿಯ ನೋಟುಗಳನ್ನು ರದ್ದು ಮಾಡಲಾಗಿದೆಯೇಆದರೆ ಅಂತಹ ಉದ್ದೇಶಕ್ಕೆ ಯಾವುದೇ ಆಧಾರವಿಲ್ಲ.

500 ರೂಪಾಯಿಗಳ ನೋಟು ಸತತ ಮುದ್ರಣಗೊಳ್ಳುತ್ತಿದೆ. 2016ರ ನೋಟು ರದ್ದು ಕ್ರಮದ ನಂತರ 500 ರೂಪಾಯಿಯ 6475 ಕೋಟಿ ನೋಟುಗಳು ಮುದ್ರಣಗೊಂಡಿವೆಸವಕಳಿವಿರೂಪ ಮುಂತಾದ ಕಾರಣಗಳಿಗಾಗಿ ಆರ್.ಬಿ.ನಾಶಪಡಿಸಿರುವ 500 ರೂಪಾಯಿ ನೋಟುಗಳ ಸಂಖ್ಯೆ 298 ಕೋಟಿಉಳಿದಂತೆ ಲೆಕ್ಕದ ಪ್ರಕಾರ 6181 ಕೋಟಿ ನೋಟುಗಳು ಚಲಾವಣೆಯಲ್ಲಿ ಇರಬೇಕುಅಷ್ಟು ನೋಟುಗಳು ಚಲಾವಣೆಯಲ್ಲಿ ಇವೆಯೇಇಲ್ಲ. 1626 ಕೋಟಿ ನೋಟುಗಳು ಚಲಾವಣೆಯಲ್ಲಿ ಇಲ್ಲ. 4555 ಕೋಟಿ ನೋಟುಗಳು ಮಾತ್ರ ಚಲಾವಣೆಯಲ್ಲಿವೆ ಎನ್ನುತ್ತದೆ ಆರ್ಬಿ.ಕಣ್ಮರೆಯಾಗಿರುವ ಈ ನೋಟುಗಳ ಒಟ್ಟು ಮೌಲ್ಯ 8.13 ಲಕ್ಷ ಕೋಟಿ ರೂಪಾಯಿ. 2022ರ ಡಿಸೆಂಬರ್ ತನಕ 2000 ರೂಪಾಯಿಯ 80 ಸಾವಿರ ನಕಲಿ ನೋಟುಗಳ ಪತ್ತೆಯಾಗಿದ್ದವುಸುಮಾರು 15 ಕೋಟಿ ರೂಪಾಯಿ ಮೌಲ್ಯ ಹಾಗೆಯೇ 500 ರೂಪಾಯಿಗಳ 1.81 ಲಕ್ಷ ನಕಲಿ ನೋಟುಗಳು ಪತ್ತೆಯಾಗಿದ್ದವುಇವುಗಳ ಮೌಲ್ಯ ಒಂಬತ್ತು ಕೋಟಿ ರೂಪಾಯಿಗೂ ಹೆಚ್ಚು.

ಹೀಗಾಗಿ ಕಪ್ಪುಹಣನಕಲಿ ನೋಟುಭಯೋತ್ಪಾದನೆಯ ನಿಗ್ರಹದ ಕಾರಣಗಳನ್ನು ಈ ಸಲ ಮುಂದೆ ಮಾಡುವಂತಿಲ್ಲಹಾಗಿದ್ದರೆ ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜಸ್ತಾನಮಧ್ಯಪ್ರದೇಶಛತ್ತೀಸಗಢ ವಿಧಾನಸಭಾ ಚುನಾವಣೆಗಳುಆನಂತರ ತೆಲಂಗಾಣದ ವಿಧಾನಸಭೆ, 2024ರ ಲೋಕಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸೆಣೆಸಲಿರುವ ಪ್ರತಿಪಕ್ಷಗಳ ಜೇಬು ಬರಿದು ಮಾಡುವ ಹುನ್ನಾರವೇ?

ಇದ್ದೀತುಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ತಂತ್ರವೇ ಇದ್ದೀತು.

 

ಜನತೆಯ ಕಿವಿಯ ಮೇಲೆ ಹೂವು ಇಡುವುದು ಅದೆಷ್ಟು ಸುಲಭವೆಂದು ಅವರು ಖಾಸಗಿಯಲ್ಲಿ ಗಹಗಹಿಸುತ್ತಿರಬಹುದುಆದರೆ ಎಲ್ಲವೆಲ್ಲವೂ ದಾಖಲಾಗುತ್ತದೆ ಮತ್ತು ಜನತಾ ನ್ಯಾಯಾಲಯದಲ್ಲಿ ಅದರ ಲೆಕ್ಕ ಒಪ್ಪಿಸಬೇಕಾದ ಗಳಿಗೆ ತಡವಾಗಿಯಾದರೂ ಬಂದೇ ತೀರುತ್ತದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ