Mysore
23
broken clouds
Light
Dark

ರಾಜ್ಯಪಾಲರ ನೋಟಿಸ್‌, ರಾಜಕೀಯ ವಲಯದಲ್ಲಿ ಕುತೂಹಲಕಾರಿ ಚರ್ಚೆ

ಸಿದ್ದರಾಮಯ್ಯಗೆ ಹುದ್ದೆಯಿಂದ ಕೆಳಗಿಳಿಯಿರಿ ಎನ್ನುವ ಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಲ್ಲ

ಬೆಂಗಳೂರು ಡೈರಿ

ಆರ್.ಟಿ ವಿಠ್ಠಲಮೂರ್ತಿ

ಕಳೆದ ವಾರ ರಾಜ್ಯಪಾಲ ಥಾವರ ಚಂದ್ ಗೆಹ್ಲಟ್ ಅವರಿಟ್ಟ ಹೆಜ್ಜೆ ಕರ್ನಾಟಕದ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿತು. ರಾಜ್ಯಪಾಲರು ಇಂತಹ ಹೆಜ್ಜೆ ಇಡಲು ಕಾರಣವಾಗಿದ್ದು ಟಿ.ಜೆ.ಅಬ್ರಹಾಂ ಅವರು ನೀಡಿದ ದೂರು. ಅವರು ಜು.26ರಂದು ರಾಜ್ಯಪಾಲರಿಗೆ ದೂರು ನೀಡಿ ಮುಡಾದಲ್ಲಿ ನಡೆದ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದ್ದು, ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅವರ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಬೇಕು ಎಂದು ಕೋರಿದ್ದರು.

ಹೀಗೆ ಅವರು ದೂರು ಸಲ್ಲಿಸಿದ ಮರುದಿನವೇ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಷೋಕಾಸ್ ನೋಟಿಸ್ ನೀಡಿ: ‘ನಿಮ್ಮ ವಿರುದ್ಧ ವಿಚಾರಣೆ ನಡೆಸಲು ಅನುಮತಿ ಕೋರಿ ಟಿ.ಜೆ.ಅಬ್ರಹಾಂ ಅವರು ದೂರು ಸಲ್ಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ನಿಮಗೆ ನೋಟಿಸ್‌ ನೀಡಲಾಗಿದ್ದು, ಒಂದು ವೇಳೆ ವಿಚಾರಣೆಗೆ ಅನುಮತಿ ನೀಡಬಾರದು ಎನ್ನುವುದಾದರೆ ಅದಕ್ಕಿರುವ ಕಾರಣಗಳೇನು ಅನ್ನುವು ದನ್ನು ನೀವು ಏಳು ದಿನಗಳ ಒಳಗಾಗಿ ತಿಳಿಸಬೇಕು’ ಎಂದು ಹೇಳಿದ್ದರು.

ಯಾವಾಗ ರಾಜ್ಯಪಾಲರು ಈ ಷೋಕಾಸ್ ನೋಟಿಸ್ ನೀಡಿದರೋ ಇದಾದ ನಂತರ ಆ.1ರಂದು ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಸೇರಿದ ರಾಜ್ಯ ಸಚಿವ ಸಂಪುಟ ಸಭೆ, ಈ ಷೋಕಾಸ್ ನೋಟಿಸ್‌ ಅನ್ನು ಹಿಂದೆ ಪಡೆಯುವಂತೆ ರಾಜ್ಯಪಾಲರಿಗೆ ಸಲಹೆ ನೀಡುವ ನಿರ್ಧಾರ ಕೈಗೊಂಡಿತು. ಯಾವಾಗ ಇಷ್ಟೆಲ್ಲ ಬೆಳವಣಿಗೆಗಳು ನಡೆದವೋ ಇದಾದ ನಂತರ ರಾಜಕೀಯ ವಲಯಗಳಲ್ಲಿ ಕುತೂಹಲಕಾರಿ ಚರ್ಚೆಗಳು ಆರಂಭವಾಗಿವೆ. ಅದರ ಪ್ರಕಾರ, ಈ ಪ್ರಕರಣದಲ್ಲಿ ರಾಜ್ಯಪಾಲರು ತರಾತುರಿಯಲ್ಲಿದ್ದಾರೆ ಏಕೆಂದರೆ ಮುಡಾ ಹರಕೆ ಸಂಬಂಧಿಸಿದಂತೆ ಟಿ.ಜೆ ಅಬ್ರಹಾಂ ಅವರು ದೂರು ನೀಡುವುದು ಜು.26ರ ಶುಕ್ರವಾರ ಈ ದೂರಿನ ಆಧಾರದ ಮೇಲೆ ಮರುದಿನವೇ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಷೋಕಾಸ್‌ ನೋಟಿಸ್‌ ನೀಡುತ್ತಾರೆ.

ಇದರರ್ಥ ಬೇರೇನೂ ಅಲ್ಲ, ರಾಜ್ಯಪಾಲರ ಮೇಲೆ ಹೊಸದಿಲ್ಲಿಯ ಒತ್ತಡವಿದೆ. ಹೀಗಾಗಿ ಅವರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತ್ವರಿತ ವಾಗಿ ಹೆಜ್ಜೆ ಇಡುತ್ತಿದ್ದಾರೆ. ಇಂತಹ ರಾಜಕೀಯ ಬಿಕ್ಕಟ್ಟನ್ನು ರಾಜಕೀಯ ವಾಗಿಯೇ ಎದುರಿಸುವ ಅನಿವಾರ್ಯತೆ ಮುಖ್ಯಮಂತ್ರಿಗಳಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕಿದೆ ಎಂಬುದುಕೆಲವರ ಮಾತು. ಅವರ ಪ್ರಕಾರ, ಹೀಗೆ ಖಾಸಗಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದೇ ಆದರೆ ಸರ್ಕಾರ ಮತ್ತು ರಾಜಭವನದ ಮಧ್ಯೆ ನ್ಯಾಯಾಂಗ ಹೋರಾಟ ಆರಂಭವಾಗಲಿದೆ. ಹೀಗೆ ಶುರುವಾಗುವ ನ್ಯಾಯಾಂಗ ಹೋರಾಟ ಯಾವ ರೂಪಕ್ಕೆ ತಿರುಗಬಹುದೋ ಗೊತ್ತಿಲ್ಲ. ಒಂದು ವೇಳೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದರೆ ಮುಖ್ಯಮಂತ್ರಿಗಳು ಉಚ್ಚ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯ. ನ್ಯಾಯಾಲಯ ಮುಖ್ಯಮಂತ್ರಿಗಳ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಲೂಬಹುದು; ನೀಡದೆಯೂ ಇರಬಹುದು. ಒಂದು ವೇಳೆ ಅದು ತಡೆಯಾಜ್ಞೆ ನೀಡದೆ ಇದ್ದರೆ ಕಾನೂನು ಸಂಘರ್ಷ ಬೇರೆ ತಿರುವು ಪಡೆಯಬಹುದು.

ಇಷ್ಟಾದ ನಂತರವೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಸನ್ನಿವೇಶ ಉದ್ಭವವಾಗುವುದಿಲ್ಲ. ಒಂದು ವೇಳೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದಲ್ಲಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಿರಿ ಎಂದು ಕಾಂಗ್ರೆಸ್ ವರಿಷ್ಠರು ಹೇಳಿದರೆ ಆಗ ಆಟ ಆರಂಭವಾಗುತ್ತದೆ. ಆದರೆ ಸದ್ಯದ ಸ್ಥಿತಿಯಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಿರಿ ಎಂದು ಸಿದ್ದರಾಮಯ್ಯ ಅವರಿಗೆ ಸೂಚಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇಲ್ಲ. ಕಾರಣ ಇವತ್ತು ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್‌ ಸರ್ಕಾರವೇನಿದೆ ಈ ಒಂದು ವೇಳೆ ಸಿದ್ದರಾಮಯ್ಯ ಅವರ ಪದಚ್ಯುತಿಯಂತಹ ಬೆಳವಣಿಗೆ ನಡೆದರೆ ಪ್ರಬಲ ಅಹಿಂದ ವರ್ಗಗಳ ಸೈನ್ಯ ಅಸ್ಥಿರವಾಗುತ್ತದೆ ಮತ್ತು ಇಂತಹ ಅಸ್ಥಿರತೆಯೇ ಒಕ್ಕಲಿಗ, ಲಿಂಗಾಯತರನ್ನು ಮೂಲಶಕ್ತಿಗಳನ್ನಾಗಿಸಿಕೊಂಡ ಬಿಜೆಪಿ ಮೈತ್ರಿಕೂಟಕ್ಕೆ ದೊಡ್ಡ ಮಟ್ಟದ ಲಾಭ ತಂದುಕೊಡುತ್ತದೆ. ಕರ್ನಾಟಕದ ನೆಲೆಯಲ್ಲಿ 1980ರಲ್ಲಿ ಇಂತಹದೇ ಸನ್ನಿವೇಶ ಸೃಷ್ಟಿಯಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರನ್ನು ಬಲವಂತವಾಗಿ ಕೆಳಗಿಳಿಸಲಾಯಿತಲ್ಲ. ಈ ಬೆಳವಣಿಗೆ ಶೋಷಿತ ಸೈನ್ಯದಲ್ಲಿ ಒಂದು ಅಸ್ಥಿರತೆಯನ್ನು ಸೃಷ್ಟಿಸಿತು. ಇಂತಹ ಅಸ್ಥಿರತೆಯ ಲಾಭ ಪಡೆದ ಜನತಾ ಪಕ್ಷ ಮತ್ತದರ ಮಿತ್ರ ಪಕ್ಷಗಳು 1983ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರ ಹಿಡಿದವು. ಸರ್ಕಾರಕ್ಕೆ ಸಿದ್ದರಾಮಯ್ಯ ಅವರ ಶಕ್ತಿ ಬೇಕೇ ಬೇಕು.

ಏಕೆಂದರೆ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರಂತಹ ಮತ್ತೊಬ್ಬ ಜನನಾಯಕರಿಲ್ಲ. ಪಕ್ಷ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಪೂರಕವಾಗಿ ಬಂಡವಾಳ ಹೂಡಿಕೆ ಮಾಡಿದವರಿರಬಹುದು, ಕೆಲನಾಯಕರ ಶಕ್ತಿ ಒಂದು ಹಂತದಲ್ಲಿ ಬಳಕೆಯಾಗಿರಬಹುದು. ಆದರೆ ಒಟ್ಟಾರೆಯಾಗಿ ನೋಡಿದಾಗ ಸಿದ್ದರಾಮಯ್ಯ ಅವರಂತಹ ಸಮರ್ಥ ನಾಯಕರು ಮತ್ತೊಬ್ಬರಿಲ್ಲ. ಹೀಗಾಗಿ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದು ಎಂದರೆ ಕರ್ನಾಟಕದ ನೆಲೆಯನ್ನು ಕಳೆದುಕೊಳ್ಳಲು ಕಾಂಗ್ರೆಸ್ ಸಜ್ಜಾಗಿದೆ ಎಂದೇ ಅರ್ಥ.

ಒಂದು ವೇಳೆ ಸಿದ್ದರಾಮಯ್ಯ ಅವರ ಪದಚ್ಯುತಿಯಂತಹ ಬೆಳವಣಿಗೆ ನಡೆದರೆ ಪ್ರಬಲ ಅಹಿಂದ ವರ್ಗಗಳ ಸೈನ್ಯ ಅಸ್ಥಿರವಾಗುತ್ತದೆ ಮತ್ತು ಇಂತಹ ಅಸ್ಥಿರತೆಯೇ ಒಕ್ಕಲಿಗ, ಲಿಂಗಾಯತರನ್ನು ಮೂಲಶಕ್ತಿಗಳನ್ನಾಗಿಸಿ ಕೊಂಡ ಬಿಜೆಪಿ ಮೈತ್ರಿಕೂಟಕ್ಕೆ ದೊಡ್ಡ ಮಟ್ಟದ ಲಾಭ ತಂದುಕೊಡುತ್ತದೆ. ಕರ್ನಾಟಕದನೆಲೆಯಲ್ಲಿ1980ರಲ್ಲಿ ಇಂತಹದೇ ಸನ್ನಿವೇಶ ಸೃಷ್ಟಿಯಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರನ್ನು ಬಲವಂತವಾಗಿ ಕೆಳಗಿಳಿಸಲಾಯಿತಲ್ಲ. ಈ ಬೆಳವಣಿಗೆ ಶೋಷಿತ ಸೈನ್ಯದಲ್ಲಿ ಒಂದು ಅಸ್ಥಿರತೆಯನ್ನು ಸೃಷ್ಟಿಸಿತು. ಇಂತಹ ಅಸ್ಥಿರತೆಯ ಲಾಭ ಪಡೆದ ಜನತಾ ಪಕ್ಷ ಮತ್ತದರ ಮಿತ್ರ ಪಕ್ಷಗಳು 1983ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರ ಹಿಡಿದವು.

ಒಂದು ವೇಳೆ ಈಗಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರ ಪದಚ್ಯುತಿಯಾಗಿದ್ದೇ ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 1983ರ ಸನ್ನಿವೇಶ ಮರುಕಳಿಸುವುದು ನೂರಕ್ಕೆ ನೂರು ನಿಜ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಅಂದ ಹಾಗೆ ಇಂತಹ ಅಭಿಪ್ರಾಯಗಳ ಬೆನ್ನಲ್ಲೇ ಮತ್ತಷ್ಟು ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಅದರ ಪ್ರಕಾರ, ಒಂದು ವೇಳೆ ಸಿದ್ದರಾಮಯ್ಯ ಅವರ ಪದಚ್ಯುತಿ ಅನಿವಾರ್ಯವೇ ಆದರೆ ಕಾಂಗ್ರೆಸ್ ಪಕ್ಷ ಪರ್ಯಾಯ ನಾಯಕರನ್ನು ಮುಖ್ಯಮಂತ್ರಿ ಹುದ್ದೆಗೆ ತಂದು ಕೂರಿಸಲು ಯೋಚಿಸಬೇಕಾಗುತ್ತದೆ.

ಅಂತಹ ಸನ್ನಿವೇಶವೇನಾದರೂ ಉದ್ಭವವಾದರೆ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿಎಂ ಹುದ್ದೆಯ ರೇಸಿನಲ್ಲಿ ಮುಂಚೂಣಿಗೆ ಬರುತ್ತಾರೆ. ಅದೇ ಕಾಲಕ್ಕೆ ಡಿಕೆಶಿಗೆ ನೇರವಾಗಿ ಪಟ್ಟ ನೀಡುವ ಬದಲು ಭವಿಷ್ಯದ ನಾಯಕನ ಆಯ್ಕೆ ಶಾಸಕಾಂಗ ಪಕ್ಷದಲ್ಲಿ ನಡೆಯಲಿ ಎಂಬ ಕೂಗು ಶುರುವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಹೆಸರನ್ನೋ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರನ್ನೋ ಮುನ್ನೆಲೆಗೆ ತರಬಹುದು.

ಒಂದು ವೇಳೆ ಇಂತಹ ಬೆಳವಣಿಗೆ ಕಚ್ಚಾಟದ ಮೂಲವಾಗಬಹುದು ಎಂಬ ಕಾರಣಕ್ಕಾಗಿ ಕಾಂಗ್ರೆಸ್ ವರಿಷ್ಠರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭವಿಷ್ಯದ ಮುಖ್ಯಮಂತ್ರಿ ಹುದ್ದೆಗೆ ಬಂದು ಕೂರಲಿ ಎಂದು ಬಯಸಬಹುದು. ಮೂಲಗಳ ಪ್ರಕಾರ, ಒಂದು ವೇಳೆ ಡಿಕೆಶಿ ಮುಖ್ಯಮಂತ್ರಿಯಾದರೆ ಅವರನ್ನೂ ಪದಚ್ಯುತಗೊಳಿಸಲು ಹೊಸದಿಲ್ಲಿಯ ಬಿಜೆಪಿ ನಾಯಕರು ಯತ್ನಿಸಬಹುದು.

ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರೋ, ಜಿ.ಪರಮೇಶ್ವರ್ ಇಲ್ಲವೇ ಸತೀಶ್ ಜಾರಕಿಹೊಳಿ ಅವರೋ ಮುಖ್ಯಮಂತ್ರಿಯಾದರೆ ಆಗ ಬಿಜೆಪಿ ವರಿಷ್ಠರು ಹಿಂದೇಟು ಹೊಡೆಯಬಹುದು. ಏಕೆಂದರೆ ಕರ್ನಾಟಕದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ದಲಿತರೊಬ್ಬರು ಮುಖ್ಯಮಂತ್ರಿಯಾಗಿರುವುದನ್ನು ಬಿಜೆಪಿ ಸಹಿಸುತ್ತಿಲ್ಲ ಎಂಬ ಕೂಗು ಶುರುವಾದರೆ ದೇಶಾದ್ಯಂತ ಅದುಬಿಜೆಪಿಗೆ ತಿರುಗುಬಾಣವಾಗಬಹುದು. ಹೀಗಾಗಿ ದಲಿತ ನಾಯಕರೊಬ್ಬರು ಮುಖ್ಯಮಂತ್ರಿ ಹುದ್ದೆಯಲ್ಲಿ ಕುಳಿತರೆ ಸೇಫ್ ಎಂಬುದು ಕೆಲವರ ಮಾತು. ಆದರೆ ಇಂತಹ ಮಾತುಗಳೇನೇ ಇರಲಿ, ಆದರೆ ಸದ್ಯದ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದು ಕಷ್ಟ ಮತ್ತು ಕಷ್ಟ ಮುಂದೇನಾಗುತ್ತದೋ ಕಾದುನೋಡಬೇಕು.

Tags: