ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಆಡಿದ ಮಾತು ಇಡೀ ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಮೂಡಿಸಿದೆ. ಇದರಿಂದ ನವೆಂಬರ್ ಕ್ರಾಂತಿಯ ಮಾತುಗಳನ್ನಾಡುತ್ತಿದ್ದವರಿಗೆ ಹುಮ್ಮಸ್ಸು ಮೂಡಿದೆ. ಯತೀಂದ್ರ ಅವರು, ತಮ್ಮ ತಂದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಕೊನೆಗಾಲದಲ್ಲಿದ್ದು, ಈಗ ಅವರಂತೆಯೇ ಪ್ರಗತಿಪರವಾಗಿ ಆಲೋಚಿಸುವ ನಾಯಕರ ಅಗತ್ಯವಿದ್ದು, ಅದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿದೆ ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ. ಅದರಲ್ಲಿಯೂ ವಿರೋಧ ಪಕ್ಷಗಳ ನಾಯಕರಿಗೆ ಮೃಷ್ಟಾನ್ನ ಭೋಜನದಂತಾಗಿದೆ.
ಯತೀಂದ್ರ ಮಾತಿಗೆ ಪರ- ವಿರುದ್ಧವಾಗಿ ಸಚಿವರ ಹೇಳಿಕೆಗಳು ಹರಿದಾಡ ತೊಡಗಿದವು. ನವೆಂಬರ್ ಕ್ರಾಂತಿಯಾದರೆ ನಾಯಕತ್ವ ಸಿಗುವ ಆಸೆಯಲ್ಲಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ ಸೂಕ್ಷ್ಮವಾಗಿ ಪ್ರತಿ ಕ್ರಿಯಿ ಸಿದ್ದು, ನಾನು ಎಲ್ಲಿ ಮಾತಾಡ ಬೇಕೋ ಅಲ್ಲಿ ಮಾತನಾಡುತ್ತೇನೆ ಎಂದಿರುವುದು ಊಹಾಪೋಹಕ್ಕೆ ರೆಕ್ಕೆ ಮೂಡಿಸಿದೆ.
ಇದನ್ನು ಓದಿ:ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ಯತೀಂದ್ರ ಮಾತು
ಆದರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್. ಸಿ. ಮಹದೇವಪ್ಪ ಅವರು ಯತೀಂದ್ರ ಅವರು ಪಕ್ಷದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿಲ್ಲ. ಅಲ್ಲದೆ ಅದು ಮುಗಿದ ಅಧ್ಯಾಯ ಎಂದು ಸಮರ್ಥಿಸಿಕೊಂಡಿದ್ದಾರೆ.
ನವೆಂಬರ್ ಕ್ರಾಂತಿಯಲ್ಲಿ ನಾಯಕತ್ವ ಬದಲಾವಣೆ ಜೊತೆಗೆ ಸಂಪುಟ ಪುನಾ ರಚನೆಯೂ ನಡೆಯಲಿದೆ ಎಂಬ ಪ್ರತಿ ಪಾದನೆ ಕಾಂಗ್ರೆಸ್‌ವಲಯದಲ್ಲಿ ಕೇಳಿ ಬರು ತ್ತಿದೆ. ಏತನ್ಮಧ್ಯೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಹೈಕಮಾಂಡ್ ಹೇಳಿದರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧ, ಹೊಸಬರಿಗೆ ಅವಕಾಶ ಸಿಗಬೇಕು. ಅಲ್ಲದೆ,ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ಎರಡೂವರೆ ವರ್ಷಗಳ ಕಾಲ ನಂತರ ಸಚಿವ ಸಂಪುಟ ಪುನಾರಚನೆ ಕುರಿತು ನಿರ್ಧಾರ ಕೈಗೊಳ್ಳಲಾಗಿತ್ತು ಅಂತ ಖಚಿತಪಡಿಸಿದ್ದಾರೆ.
ಅತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯತೀಂದ್ರ ಅವರು ನಾಯಕತ್ವ (ಮುಖ್ಯಮಂತ್ರಿ ಸ್ಥಾನ)ದ ಬಗ್ಗೆ ಮಾತನಾಡಿಲ್ಲ. ಅಹಿಂದ ವರ್ಗಗಳನ್ನು ಮುನ್ನಡೆಸುವ ನಾಯಕತ್ವ ಕುರಿತು ಹೇಳಿಕೆ ನೀಡಿರುವುದು. ಅದನ್ನು ನನ್ನ ಬಳಿ ಕೂಡ ಹೇಳಿದ್ದಾರೆ. ಆದರೆ, ಮಾಧ್ಯಮಗಳು ಅದನ್ನು ತಿರುಚಿವೆ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಯತೀಂದ್ರ ಕೂಡ ಸಿದ್ದರಾಮಯ್ಯ ಅವರೇ ಮುಖ್ಯ ಮಂತ್ರಿಯಾಗಿ ೫ ವರ್ಷಗಳ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಆದರೆ ಅಹಿಂದ ನಾಯಕತ್ವಕ್ಕೆ ಸಂಬಂಧಿಸಿದಂತೆ ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ. ಪಕ್ಷದಿಂದ ನೋಟಿಸ್ ಬಂದರೆ, ಉತ್ತರಿಸಲು ಸಿದ್ಧ ಎಂದು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಹೊಸದಿಲ್ಲಿಗೆ ತೆರಳಿದ್ದು, ನ.೨೦ಕ್ಕೆ ಪಕ್ಷ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಪೂರ್ಣಗೊಳ್ಳಲಿವೆ ಎಂಬುದರ ಬಗ್ಗೆ ಹೈಕಮಾಂಡ್‌ನ ಗಮನ ಸೆಳೆಯಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈಗಾಗಲೇ ಪಕ್ಷದ ಎಲ್ಲ ಜಿಲ್ಲಾಧ್ಯಕ್ಷರುಗಳಿಗೂ ಪತ್ರ ಬರೆದಿದ್ದಾರೆ. ಪತ್ರದಲ್ಲಿರುವ ಗುಟ್ಟನ್ನು ಬಹಿರಂಗಪಡಿಸಿಲ್ಲ. ಸಂಪುಟ ಪುನಾರಚನೆ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ, ಮುಖ್ಯಮಂತ್ರಿಗಳೇ ಅದಕ್ಕೆ ಉತ್ತರಿಸಬೇಕು ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನೊಂದೆಡೆ ಮಾಜಿ ಸಚಿವ ಕೆ.ಎನ್.ರಾಜಣ್ಣ ನವೆಂಬರ್ ಕ್ರಾಂತಿ ಖಂಡಿತ, ಹೈಕಮಾಂಡ್ ಸಂಪುಟ ಪುನಾರಚನೆಯ ಜವಾಬ್ದಾರಿಯನ್ನು ಯಾರಿಗೆ ವಹಿಸುತ್ತದೋ, ಅವರೇ ನವೆಂಬರ್‌ನಲ್ಲಿ ಮುಖ್ಯಮಂತ್ರಿಯಾಗುತ್ತಾರೆ. ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಆ ಜವಾಬ್ದಾರಿ ವಹಿಸಿದರೆ, ಅವರೇ ಮುಂದಿನ ಎರಡೂವರೆ ವರ್ಷಗಳೂ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎನ್ನುವ ಮೂಲಕ ವದಂತಿಯನ್ನು ವರ್ಣರಂಜಿತ ಗೊಳಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧ ಮೊದಲಿಗೆ ಸೆಪ್ಟೆಂಬರ್ ಕ್ರಾಂತಿ, ನಂತರ ಅಕ್ಟೋಬರ್ ಕ್ರಾಂತಿ ಮಾತುಗಳು ಬಿರುಗಾಳಿ ಎಬ್ಬಿಸಿದ್ದು, ಅಷ್ಟೇ ವೇಗವಾಗಿ ಬಿದ್ದು ಹೋದವು. ಇದೀಗ ನವೆಂಬರ್ ಕ್ರಾಂತಿ ಚಾಲ್ತಿಯಲ್ಲಿದೆ. ಸಿದ್ದ ರಾಮಯ್ಯ ಅವರೂ ಹೊಸದಿಲ್ಲಿಗೆ ತೆರಳಲಿದ್ದು, ನಂತರ ನವೆಂಬರ್ ಕ್ರಾಂತಿಯ ನೈಜತೆ ಸ್ಪಷ್ಟವಾಗಲಿದೆ.
” ಡಿ.ಕೆ.ಶಿವಕುಮಾರ್ ಅವರು ಈಗಾಗಲೇ ಹೊಸದಿಲ್ಲಿಗೆ ತೆರಳಿದ್ದು, ನ.೨೦ಕ್ಕೆ ಪಕ್ಷ ಅಽಕಾರಕ್ಕೆಬಂದು ಎರಡೂವರೆ ವರ್ಷ ಪೂರ್ಣಗೊಳ್ಳಲಿದೆ ಎಂಬುದರ ಬಗ್ಗೆ ಹೈಕಮಾಂಡ್‌ನ ಗಮನ ಸೆಳೆಯಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈಗಾಗಲೇ ಪಕ್ಷದ ಎಲ್ಲ ಜಿಲ್ಲಾಧ್ಯಕ್ಷರುಗಳಿಗೂ ಪತ್ರ ಬರೆದಿದ್ದಾರೆ.”





