ಓದುಗರ ಪತ್ರ |
ಡುಬ್ಬ ನಿರ್ಮಿಸಿ ಮೈಸೂರಿನ ವಿಜಯನಗರ ನೀರಿನ ಟ್ಯಾಂಕ್‌ನಿಂದ ತ್ರಿನೇತ್ರ ವೃತ್ತದ ಕಡೆ ಸಾಗುವ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ಅಧಿಕವಾಗಿರುತ್ತದೆ.
ತ್ರಿನೇತ್ರ ವೃತ್ತದಿಂದ ಬರುವ ವಾಹನಗಳು ರೈಲ್ವೆ ಬಡಾವಣೆ ಕಡೆಗೆ ತಿರುವು ತೆಗೆದುಕೊಳ್ಳುವ ಸ್ಥಳದಲ್ಲಿ ರಸ್ತೆ ಡುಬ್ಬವಿಲ್ಲದೆ ವಾಹನ ಚಾಲಕರು ಪರದಾಡುವಂತಾಗಿದೆ. ಅದೇ ರೀತಿ ವಿದ್ಯಾ ವರ್ಧಕ ಇಂಜಿನಿಯ ರಿಂಗ್ ಕಾಲೇಜು ಕಡೆಯಿಂದ ಮುಖ್ಯ ರಸ್ತೆಗೆ ಸೇರುವ ವಾಹನಗಳು ಕೂಡ ತೊಂದರೆಗೊಳಗಾಗುತ್ತಿವೆ.
ವಾಟರ್ ಟ್ಯಾಂಕಿನಿಂದ ಇಳಿಜಾರಿನಲ್ಲಿ ಬರುವ ವಾಹನಗಳು ವೇಗವಾಗಿಯೇ ಚಲಿಸುತ್ತವೆ. ಹಾಗಾಗಿ ಎದುರಿನಿಂದ ಬರುವ ವಾಹನಗಳು ಬಲ ತಿರುವು ತೆಗೆದುಕೊಳ್ಳಲು ಕಷ್ಟವಾಗುತ್ತಿದೆ. ಇದನ್ನು ತಪ್ಪಿಸಿ ಸಂಚಾರ ವ್ಯವಸ್ಥೆ ಸುಗಮವಾಗುವಂತೆ ಅನುವಾಗಲು ಸಪ್ತಗಿರಿ ಗ್ಲಾಸ್ ಅಂಗಡಿ ಮುಂದೆ, ಕೆ. ಎಫ್. ಸಿ. ಎದುರು ಹಾಗೂ ವಿದ್ಯಾವರ್ಧಕ ಇಂಜಿನಿಯ ರಿಂಗ್ ಕಾಲೇಜು ರಸ್ತೆಗಳಲ್ಲಿ ಡುಬ್ಬಗಳನ್ನು ನಿರ್ಮಿಸಿದಲ್ಲಿ ವಾಹನ ಸವಾರರಿಗೆ ಅನುಕೂಲವಾಗುವುದಲ್ಲದೇ, ಅನಾಹುತಗಳನ್ನು ತಪ್ಪಿಸಬಹುದಾಗಿದೆ.
– ವಿಜಯ್ ಹೆಮ್ಮಿಗೆ, ಮೈಸೂರು





