Mysore
32
broken clouds

Social Media

ಸೋಮವಾರ, 13 ಏಪ್ರಿಲ 2026
Light
Dark

ಓದುಗರ ಪತ್ರ:  ಆತ್ಮಹತ್ಯೆಯೇ ಪರಿಹಾರವಲ್ಲ

ಓದುಗರ ಪತ್ರ

ದ್ವಿತೀಯ ಪಿಯುಸಿ ಪರೀಕ್ಷೆ ೨ರ -ಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ವಿದ್ಯಾರ್ಥಿ ಗಳ ಪರೀಕ್ಷಾ ಪಲಿತಾಂಶಗಳನ್ನು ಉತ್ತಮಗೊಳಿಸಲು ರಾಜ್ಯ ಸರ್ಕಾರ ೩ ಅವಕಾಶಗಳನ್ನು ನೀಡಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳು ಇನ್ನೂ ಒಂದು ಬಾರಿ ಪರೀಕ್ಷೆ ಬರೆದು ಬಾಕಿ ಉಳಿಸಿಕೊಂಡಿರುವ ವಿಷಯಗಳಲ್ಲಿ ತೇರ್ಗಡೆಯಾಗಬಹುದು. ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಜೀವನವೇ ಮುಗಿದು ಹೋಯಿತು ಎಂಬಂತೆ ಭಾವಿಸುವುದು ಹಾಗೂ ಅನುತ್ತೀರ್ಣರಾದ ಮಕ್ಕಳನ್ನು ಪೋಷಕರು ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ ನಿಂದಿಸುವುದು ಸರಿಯಲ್ಲ. ಜೀವನದಲ್ಲಿ ಏನೇ ಸಂಕಷ್ಟ ಬಂದರೂ ಎದುರಿಸುವ ಧೈರ್ಯವನ್ನು ಪೋಷಕರು ಮಕ್ಕಳಿಗೆ ತುಂಬಬೇಕು. ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು.

-ಎಸ್.ಶ್ರೀದೇವಿ, ಮೈಸೂರು

Tags:
error: Content is protected !!