ಅಂಧಕಾರವ ತೊಡೆದು, ಮಂದಹಾಸ ಮುಖವ
ದಯಪಾಲಿಸಿ ಆಶೀರ್ವದಿಸುವಾತ
ಜೀವನದ ಸತ್ಯಾಸತ್ಯಗಳನ್ನು ದರ್ಶಿಸುವಾತ
ಅವನೇ ಮಹಾ ಶಿಕ್ಷಕ ಗುರುಮಲ್ಲ
ಓದಿ ಪುಸ್ತಕವನು ಶಿಕ್ಷಕನಾಗುವೆ ಏನು?
ಇರಬೇಕು ಹೃದಯದಲಿ ಅಧ್ಯಯನದ
ಅಭಿಲಾಷೆ
ವಿದ್ಯಾರ್ಥಿಗಳ ನಿಸ್ವಾರ್ಥದ ಸೇವೆಯ
ಆತ್ಮವಿಶ್ವಾಸ
ತನ್ನೊಳಗಿನ ಜಂಗಮತ್ವ ಗುರುಮಲ್ಲ
ಶಿಕ್ಷಣವೇ ಜೀವನ, ಶಿಕ್ಷಣದಿಂದಲೇ ಜೀವನ
ಶಿಕ್ಷಣ ನೀಡುವುದೇ ಜೀವನ ಪಯಣ
ಶಿಕ್ಷಣವೇ ಸಂಸ್ಕಾರ, ಸಂಸ್ಕೃತಿ, ಜೀವನ ಮುಕ್ತಿ
ಶಿಕ್ಷಣಾರ್ಥಿಯೇ ಶಿಕ್ಷಕ ಗುರುಮಲ್ಲ
– ಡಾ.ಡಿ.ಎಸ್.ಗುರು ದೇವನೂರು, ಪ್ರಾಧ್ಯಾಪಕರು, ಗಣಕ ವಿಜ್ಞಾನ ಅಧ್ಯಯನ ವಿಭಾಗ, ಮೈಸೂರು ವಿವಿ





