Mysore
19
overcast clouds

Social Media

ಭಾನುವಾರ, 25 ಜನವರಿ 2026
Light
Dark

ಓದುಗರ ಪತ್ರ:  ದಸರಾದಲ್ಲಿ ಚುಟುಕು ಕವಿಗೋಷ್ಠಿ ಇರಲಿ

ಓದುಗರ ಪತ್ರ

ಮೈಸೂರು ದಸರಾ ಮಹೋತ್ಸವದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕವಿಗೋಷ್ಠಿಯೂ ಒಂದು . ಈ ಹಿಂದೆ ಎಲ್ಲ ಚಿಗುರು ಕವಿಗೋಷ್ಠಿ , ಅರಳು ಕವಿಗೋಷ್ಠಿ, ಚುಟುಕು ಕವಿಗೋಷ್ಠಿ, ಹಾಸ್ಯಗೋಷ್ಠಿ, ಯುವ ಕವಿಗೋಷ್ಠಿ, ಪ್ರಧಾನ ಕವಿಗೋಷ್ಠಿ ಇರುತ್ತಿದ್ದವು. ಇವುಗಳಲ್ಲಿ ಚುಟುಕು ಕವಿಗೋಷ್ಠಿ ಪ್ರಮುಖ ವಾದ ಆಕರ್ಷಣೆಯ ಗೋಷ್ಠಿಯಾಗಿತ್ತು. ಈ ಬಾರಿ ದಸರಾ ಕಾವ್ಯ ಸಂಭ್ರಮ ಶೀರ್ಷಿಕೆಯಡಿ ಯುವ ಕವಿಗೋಷ್ಠಿ, ಪ್ರಧಾನ ಕವಿಗೋಷ್ಠಿ, ಹಾಸ್ಯ ಕವಿಗೋಷ್ಠಿ, ಸೆ.೨೮ರಿಂದ ಅ.೩ರವರೆಗೆ ನಡೆಯಲಿದೆ ಎಂದು ಕವಿಗೋಷ್ಠಿ ಸಮಿತಿಯವರು ತಿಳಿಸಿದ್ದಾರೆ . ಆದರೆ ಚುಟುಕು ಕವಿಗೋಷ್ಠಿಯನ್ನು ರದ್ದು ಮಾಡಲಾಗಿದೆ. ಇದರಿಂದ ಚುಟುಕು ಪ್ರಿಯರಿಗೆ ನಿರಾಸೆಯಾಗಿದೆ . ಚುಟುಕು ಸಾಹಿತ್ಯದಲ್ಲಿ ಬದುಕಿನ ಲಾಲಿತ್ಯವಿದೆ. ಚುಟುಕು ಕವಿಗೋಷ್ಠಿ ಆರಂಭಿಸುವುದರಿಂದ ದಸರೆಗೂ ಕಳೆ ಬರಲಿದೆ. ಆದ್ದರಿಂದ ಕವಿಗೋಷ್ಠಿ ಸಮಿತಿಯವರು ಈ ಬಾರಿಯ ದಸರಾ ಮಹೋತ್ಸವದಲ್ಲಿ ಚುಟುಕು ಕವಿಗೋಷ್ಠಿಗೆ ಅವಕಾಶ ಕಲ್ಪಿಸಬೇಕು.

ಅಹಲ್ಯ ಸಿ.ನಾ.ಚಂದ್ರ, ಜನತಾ ನಗರ, ಮೈಸೂರು

Tags:
error: Content is protected !!