Mysore
27
scattered clouds
Light
Dark

ಓದುಗರ ಪತ್ರ | ಎಲೆಕ್ಟ್ರಾನಿಕ್ ಸಿಟಿಗೆ ಎಸ್.ಎಂ.ಕೃಷ್ಣ ಹೆಸರಿಡಿ

ಮೊನ್ನೆ ಬೆಂಗಳೂರಿನಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯರವರು, ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ ‘ದೇವರಾಜ ಅರಸು ಸಿಟಿ’ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣವಾಗಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾರಣಕರ್ತರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಎಸ್‌.ಎಂ. ಕೃಷ್ಣರವರು ಬೆಂಗಳೂರಿಗೆ ಐ.ಟಿ., ಬಿ.ಟಿ. ಕಂಪೆನಿಗಳನ್ನು ತಂದು ಲಕ್ಷಾಂತರ ಸಾಫ್ಟ್‌ವೇರ್ ಇಂಜಿನಿಯ‌ಗಳಿಗೆ ಉದ್ಯೋಗಗಳನ್ನು ಕಲ್ಪಿಸಿದ್ದಾರೆ. ಅವರು ಈ ಪ್ರಯತ್ನ ಮಾಡಿದ್ದರ ಪರಿಣಾಮವಾಗಿ ಇಂದು ಬೆಂಗಳೂರು ಇಷ್ಟು ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಈ ಕೀರ್ತಿ ಎಸ್. ಎಂ.ಕೃಷ್ಣರವರಿಗೆ ಸಲ್ಲಬೇಕು. ಡಿ.ದೇವರಾಜ ಅರಸುರವರು ಈ ರಾಜ್ಯಕ್ಕೆ ಅಪಾರ ಕೊಡುಗೆಗಳನ್ನು ನೀಡಿದ ಮುಖ್ಯಮಂತ್ರಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಅನೇಕ ಜನಪರ ಕೆಲಸಗಳಿಂದ ಇಂದಿಗೂ ಜನರಿಗೆ ಅನುಕೂಲಗಳಾಗುತ್ತಿವೆ. ಅವರ ಹೆಸರನ್ನು ಬೇರೆ ನಗರಗಳಿಗೆ ಇಡುವುದು ಸೂಕ್ತ. ಆದರೆ ಎಲೆಕ್ಟ್ರಾನಿಕ್ ಸಿಟಿಗೆ ಎಸ್.ಎಂ.ಕೃಷ್ಣ ಅವರ ಹೆಸರನ್ನು ಇಡುವುದೇ ಸೂಕ್ತ.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.