Mysore
23
scattered clouds

Social Media

ಭಾನುವಾರ, 29 ಮಾರ್ಚ್ 2026
Light
Dark

ಓದುಗರ ಪತ್ರ: ಕೆಆರ್‌ಎಸ್‌ನಲ್ಲಿ ಡಿಜಿಟಲ್ ಪಾವತಿಗೆ ಅವಕಾಶ ಕಲ್ಪಿಸಿ

ಓದುಗರ ಪತ್ರ

ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟೆ ಹಾಗೂ ಬೃಂದಾವನ ಉದ್ಯಾನವನ್ನು ವೀಕ್ಷಿಸಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಇಲ್ಲಿ ಪ್ರವೇಶ ಶುಲ್ಕ ಹಾಗೂ ವಾಹನಗಳ ಟೋಲ್ ಸಂಗ್ರಹವನ್ನು ನಗದು ರೂಪದಲ್ಲೇ ಪಾವತಿಸಬೇಕಾಗಿದ್ದು, ಡಿಜಿಟಲ್ ಪಾವತಿಗೆ ಅವಕಾಶವಿಲ್ಲದೇ ಇರುವುದರಿಂದ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದರೆ ಸರ್ವರ್ ಸರಿಯಿಲ್ಲ. ನಗದು ರೂಪದಲ್ಲಿ ಪಾವತಿಸಿ, ಇಲ್ಲದಿದ್ದರೆ ವಾಪಸ್ ಹೋಗಿ ಎಂದು ಉಡಾ-ಯಿಂದ ಉತ್ತರಿಸುತ್ತಾರೆ.

ಕೇಂದ್ರ ಸರ್ಕಾರ ಡಿಜಿಟಲ್ ಪಾವತಿಗೆ ಉತ್ತೇಜನ ನೀಡಿದ್ದು, ನಗದು ರಹಿತ ವ್ಯವಹಾರವನ್ನು ಜಾರಿಗೊಳಿಸಿರುವ ಈ ದಿನಗಳಲ್ಲೂ ಕೆಆರ್‌ಎಸ್ನಲ್ಲಿ ಡಿಟಿಟಲ್ ಪಾವತಿಗೆ ಅವಕಾಶ ಕಲ್ಪಿಸದೇ ಇರುವುದು ಸರಿಯಲ್ಲ. ಸಂಬಂಧಪಟ್ಟವರು ಕೂಡಲೇ ಕೆಆರ್‌ಎಸ್‌ನಲ್ಲಿ ಡಿಜಿಟಲ್ ಪಾವತಿಗೆ ಅವಕಾಶ ಕಲ್ಪಿಸುವ ಮೂಲಕ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು

Tags:
error: Content is protected !!