Mysore
28
overcast clouds

Social Media

ಶನಿವಾರ, 06 ಜೂನ್ 2026
Light
Dark

ಓದುಗರ ಪತ್ರ | ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡಿ

ಮೈಸೂರಿನಲ್ಲಿ ಸ್ವಲ್ಪ ಮಳೆಯಾದರೂ ರೂಪಾನಗರ ಬಡಾವಣೆಯಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ. ರಾತ್ರಿ ವೇಳೆ ಮಳೆ ಬಂದರಂತೂ ವಿದ್ಯುತ್ ಸಂಪರ್ಕಕಲ್ಪಿಸುವುದು ಬೆಳಿಗ್ಗೆಯೇ. ರಾತ್ರಿಯಿಡೀ ಸೊಳ್ಳೆಗಳ ಹಾವಳಿಯಿಂದಾಗಿ ನಿದ್ರೆ ಮಾಡಲಾಗದೆ ಪರಿತಪಿಸುವಂತಾಗುತ್ತದೆ. ಎಷ್ಟೇ ಮಳೆ ಬಂದರೂ ಸಮೀಪದ ರಾಜರಾಜೇಶ್ವರಿ ನಗರದ ಫೀಡರ್ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತವಾಗುವುದಿಲ್ಲ. ಬೋಗಾದಿ ಬಡಾವಣೆಯ ವಿದ್ಯುತ್ ಸಮಸ್ಯೆ ಸರಿಪಡಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ(ಸೆಸ್ಕ್)ದ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಈಗಲಾದರೂ ರೂಪಾನಗರ ಬಡಾವಣೆಗೆ ಸಮರ್ಪಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.
-ಸುರಭಿ ಭಟ್, ರೂಪಾನಗರ, ಮೈಸೂರು

Tags:
error: Content is protected !!