Mysore
36
few clouds

Social Media

ಬುಧವಾರ, 22 ಏಪ್ರಿಲ 2026
Light
Dark

ಓದುಗರ ಪತ್ರ | ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ

ಹುಣಸೂರಿನಿಂದ ಮೈಸೂರಿಗೆ ಸಂಜೆ ವೇಳೆ ಸಾಕಷ್ಟು ಕೆಎಸ್‌ಆರ್‌ಟಿಸಿ ಬಸ್ ಗಳಲ್ಲದೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಮೈಸೂರಿನಿಂದ ಹುಣಸೂರಿನಲ್ಲಿರುವ ಸರ್ಕಾರಿ ಕಚೇರಿಗಳಿಗೆ ಪ್ರತಿನಿತ್ಯ ನೂರಾರು ಜನ ನೌಕರರರು ಪ್ರಯಾಣಿಸುತ್ತಿದ್ದು, ಸಂಜೆ ವೇಳೆ ಅಗತ್ಯವಿರುವಷ್ಟು ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ.

ಮಡಿಕೇರಿ ಮಾರ್ಗದ ಬಸ್, ವಿರಾಜಪೇಟೆ ಮಾರ್ಗದ ಬಸ್‌ಗಳಲ್ಲಿ ಕೆಲವು ಹುಣಸೂರು ಡಿಪೋನಿಂದ ಹುಣಸೂರು-ಮೈಸೂರು ಎಂಬ ಫಲಕದೊಂದಿಗೆ ಬರುತ್ತವೆ. ಈ ಬಸ್‌ಗಳು ಮೈಸೂರಿಗೆ ಹೋಗುವ ಪ್ಲಾಟ್‌ಫಾರ್ಮ್‌ಗೆ ಬಂದು ನಿಲ್ಲುವ ವೇಳೆಗೆ ಬಸ್ ಕಾಯುತ್ತಿದ್ದ ಹಲವಾರು ನೌಕರರು ಹಾಗೂ ಇತರೆ ಪ್ರಯಾಣಿಕರು ಬಸ್ ಬಂದ ಕೂಡಲೇ ಓಡಿ ಬಂದು ಹತ್ತಲು ಹರ ಸಾಹಸ ಮಾಡುತ್ತಾರೆ. ಸಾರಿಗೆ ನಿಗಮದ ಅಧಿಕಾರಿಗಳು ಹುಣಸೂರಿನಿಂದ ಮೈಸೂರಿಗೆ ಸಂಜೆ ವೇಳೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು ಹಾಗೂ ಬಸ್ ನಿಲ್ದಾಣಕ್ಕೆ ಬಂದಾಗ ನೂಕು ನುಗ್ಗಲು ಉಂಟಾಗದಂತೆ ಸರತಿ ಸಾಲು ಮಾಡಿಸುವುದು ಅಗತ್ಯ. -ಬೆಳತೂರು ವೆಂಕಟೇಶ, ಕಂದಾಯ ನಗರ, ಮೈಸೂರು.

Tags:
error: Content is protected !!