ಗಣೇಶೋತ್ಸವದ ಸಂದರ್ಭದಲ್ಲಿ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಡಿಜೆ ಬಳಸುವ ವಿಚಾರದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಡಿಜೆ ಶಬ್ದ ಮಾರಕವಾಗಿದೆ. ಡಿಜೆ ಬದಲು ದೇವರ ಕಾರ್ಯಕ್ರಮಕ್ಕೆ ಭಜನೆ ಇಲ್ಲವೆ ಕರಡಿ ಮಜಲು ಒಳ್ಳೆಯದು. ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮಕ್ಕೆ ಭಜನೆ, ಇಲ್ಲವೇ ಕರಡಿ ಮಜಲು ಬಾರಿಸುವವರು, ಹಾಡುವರನ್ನು ಕರೆದು, ಮೆರವಣಿಗೆ ಮಾಡಬಹುದು. ಈ ಬಗ್ಗೆ ಆಯೋಜಕರು ಕ್ರಮ ಕೈಗೊಳ್ಳಬೇಕು.
– ವೀರೇಶ ಧೂಪದಮಠ, ಹುಬ್ಬಳ್ಳಿ





