ಮೈಸೂರಿನಲ್ಲಿ ನಂದಿನಿ (ಕೆಎಂಎ-) ಹಾಲು, ಮೊಸರು ಮಾರಾಟ ಮಾಡುವ ಚಿಲ್ಲರೆ ಅಂಗಡಿಯವರು ಗ್ರಾಹಕರಿಂದ ಹೆಚ್ಚು ಹಣ ವಸೂಲಿ ಮಾಡಿ ವಂಚಿಸುತ್ತಿದ್ದಾರೆ. ಅರ್ಧ ಲೀ. ಮೊಸರಿಗೆ 28 ರೂ. ಗಳಿದ್ದರೆ ಹೆಚ್ಚುವರಿಯಾಗಿ 1ರೂ. ಸೇರಿಸಿ 29 ರೂ. ಪಡೆಯಬೇಕು. ಆದರೆ ಕೆಲವು ಅಂಗಡಿಯವರು 30 ರೂ. ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನಾವು ಮಾರಾಟ ಮಾಡುವುದೇ ಇಷ್ಟು ಹಣಕ್ಕೆ. ಬೇಕಾದರೆ ತೆಗೆದುಕೊಳ್ಳಿ, ಇಲ್ಲದಿದ್ದರೆ ಬಿಡಿ ಎಂದು ಉಡಾ-ಯಾಗಿ ಮಾತನಾಡುತ್ತಾರೆ.
ನಿಯಮಾನುಸಾರ ಪರವಾನಗಿ ಪಡೆಯದವರು ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ನಿಯಮ ಉಲ್ಲಂಸುವವರ ವಿರುದ್ಧ ಮೈಸೂರು ಹಾಲು ಒಕ್ಕೂಟ (ಮೈಮುಲ್) ದ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು. ಆದರೆ ಈ ಬಗ್ಗೆ ಸಂಬಂಧಪಟ್ಟವರು ಈ ವರೆಗೂ ಕ್ರಮ ಕೈಗೊಳ್ಳುತ್ತಿಲ್ಲ. ಈಗಲಾದರೂ ಸಂಬಂಧಪಟ್ಟ ಅಽಕಾರಿಗಳು ಇತ್ತ ಗಮನ ಹರಿಸಿ ಗ್ರಾಹಕರನ್ನು ಶೋಷಣೆ ಮಾಡುತ್ತಿರುವ ಅಂಗಡಿಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ.
– ಶರತ್ , ಮೈಸೂರು





