Mysore
36
broken clouds

Social Media

ಭಾನುವಾರ, 12 ಏಪ್ರಿಲ 2026
Light
Dark

ಓದುಗರ ಪತ್ರ | ಕಿಕ್ಕೇರಿ ಕೆರೆಗೆ ಕೆಎಸ್‌ನ ಹೆಸರು ನಾಮಕರಣ ಶ್ಲಾಘನೀಯ

ಕನ್ನಡಕ್ಕೆ ಶ್ರೇಷ್ಠ ದಾಂಪತ್ಯ ಗೀತೆಗಳನ್ನು ನೀಡಿದ, ಪ್ರೇಮಕವಿಯೆಂದೇ ಹೆಸರಾದ ನಾಡಿನ ಹಿರಿಯ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಗೌರವಾರ್ಥವಾಗಿ ಹುಟ್ಟೂರಾದ ಕಿಕ್ಕೇರಿಯ ಅಮಾನಿ ಕೆರೆಗೆ ‘ಕೆ. ಎಸ್. ನರಸಿಂಹಸ್ವಾಮಿ ಸರೋವರ’ಎಂದು ನಾಮಕರಣ ಮಾಡಲು ಸರಕಾರ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಸಂಗತಿ.

ಕೆ. ಎಸ್. ನ. ಅವರ ಮನೆಯನ್ನು ಸ್ಮಾರಕ ಮಾಡಬೇಕು, ಕಿಕ್ಕೇರಿಯಲ್ಲಿ ಕವಿ ಹೆಸರಿನಲ್ಲಿ ಬಯಲು ರಂಗಮಂದಿರ ನಿರ್ಮಿಸಲು ಜಾಗ ನೀಡಬೇಕೆಂಬ ಟ್ರಸ್ಟಿನ ಅಧ್ಯಕ್ಷರ ಮನವಿಯನ್ನೂ ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ತರಲೆಂದು ಆಶಿಸೋಣ.

-ಸಿ. ಪಿ. ಸಿದ್ಧಾಶ್ರಮ, ವಿಜಯನಗರ, ಮೈಸೂರು

Tags:
error: Content is protected !!