೨೦೨೫ ಸಾಲಿನ ದಸರಾ ಉದ್ಘಾಟನೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರನ್ನು ಸರ್ಕಾರ ಪರಿಗಣಿಸಬಹುದಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ದೇವೇಗೌಡರು ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಕರ್ನಾಟಕದಿಂದ ಮೊದಲ ಪ್ರಧಾನಿಯಾಗಿ ಉತ್ತಮ ಆಡಳಿತ ನಡೆಸಿದ ಖ್ಯಾತಿಗೂ ಪಾತ್ರರಾಗಿದ್ದಾರೆ. ಹಿರಿಯ ಮುತ್ಸದ್ದಿ ರಾಜಕಾರಣಿಯಾಗಿರುವ ದೇವೇಗೌಡರ ಸೇವಾ ಹಿರಿತನವನ್ನು ರಾಜ್ಯ ಸರ್ಕಾರ ಪರಿಗಣಿಸುವ ಮೂಲಕ ಅವರಿಗೆ ನಾಡ ಹಬ್ಬ ದಸರಾ ಉದ್ಘಾಟನೆಯ ಗೌರವವನ್ನು ನೀಡುವುದು ಅಗತ್ಯವಾಗಿದೆ.
–ಸಿದ್ದಲಿಂಗೇಗೌಡ ಹೈರಿಗೆ, ಎಚ್. ಡಿ. ಕೋಟೆ ತಾ



