ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದು, ರೈತರು ಹಾಗೂ ಜನತೆ ಸಂತೃಪ್ತರಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಎಷ್ಟು ಬೇಕಾದರೂ ಹಣವನ್ನು ನೀಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿರುವುದು ಶ್ಲಾಘನೀಯ.
ದಸರಾವನ್ನು ವಿಜೃಂಭಣೆಯಿಂದ ಆಚರಿಸು ವುದರ ಜೊತೆಗೆ ಎಲ್ಲೂ ಹಣದ ದುರುಪಯೋಗ ಆಗದ ರೀತಿಯಲ್ಲಿ ಪ್ರತಿಯೊಂದು ರೂಪಾಯಿಯೂ ಸದ್ವಿನಿಯೋಗವಾಗುವತ್ತ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿಗಳು ಅಽಕಾರಿ ವರ್ಗದವರಿಗೆ ಎಚ್ಚರಿಕೆ ನೀಡಿರುವುದು ಒಳ್ಳೆಯದು. ಕೊನೆ ಗಳಿಗೆಯಲ್ಲಿ ರಸ್ತೆ ಮತ್ತು ಗುಂಡಿಗಳನ್ನು ಮುಚ್ಚುವ ಬದಲು ಈಗಿನಿಂದಲೇ ಕಾಮಗಾರಿ ಕೈಗೊಳ್ಳವುದು ಉತ್ತಮ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





