ಕನಕದಾಸನಗರ ಜೆ.ಬ್ಲಾಕ್, ೧೩ನೇ ಬಿ ಮುಖ್ಯ ರಸ್ತೆಯಲ್ಲಿ ಮಹಾನಗರ ಪಾಲಿಕೆಯಿಂದ ನಿಯಮಿತವಾಗಿ ಪ್ರತಿ ದಿನ ಕಸ ಸಂಗ್ರಹಣೆ ಮಾಡದೇ ಇರುವುದರಿಂದ ಇಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ. ಕಸ ಸಂಗ್ರಹಣೆ ಮಾಡದೇ ಇರುವ ಬಗ್ಗೆ ಪಾಲಿಕೆ ದೂರು ಸಂಖ್ಯೆಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಪಾಲಿಕೆಯಿಂದ ಪ್ರತಿದಿನ ಕಸ ಸಂಗ್ರಹಣೆ ಮಾಡದೇ ಇರುವುದರಿಂದ ಕೆಲವರು ಕಸವನ್ನು ಖಾಲಿ ನಿವೇಶನ ದಲ್ಲಿ ಎಸೆಯುತ್ತಾರೆ. ಇದು ಅನೈರ್ಮಲ್ಯಕ್ಕೆ ಕಾರಣವಾಗುತ್ತಿದೆ. ಮೈಸೂರು ಮಹಾ ನಗರ ಪಾಲಿಕೆ ಆಯುಕ್ತರು ಈ ಬಗ್ಗೆ ಗಮನ ಹರಿಸಿ ಪ್ರತಿದಿನ ಕಸ ಸಂಗ್ರಹಣೆ ಮಾಡುವ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.
–ಪ್ರಕಾಶ್ ಮುಳ್ಳೂರು, ಕನಕದಾಸ ನಗರ, ಮೈಸೂರು





