ಆಗಸ್ಟ್ 28ರಿಂದ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ.
ಪ್ಯಾರಾಲಿಂಪಿಕ್ಸ್‌ನ ಬಿಲ್ಲುಗಾರಿಕೆಯಲ್ಲಿ ಹರ್ವಿಂದರ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಚಿನ್ನದ ಪದಕ ಗೆದ್ದು, ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಪ್ಯಾರಾಲಿಂಪಿಕ್ಸ್‌ನ ಬಿಲ್ಲುಗಾರಿಕೆ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಮೊತ್ತ ಮೊದಲ ಚನದ ಪದಕ ಇದಾಗಿದೆ.
ಇನ್ನು ಪುರುಷರ ಎಫ್51 ಕ್ಲಬ್ ಥೋ ಸ್ಪರ್ಧೆಯಲ್ಲಿ ಧರಮ್ ಬೀರ್ ಮತ್ತು ಪ್ರಣವ್ ಸೂರ್ಮ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗೆದ್ದುಕೊಟ್ಟರು. ಕ್ರೀಡಾಕೂಟದ 7ನೇ ದಿನ ಪುರುಷರ ಎಫ್46 ವಿಭಾಗದ ಶಾಟ್ ಪುಟ್ ಸ್ಪರ್ಧೆಯಲ್ಲಿ ಸಚಿನ್ ಖಿಲಾರಿ ಬೆಳ್ಳಿ ಗಳಿಸಿದರು.
ಇನ್ನು ಹೈ ಜಂಪ್‌ನಲ್ಲಿ ನಿಶಾದ್ ಕುಮಾರ್ ಬೆಳ್ಳಿ, ಡಿಸ್ಕಸ್ ಎಸತೆದಲ್ಲಿ ಯೋಗೇಶ್ ಕಾಥುನಿಯಾ ಬೆಳ್ಳಿ, ಜಾವೆಲಿನ್ ತಾರೆ ಸುಮಿತ್ ಅಂತಿಲ್ ಚಿನ್ನ ಪಡೆದಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕರು, ಸಿನಿಮಾ ನಟ-ನಟಿಯರು, ಕ್ರೀಡಾಪಟುಗಳು ಅಭಿನಂದಿಸಿದರು. ಅಲ್ಲದೆ ಅನೇಕ ಉಡುಗರೆಗಳನ್ನೂ ನೀಡಿದ್ದರು. ಆದರೆ ಪ್ಯಾರಾಲಿಂಪಿಕ್ಸ್‌ನಲ್ಲಿ 24 ಪದಕಗಳನ್ನು ಕ್ರೀಡಾಪಟುಗಳು ಗೆದ್ದಿದ್ದರೂ ಈವರೆಗೂ ಅವರಿಗೆ ಸೂಕ್ತ ರೀತಿಯಲ್ಲಿ ಅಭಿನಂದನೆ ಸಲ್ಲಿಸುವುದಾಗಲಿ ಇತರೆ ಕ್ರೀಡಾಪಟುಗಳಿಗೆ ನೀಡುವಂತೆ ಪ್ಯಾರಾ ಕ್ರೀಡಾಪಟುಗಳಿಗೂ ಸೂಕ್ತ ಸ್ಥಾನಮಾನ ಕಲ್ಪಿಸುವುದಾಗಲಿ ಮಾಡಿಲ್ಲದಿರುವುದು ಬೇಸರದ ಸಂಗತಿ. ಈ ಕ್ರೀಡಾಪಟುಗಳನ್ನೂ ಗೌರವಿಸಬೇಕಾದದ್ದು ಸರ್ಕಾರದ ಕರ್ತವ್ಯ.
-ಎಸ್.ಮಹೇಶ್, ಅಂತರಸಂತೆ, ಎಚ್.ಡಿ.ಕೋಟೆ ತಾ.





