ನಂಜನಗೂಡಿನ ಸುಜಾತಪುರಂ ರೈಲ್ವೆ ನಿಲ್ದಾಣದ ಸಮೀಪ ನಿರ್ಮಿಸಲಾಗಿರುವ ಮೇಲ್ಲೇತುವೆ ಬಳಿ ಅಳವಡಿಸಿರುವ ನಾಮಫಲಕದಲ್ಲಿ ಕನ್ನಡ ಅಪಭ್ರಂಶವಾಗಿದೆ.
ಗುಂಡ್ಲುಪೇಟೆ ಮತ್ತು ಚಾಮರಾಜನಗರ ನಡುವೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಅಳವಡಿಸಿರುವ ನಾಮಫಲಕದಲ್ಲಿ ಗುಂಡ್ಲುಪೇಟೆ ಎಂಬುದರ ಬದಲಾಗಿ ‘ಗುಂಡ್ಲಪೇಟ್’ ಎಂತಲೂ ಚಾಮರಾಜನಗರ
ಎಂಬುದರ ಬದಲಾಗಿ “ಚಾಮಾರಾಜ ನಗರ’ ಎಂತಲೂ ತಪ್ಪಾಗಿ ಬರೆಯಲಾಗಿದೆ. ನಾಮಫಲಕ ಬರೆಯುವವರಿಗೆ ಸರಿಯಾಗಿ ಗೊತ್ತಿಲ್ಲ ಎಂದಾದರೆ ಸರಿಯಾಗಿ ತಿಳಿದುಕೊಂಡಿರುವವರಾದರೂ ಹೇಳಿ ಫಲಕದಲ್ಲಿ ಸರಿಯಾಗಿ ಬರೆಸಿ ಅಳವಡಿಸಬಹುದಿತ್ತಲ್ಲವೇ? ಹೆದ್ದಾರಿಯ ಫಲಕಗಳಲ್ಲಿಯೂ ಇಂತಹ ಲೋಪದೋಷಗಳು ಸಾಮಾನ್ಯವಾಗಿ ಹೋಗಿವೆ. ಇಂತಹ ಫಲಕಗಳನ್ನು ನೋಡನೋಡುತ್ತಲೇ ಓಡಾಡುವ ನಮಗೆ ಏನೂ ಅನ್ನಿಸುವುದೇ ಇಲ್ಲ. ಏಕೆಂದರೆ ನವೆಂಬರ್‌ಗೆ ಇನ್ನೂ ಮೂರ್ನಾಲ್ಕು ತಿಂಗಳಿದೆಯಲ್ಲ.
-ಮ.ಗು.ಬಸವಣ್ಣ, ಜೆಎಸ್ ಎಸ್ ಬಡಾವಣೆ, ಮೈಸೂರು.