ಮೈಸೂರಿನ ಜಗನ್ಮೋಹನ ಅರಮನೆಯ ಬಳಿಯಲ್ಲಿರುವ ಅವಿಲಾ ಕಾನ್ವೆಂಟ್ ಹತ್ತಿರದಲ್ಲಿಯೇ ಸ್ಥಳೀಯ
ನಿವಾಸಿಗಳು ಪ್ರತಿದಿನ ಕಸ ಎಸೆಯುತ್ತಿದ್ದು, ರಸ್ತೆ ತುಂಬೆಲ್ಲಾ ಕಸದ ದುರ್ವಾಸನೆ ಬರುತ್ತಿದೆ.
ನಾಯಿ-ದನಗಳು ಪ್ಲಾಸ್ಟಿಕ್ ಕವರ್‌ಗಳನ್ನು ಎಳೆದಾಡಿ ರಸ್ತೆಯ ತುಂಬೆಲ್ಲಾ ಚೆಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಿರುತ್ತವೆ. ಕಲಾ ಪ್ರೇಮಿಗಳು ಹಾಗೂ ವಿದೇಶಿಗರು ಜಗನ್ಮೋಹನ ಅರಮನೆಯನ್ನು ವೀಕ್ಷಿಸಲು
ನಿತ್ಯ ಭೇಟಿ ನೀಡುತ್ತಾರೆ. ಮೈಸೂರು ಪಾಲಿಕೆಯವರು ಎಚ್ಚೆತ್ತು ಕೂಡಲೇ ಕಸ ವಿಲೇವಾರಿ ಮಾಡಲು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
– ಆರ್.ಯಶಸ್, ಸಾಮಾಜಿಕ ಕಾರ್ಯಕರ್ತ, ಮೈಸೂರು.





