ಕೊಳ್ಳೇಗಾಲ ತಾಲ್ಲೂಕಿನ ಸಿಂಗಾನಲ್ಲೂರು ಗ್ರಾಮದಲ್ಲಿ ಹೋಟೆಲ್ ತ್ಯಾಜ್ಯ ಇತ್ಯಾದಿಗಳನ್ನು ಗ್ರಾಮದ ಆರೋಗ್ಯ ಕೇಂದ್ರದ ಎದುರು ಸುರಿಯಲಾಗುತ್ತಿದೆ. ಗ್ರಾಮ ಪಂಚಾಯಿತಿ ಕಚೇರಿಗೆ ಸರ್ಕಾರದಿಂದ ಕಸ ಸಾಗಣೆ ವಾಹನ, ಪೌರ ಕಾರ್ಮಿಕರನ್ನು ಒದಗಿಸಲಾಗಿದೆ. ಆದರೆ ಅವರು ಸಮರ್ಪಕವಾಗಿ ಕಸವನ್ನು ತೆರವುಗೊಳಿಸದೇ ಇರುವುದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಯುಂಟಾಗಿದೆ.
ಜನರು ಆರೋಗ್ಯ ತಪಾಸಣೆಗಾಗಿ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಆದರೆ ಆರೋಗ್ಯ ಕೇಂದ್ರದ ಎದುರೇ ಕಸ ತೆರವುಗೊಳಿಸದೇ ಇರುವುದು ವಿಪರ್ಯಾಸ.
ಗ್ರಾಮ ಪಂಚಾಯಿತಿಯವರು ಕೂಡಲೇ ಆರೋಗ್ಯ ಕೇಂದ್ರದ ಎದುರು ಸುರಿದಿರುವ ಕಸವನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮುಂದಾಗಬೇಕಾಗಿದೆ.
– ಎನ್. ಪ್ರಸಾದ್, ಕೊಳ್ಳೇಗಾಲ





