ಮೈಸೂರಿನ ಜೆ.ಪಿ.ನಗರ ೨ನೇ ಹಂತದ, ೨೧ ನೇ ಮುಖ್ಯರಸ್ತೆ, ೧೯ ನೇ ತಿರುವಿನಲ್ಲಿ ಚರಂಡಿಯಲ್ಲಿ ಸಂಪೂರ್ಣವಾಗಿ ಹೂಳು ತುಂಬಿದ್ದು, ಜೋರಾಗಿ ಮಳೆ ಬಂದರೆ ನೀರು ರಸ್ತೆಯ ಮೇಲೆ ಹರಿದು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯದೇ ಇರುವುದರಿಂದ ಸೊಳ್ಳೆ, ನೊಣಗಳ ಹಾವಳಿ ಮಿತಿಮೀರಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿಎದುರಾಗಿದೆ. ಮೈಸೂರು ಮಹಾನಗರ ಪಾಲಿಕೆಯವರು ಕೂಡಲೇ ಚರಂಡಿಯಲ್ಲಿ ಸಂಗ್ರಹವಾಗಿರುವ ಹೂಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಾಗಿದೆ.
–ಜಿ.ಎಸ್.ಮೋಹನ್, ಜೆ.ಪಿ.ನಗರ, ಎರಡನೇ ಹಂತ, ಮೈಸೂರು





