ಮೈಸೂರಿನ ಶಾಂತಲಾ ಚಿತ್ರಮಂದಿರದ ಸಿಗ್ನಲ್ ಬಳಿಯಿರುವ ಬಸ್ ತಂಗುದಾಣವನ್ನು ಭಿಕ್ಷುಕರು ಅತಿಕ್ರಮಿಸಿಕೊಂಡಿದ್ದು ಗಂಟು ಮೂಟೆಗಳನ್ನು ಇಟ್ಟುಕೊಂಡು ಹಗಲಿನ ವೇಳೆಯಲ್ಲೇ ತಂಗುದಾಣದೊಳಗೆ ನಿದ್ರಿಸುತ್ತಿರುತ್ತಾರೆ.
ಇದನ್ನೂ ಓದಿ: ದೇಶದ ಭವಿಷ್ಯ ನಿರೂಪಿಸುವ ಹೊಣೆ ಶಿಕ್ಷಕರದ್ದು : ಶಾಸಕ ಜಿಟಿಡಿ
ಬಸ್ ತಂಗುದಾಣ ಗಬ್ಬು ನಾರುತ್ತಿದ್ದು, ಬಸ್‌ಗಾಗಿ ಕಾಯುವವರು ಇಲ್ಲಿ ಮೂಗು ಮುಚ್ಚಿಕೊಂಡೇ ಇರುವುದು ಅನಿವಾರ್ಯವಾಗಿದೆ. ಬಸ್ ತಂಗುದಾಣದ ಪಕ್ಕ ಇರುವ ಫುಟ್‌ಪಾತ್ ಮೇಲೆ ಮಾಂಸಾಹಾರಿ ಫಾಸ್ಟ್ ಫುಡ್ ಗಾಡಿಗಳಿದ್ದು, ಗ್ರಾಹಕರು ರಸ್ತೆ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ನಗರ ಸಾರಿಗೆ ಬಸ್‌ಗಳಿಗಾಗಿ ಕಾಯುವವರಿಗೆ ಸ್ಥಳವೇ ಇಲ್ಲದಂತಾಗಿದೆ. ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಬಸ್ ತಂಗುದಾಣದಲ್ಲಿ ಠಿಕಾಣಿ ಹೂಡಿರುವ ಭಿಕ್ಷುಕರನ್ನು ಕೂಡಲೇ ಭಿಕ್ಷುಕರ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಬೇಕು ಹಾಗೂ ಬಸ್ ತಂಗುದಾಣವನ್ನು ಸ್ವಚ್ಛವಾಗಿಡಬೇಕು. ಫುಟ್ ಪಾತ್ ಅತಿಕ್ರಮಿಸಿಕೊಂಡಿರುವ ಫಾಸ್ಟ್ ಫುಡ್‌ಗಾಡಿಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ಎನ್. ಕುಮಾರಸ್ವಾಮಿ, ಚಾಮರಾಜ ಮೊಹಲ್ಲಾ, ಮೈಸೂರು





