ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ (ಆಯಿಶ್) ವಜ್ರ ಮಹೋತ್ಸವದಲ್ಲಿ ಭಾಗಿಯಾಗಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು , ವಾಕ್ ಮತ್ತು ಶ್ರವಣ ಸಮಸ್ಯೆಯುಳ್ಳವರಿಗೆ ಅನೇಕ ನೂತನ ತಂತ್ರಜ್ಞಾನಗಳು ಈ ಕಾಲಘಟ್ಟದಲ್ಲಿ ಜಾರಿಗೆ ಬಂದಿವೆ. ಆದರೆ, ಇಂತಹ ತಂತ್ರಜ್ಞಾನಗಳನ್ನು ಸಾಮಾನ್ಯ ವರ್ಗದ ಜನತೆಗೂ ತಲುಪಿಸುವಲ್ಲಿ ಹೆಚ್ಚಿನ ಪರಿಶ್ರಮ ವಹಿಸುವ ಅಗತ್ಯವಿದೆ ಎಂದಿರುವುದು ಶ್ಲಾಘನೀಯ. ಶ್ರವಣ ಸಾಧನಗಳ ದೇಶಿ ಉತ್ಪಾದನೆಗೆ ಆತ್ಮ ನಿರ್ಭರ ಯೋಜನೆಯನ್ನು ಪರಿಗಣಿಸಿ ಉದ್ದೇಶಿತ ಗುರಿ ತಲುಪಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
ಅಲ್ಲದೇ ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ಸಂಸ್ಥೆಗೆ ಉದಾರವಾಗಿ ಭೂಮಿಯನ್ನು ದಾನ ನೀಡಿರುವುದನ್ನು ಸ್ಮರಿಸಿ. ಮೈಸೂರಿನ ಆಯಿಶ್ ದೇಶದ ಹೆಮ್ಮೆ ಎಂದು ಹೇಳಿರುವುದು ಸ್ವಾಗತಾರ್ಹ. ವರುಣ ಕ್ಷೇತ್ರದಲ್ಲಿ ಆಯಿಶ್ ಸಂಸ್ಥೆಯು ಕ್ಲಿನಿಕಲ್ ಮತ್ತು ಪುನರ್ವಸತಿ ಕಾರ್ಯವನ್ನು ಇನ್ನಷ್ಟು ವಿಸ್ತರಿಸಲು ಅನುಕೂಲವಾಗುವಂತೆ ೧೦ ಎಕರೆ ಭೂಮಿಯನ್ನು ಉಚಿತವಾಗಿ ರಾಜ್ಯ ಸರ್ಕಾರ ನೀಡಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿರುವುದು ಮೆಚ್ಚುವಂತದ್ದು.
–ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





