Mysore
14
scattered clouds

Social Media

ಸೋಮವಾರ, 05 ಜನವರಿ 2026
Light
Dark

ಓದುಗರ ಪತ್ರ | ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಗಷ್ಟೆ ಸೀಮಿತವೇ?

‘ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಆದ್ಯತೆಯ ಮೇರೆಗೆ ಚರ್ಚೆ’ ಎಂಬ ಮಾತನ್ನು ಉತ್ತರ ಕರ್ನಾಟಕದ ಮಂದಿ ದಶಕಗಳಿಂದಲೂ ಕೇಳುತ್ತಿದ್ದಾರೆಯೇ ವಿನಾ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ.

ಇಲ್ಲಿಯವರೆಗೂ ನಡೆದ ಎಲ್ಲ ಅಧಿವೇಶನಗಳಲ್ಲಿಯೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗಳಾಗಿದೆ. ಆದರೆ ಅವುಗಳನ್ನು ಪರಿಹಾರಿಸುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸಿಲ್ಲ. ಪರಿಣಾಮ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಕೇವಲ ಚರ್ಚೆಗಳಲ್ಲಿಯೇ ಉಳಿದಿವೆ.

ಇನ್ನು ಅಧಿವೇಶನಗಳು ನಡೆಯುವಾಗ ಉತ್ತರ ಕರ್ನಾಟಕ ಭಾಗದ ಎಷ್ಟು ಮಂದಿ ಶಾಸಕರು ಅಽವೇಶನದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಗಮನಿಸಿದಾಗ ಬೇಸರವಾಗುತ್ತದೆ. ಮೊದಲು ಉತ್ತರ ಕರ್ನಾಟಕದ ಶಾಸಕ ರೆಲ್ಲರೂ ಅಽವೇಶನದಲ್ಲಿ ಭಾಗಿಯಾಗಬೇಕು. ಸಮಸ್ಯೆಗಳನ್ನು ಸರ್ಕಾರದ ಮುಂದಿಟ್ಟು ಪರಿಹಾರಕ್ಕಾಗಿ ಆಗ್ರಹಿಸಬೇಕು. ಆಗ ಮಾತ್ರ ಉತ್ತರ ಕರ್ನಾ ಟಕ ಭಾಗ ಅಭಿವೃದ್ಧಿಯಾಗಲು ಸಾಧ್ಯ. ಇನ್ನು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಚರ್ಚೆ ಕೇವಲ ಬೆಳಗಾವಿ ಅಽವೇಶನಕ್ಕೆ ಸೀಮಿತವಾಗಿದ್ದು, ಈ ಚರ್ಚೆ ಬೆಂಗಳೂರಿನ ಅಧಿವೇಶನದಲ್ಲೂ ನಡೆಯಲಿ.
-ರಮಾನಂದ ಶರ್ಮಾ, ಜೆ. ಪಿ. ನಗರ, ಬೆಂಗಳೂರು

 

Tags:
error: Content is protected !!