Mysore
24
overcast clouds

Social Media

ಬುಧವಾರ, 22 ಏಪ್ರಿಲ 2026
Light
Dark

ಓದುಗರ ಪತ್ರ | ವಿದ್ಯುತ್ ಅವಘಡದ ಬಗ್ಗೆ ಇರಲಿ ಎಚ್ಚರ

ಓದುಗರ ಪತ್ರ

ಎಲ್ಲೆಡೆ ಧಾರಾಕಾರ ಮಳೆ ಆಗುತ್ತಿದೆ. ಪರಿಣಾಮವಾಗಿ ಸಾರ್ವಜನಿಕರು ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸಾವು-ನೋವು-ನಷ್ಟ ಎಲ್ಲೆಡೆ ಉಂಟಾಗಿದೆ. ಇದರ ಜೊತೆಗೆ ಮಳೆ ಬಂದಾಗ ವಿದ್ಯುತ್ ಅನಾಹುತಗಳೂ ಸಂಭವಿಸುವುದು ಸಹಜ. ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸ ಬೇಕಿದೆ.

ವಿದ್ಯುತ್ ಕಂಬಗಳಿಗೆ ವೈಯರ್ ಕಟ್ಟಿ ಬಟ್ಟೆ ಒಣಗಿಸುವುದು ಅಪಾಯಕಾರಿ. ಮಳೆ-ಗಾಳಿ ಪರಿಣಾಮವಾಗಿ ವಿದ್ಯುತ್ ತಂತಿಗಳು ಮರದ ಮೇಲೆ, ರಸ್ತೆಗಳಲ್ಲಿ, ಮನೆಯ ಮೇಲೆ ಬೀಳಬಹುದು.

ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು, ಆಕಸ್ಮಿಕವಾಗಿ ಯಾರಾದರೂ ಅದನ್ನು ತುಳಿದರೆ ಅಥವಾ ಹಿಡಿದರೆ ಪ್ರಾಣಾಪಾಯವೇ ಉಂಟಾಗಬಹುದು.

ಜಮೀನು – ತೋಟಗಳಲ್ಲಿ ಪಂಪ್‌ಸೆಟ್ ಬಳಸುವಾಗ ಮಳೆ ಬಂದರೆ ರೈತರು ಎಚ್ಚರಿಕೆ ವಹಿಸುವುದು ಅಗತ್ಯ. ಆದ್ದರಿಂದ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಇದರ ಬಗ್ಗೆ ತಿಳಿವಳಿಕೆ ನೀಡಬೇಕು. ಮಳೆ ಬಂದಾಗ ಮನೆಯ ವಿದ್ಯುತ್ ಉಪಕರಣಗಳನ್ನು ಜಾಗ್ರತೆಯಿಂದ ಉಪಯೋಗಿಸಬೇಕು.

ಮುಖ್ಯವಾಗಿ ಸೆಸ್ಕ್ ಸಿಬ್ಬಂದಿ, ಅಧಿಕಾರಿಗಳು ಮಳೆ ಗಾಳಿ ಇದ್ದಾಗ ವಿದ್ಯುತ್ ಕಂಬಗಳನ್ನು ಸರಿಯಾಗಿ ಪರಿಶೀಲಿಸಬೇಕು. ಅದರಿಂದ ವಿದ್ಯುತ್ ಅವಘಡಗಳನ್ನು ನಿಯಂತ್ರಿಸಬಹುದು.

-ಎಂ. ಎಸ್. ಉಷಾ ಪ್ರಕಾಶ್, ಎಸ್‌ಬಿಎಂ ಕಾಲೋನಿ, ಮೈಸೂರು

Tags:
error: Content is protected !!