ಮುಡಿಪಾಗಿಟ್ಟಿರಿ ಇಡೀ ಬದುಕ
ನಾಡುನುಡಿ ಸೇವೆಗೆ!
ಕನ್ನಡದ ನೈಜ ಹೋರಾಟಗಾರ
ತಾಯ್ನುಡಿ ಮಾಧ್ಯಮದ ಪ್ರತಿಪಾದಕ!
ಹೋರಾಟ ಚಳವಳಿ ರೂಪಿಸಿ
ಕಾಪಾಡಿದಿರಿ ಕನ್ನಡದ ಹಿತ ಹಿರಿಮೆಯ!
ಸರಳತೆ ಸಜ್ಜನಿಕೆಯ ಸಾಕಾರ!
ಮಾದರಿ ನಿಮ್ಮ ಬದ್ಧತೆ ಪ್ರಾಮಾಣಿಕತೆ!
ಸವೆದು ಸಾರ್ಥಕವಾಯಿತು ಬಾಳು
ಕನ್ನಡದ ಸೇವೆಯಲಿ ಸುದರ್ಶನ!
ನಿಮಗಿದೋ ಪ್ರೀತಿಯ ನುಡಿನಮನ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರು





