Mysore
32
few clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ಓದುಗರ ಪತ್ರ | ಶಾಸಕರಿಗೆ ಎಆರ್‌ಕೆ ಮಾದರಿ

ಯಳಂದೂರು ತಾಲ್ಲೂಕಿನ ಗೌಡಹಳ್ಳಿ ಹೊಸ ಉಪ್ಪಾರ ಬಡಾವಣೆ ನಿರ್ಮಾಣಗೊಂಡು ಸುಮಾರು ೨೦ ವರ್ಷಗಳೇ ಕಳೆದಿದ್ದರೂ ಮೂಲ ಸೌಕರ್ಯಗಳಿಂದ ವಂಚಿತವಾಗಿತ್ತು. ಬೆರಳೆಣಿ ಯಷ್ಟು ವಿದ್ಯುತ್ ಕಂಬಗಳು, ರಸ್ತೆಗೆ ಕಲ್ಲು, ಮಣ್ಣು ಹಾಕಿದ್ದು ಬಿಟ್ಟರೆ ಬೇರೆ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಜನರು ಪರ ದಾಡುವಂತಾಗಿತ್ತು.

ಇಲ್ಲಿನ ನಿವಾಸಿಗಳು ಮೂಲ ಸೌಕರ್ಯ ಗಳನ್ನು ಕಲ್ಪಿಸುವಂತೆ ಒತ್ತಾಯಿಸಿದ ಬಳಿಕ ಅರೆಬರೆ ಒಳಚರಂಡಿ ಕಾಮಗಾರಿಗಳು ನಡೆದದ್ದು ಬಿಟ್ಟರೆ ಬೇರ‍್ಯಾವುದೇ ಕಾಮಗಾರಿಯೂ ಇಲ್ಲಿ ನಡೆದಿರಲಿಲ್ಲ. ಈ ಬಡಾವಣೆಯಲ್ಲಿ ಸಮರ್ಪಕ ಒಳಚರಂಡಿ, ರಸ್ತೆಗಳಿಲ್ಲದ ಪರಿಣಾಮ ಮಳೆಗಾಲ ಬಂತು ಎಂದರೆ ಸಾಕು ಬಡಾವಣೆಯ ನಿವಾಸಿಗಳ ಪಾಡು ಹೇಳತೀರದಾಗಿತ್ತು. ಈ ಸಮಸ್ಯೆಗಳ ಕುರಿತು ಕೊಳ್ಳೇಗಾಲದ ಶಾಸಕ ಎ. ಆರ್. ಕೃಷ್ಣಮೂರ್ತಿಯವರ ಬಳಿ ಹೇಳಿಕೊಂಡು, ಮೂಲ ಸೌಕರ್ಯ ಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಲಾಗಿತ್ತು, ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು, ನಾಲ್ಕೆ ದು ತಿಂಗಳಲ್ಲೇ ಹೊಸ ಉಪ್ಪಾರ ಬಡಾವಣೆಯ ಅಭಿವೃದ್ಧಿಗೆ ಒಂದು ಕೋಟಿ ರೂ. ಅನುದಾನ ನೀಡಿ ಬಡಾವಣೆಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಹೆಮ್ಮೆಯ ವಿಚಾರ.

ನಮ್ಮ ಮನವಿಗೆ ಸ್ಪಂದಿಸಿದ ಕೊಳ್ಳೇಗಾಲ ಶಾಸಕರಾದ ಎ. ಆರ್. ಕೃಷ್ಣಮೂರ್ತಿಯವರು ಅಭಿನಂದನಾರ್ಹರು. ಹಾಗೆಯೇ ಎಲ್ಲ ಕ್ಷೇತ್ರಗಳ ಶಾಸಕರೂ ಇವರಂತೆ ಸಾರ್ವಜನಿಕರಿಗೆ ಸ್ಪಂದಿಸುವಂತಾಗಬೇಕು. -ಗೌಡಹಳ್ಳಿ ಮಹೇಶ್, ಹೊಸ ಉಪ್ಪಾರ ಬಡಾವಣೆ, ಯಳಂದೂರು ತಾ.

Tags:
error: Content is protected !!