Mysore
17
broken clouds

Social Media

ಶುಕ್ರವಾರ, 06 ಫೆಬ್ರವರಿ 2026
Light
Dark

ಓದುಗರ ಪತ್ರ | ಸಾಹಿತ್ಯ ಸಮ್ಮೇಳನದ ಗೌರವಕ್ಕೆ ಧಕ್ಕೆಯಾಗದಿರಲಿ

ಓದುಗರ ಪತ್ರ

ಡಿ. ೨೦ರಿಂದ ಮೂರು ದಿನಗಳ ಕಾಲ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ, ಮದ್ಯ ಹಾಗೂ ತಂಬಾಕು ಮಾರಾಟವನ್ನು ನಿಷೇಽ ಸಿರುವ ಬಗ್ಗೆ ಪ್ರಶ್ನಿಸಿರುವ ಕೆಲವರು ಬಾಡೂಟ ಏಕಿಲ್ಲ? ಎಂದು ಕೇಳಿದ್ದಾರೆ.

ಈ ಬಗ್ಗೆ ಹೋರಾಟವೊಂದು ಪ್ರಾರಂಭ ವಾಗಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟವನ್ನೂ ನೀಡುವಂತೆ ಮಂಡ್ಯ ಜಿಲ್ಲಾ ಽಕಾರಿಗೆ ಕೆಲವು ಸಂಘಟನೆಗಳು ಮನವಿ ಮಾಡಿವೆ. ಇದು ಸಮಂಜಸವಲ್ಲ.

ಸಮ್ಮೇಳನಕ್ಕೆ ಬರುವವರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಇಲ್ಲಿ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಬಾಡೂಟ ಸೇವನೆ ಮಾಡಲು ಇದೇನು ಮದುವೆ ಅಥವಾ ಇನ್ನಿತರ ವೈಯಕ್ತಿಕ ಕಾರ್ಯಕ್ರಮಗಳ ಔತಣಕೂಟವಲ್ಲ. ಸಾಹಿತ್ಯ ಎಂಬುದು ಕೂಡ ಸಾತ್ವಿಕ ಆಹಾರದಂತೆಯೇ. ಇಲ್ಲಿ ಉತ್ತಮ ಚರ್ಚೆಗಳಿಗೆ ಅವಕಾಶ ನೀಡಬೇಕೇ ವಿನಾ ಸಾಹಿತ್ಯ ಸಮ್ಮೇಳನ ಬಾಡೂಟದ ಅಡ್ಡೆಯಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಸಸ್ಯಾಹಾರ ಎಲ್ಲರೂ ಸೇವಿಸುವ ಆಹಾರವಾಗಿದ್ದು, ಎಲ್ಲ ಸಾರ್ವಜನಿಕ ಸಮ್ಮೇಳನಗಳು, ಕಾರ್ಯಕ್ರಮಗಳಲ್ಲಿಯೂ ಸಸ್ಯಾಹಾರವನ್ನೇ ನೀಡಲಾಗುತ್ತಿದೆ. ಆದ್ದರಿಂದ ಜಿಲ್ಲಾಽಕಾರಿಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಲಿ.

-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು.

 

Tags:
error: Content is protected !!